ಡೆರಿಕ್ಸ್ ಪಿಂಟೋ, ಪ್ರಸನ್ನ ರಾವ್ ಬೋಳೂರು, ಆರನ್ ರೀವ್ ಮೆಂಡನ್ಸ್, ಲಿಯೋರಾ ಜಿಯಾನ ಕರ್ವಲೋ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಡಾ. ರಜನೀಶ್ ಸೊರಕೆ, ಯು.ಕೆ. ಖಾಲಿದ್, ಪ್ರೊ. ರಾಜಾರಾಮ ರಾವ್ ಇದ್ದರು.
- ಎಸ್.ಸಿ.ಎಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ರಜನೀಶ್ ಸೊರಕೆ
- ದ.ಕ. ಜಿಲ್ಲಾಮಟ್ಟದ ಚೆಸ್ ಟೂರ್ನಮೆಂಟ್
ಮಂಗಳೂರು: ಕ್ರೀಡಾಕೂಟಗಳು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತದೆ. ಮೈಂಡ್ ಗೇಮ್ ಎಂದು ಕರೆಯುವ ಚೆಸ್ ಆಟದಿಂದ ತಾಳ್ಮೆ ವೃದ್ಧಿಸುತ್ತದೆ ಎಂದು ಎಸ್.ಸಿ.ಎಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ಅಧ್ಯಕ್ಷ ಡಾ. ರಜನೀಶ್ ಸೊರಕೆ ಅವರು ಹೇಳಿದರು.
ಎಸ್.ಸಿ.ಎಸ್ ಶಿಕ್ಷಣ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಡೆರಿಕ್ಸ್ ಚೆಸ್ ಶಾಲೆಯ ಸಹಯೋಗದಲ್ಲಿ ಉರ್ವದ ಎಸ್.ಸಿ.ಎಸ್ ಪಿ.ಯು. ಕಾಲೇಜಿನಲ್ಲಿ ಭಾನುವಾರ ನಡೆದ ದ.ಕ. ಜಿಲ್ಲಾಮಟ್ಟದ ಯು-14, 16 ಮತ್ತು ಯು-18 ಚೆಸ್ ಟೂರ್ನಮೆಂಟ್ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂತಹ ಕೂಟಗಳ ಆಯೋಜನೆಯ ಮೂಲಕ ಮಕ್ಕಳಲ್ಲಿರುವ ಸುಪ್ತ ಪ್ರತಿಭೆಗಳನ್ನು ಹೊರಗೆ ತರಲು ಸಾಧ್ಯವಾಗುತ್ತದೆ. ಶಿಕ್ಷಕರು ಮತ್ತು ಪೋಷಕರು ಮಕ್ಕಳ ಹಂತದಲ್ಲಿಯೇ ಪ್ರತಿಭೆಯನ್ನು ಗುರುತಿಸಬೇಕಿದೆ. ಈ ಮೂಲಕ ಅವರನ್ನು ಪ್ರೋತ್ಸಾಹಿಸಿ ಪಠ್ಯೇತರ ಚಟುವಟಿಕೆಯಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದು ಡಾ. ರಜನೀಶ್ ಹೇಳಿದರು.
ಡೆರಿಕ್ಸ್ ಚೆಸ್ ಶಾಲೆಯ ಪಾಲುದಾರ ಡೆರಿಕ್ಸ್ ಪಿಂಟೋ ಮುಖ್ಯ ಅತಿಥಿಯಾಗಿದ್ದರು. ಎಸ್.ಸಿ.ಎಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್‌ನ ಆಡಳಿತಾಧಿಕಾರಿ ಯು.ಕೆ. ಖಾಲಿದ್, ಎಸ್.ಸಿ.ಎಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಾರಾಮ ರಾವ್, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಹಾರ್ದಿಕ್ ಪಿ. ಚೌಹಾಣ್, ಎಸ್.ಸಿ.ಎಸ್ ರಿವರ್‌ಸೈಡ್ ಇಂಟರ್‌ನೇಷನಲ್ ಅಕಾಡೆಮಿಯ ಪ್ರಾಂಶುಪಾಲ ಹೆಲೆನ್ ಲೋಬೋ, ಕೋ-ಆರ್ಡಿನೇಟರ್ ಆಂಡ್ರೊ ಪೌಲ್ ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಡೆರಿಕ್ಸ್ ಪಿಂಟೋ, ಪ್ರಸನ್ನ ರಾವ್ ಬೋಳೂರು, ಆರನ್ ರೀವ್ ಮೆಂಡನ್ಸ್, ಲಿಯೋರಾ ಜಿಯಾನ ಕರ್ವಲೋ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಉಪನ್ಯಾಸಕರಾದ ಚೈತ್ರಾ ಮತ್ತು ಕು. ರೋಶನಿ ಕಾರ್ಯಕ್ರಮ ನಿರೂಪಿಸಿದರು.