ವಿಟ್ಲ ಠಾಣೆಯಲ್ಲಿ ನಡೆದ ಶಾಂತಿಸಭೆಯಲ್ಲಿ ಪೂಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ ಮಾತನಾಡಿದರು. ಪೊಲೀಸ್ ಉಪ ನಿರೀಕ್ಷಕ ರಾಮಕೃಷ್ಣ ಮೊದಲಾದವರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ಬಲವಂತದ ದೇಣಿಗೆ ಸಂಗ್ರಹ ಸಲ್ಲ POLICE

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಗಣೇಶೋತ್ಸವ ಶಾಂತಿಸಭೆಯಲ್ಲಿ ಪ್ರಕಾಶ್ ದೇವಾಡಿಗ ಎಚ್ಚರಿಕೆ
ವಿಟ್ಲ: ಬ್ರಿಟಿಷರು ಜನರನ್ನು ಗುಂಪು ಸೇರಲು ಬಿಡುವುದಿಲ್ಲ ಎಂಬ ಕಾರಣಕ್ಕೆ ಪ್ರಾರಂಭವಾದ ಗಣೇಶೋತ್ಸವ ಸ್ವಾತಂತ್ರ್ಯ ಬಂದ ಬಳಿಕವೂ ಆಚರಣೆ ಮುಂದುವರಿದಿದೆ. ಯಾರಿಗೂ ತೊಂದರೆ ಯಾಗದ ರೀತಿಯಲ್ಲಿ ಹಬ್ಬವನ್ನು ಆಚರಿಸಬೇಕು. ಸಾರ್ವಜನಿಕರಿಂದ ಹಾಗೂ ವಾಹನ ಮಾಲೀಕರಿಂದ ಬಲವಂತವಾಗಿ ಚಂದಾ ಅಥವಾ ದೇಣಿಗೆ ಸಂಗ್ರಹಿಸಬಾರದು. ಧ್ವನಿವರ್ಧಕಗಳ ಬಳಕೆಯನ್ನು ರಾತ್ರಿ ೧೦ರಿಂದ ಮರುದಿನ ಬೆಳಗ್ಗೆ ೬ರವರೆಗೆ ನಿರ್ಬಂಽಸಲಾಗಿದೆ ಎಂದು ವಿಟ್ಲ ಠಾಣೆ ನಿರೀಕ್ಷಕ ಪ್ರಕಾಶ್ ದೇವಾಡಿಗ ಹೇಳಿದರು.
ವಿಟ್ಲ ಪೊಲೀಸ್ ಠಾಣೆ ಸಭಾಂಗಣದಲ್ಲಿ ಗಣೇಶೋತ್ಸವ ಅಂಗವಾಗಿ ನಡೆದ ಶಾಂತಿಸಭೆಯಲ್ಲಿ ಮಾತನಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಸಂಘಗಳು ಸ್ಥಳೀಯಾಡಳಿತ, ಕೆಪಿಟಿಸಿಎಲ್, ಅಗ್ನಿಶಾಮಕ ಇಲಾಖೆ ಹಾಗೂ ಸ್ಥಳೀಯ ಪೊಲೀಸ್ ಇಲಾಖೆಯಿಂದ ಪೂರ್ವಾನುಮತಿ ಪಡೆಯಬೇಕು. ಗಣೇಶ ಮೂರ್ತಿಗಳ ವಿಸರ್ಜನೆ ದಿನಾಂಕ ಹಾಗೂ ಸಾರ್ವಜನಿಕ ಮೆರವಣಿಗೆ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ವಿಸರ್ಜನೆ ಸಂದರ್ಭ ಈಜು ಗೊತ್ತಿದ್ದವರು ಮಾತ್ರ ನೀರಿಗೆ ಇಳಿಯಬೇಕು ಎಂದರು.
ಡಿಜೆಗೆ ಯಾವುದೇ ಕಾರಣಕ್ಕೂ ಅನುಮತಿಯಿಲ್ಲ. ಕಾರ್ಯಕ್ರಮಗಳನ್ನು ನಿಗದಿತ ಸಮಯಕ್ಕೆ ಮುಗಿಸಲು ಹೆಚ್ಚಿನ ಒತ್ತು ನೀಡಬೇಕು. ಪ್ರಚೋದನಕಾರಿ ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮಗಳ ಬಗ್ಗೆ ಇಲಾಖೆ ನಿಗಾ ಇಡಲಿದೆ ಎಂದರು.
ಪೊಲೀಸ್ ಉಪ ನಿರೀಕ್ಷಕ ರಾಮಕೃಷ್ಣ ಉಪಸ್ಥಿತರಿದ್ದರು.