ಮಂಗಳೂರು: ರಾಜ್ಯದ ಪ್ರತಿಷ್ಠಿತ ಮೃಗಾಲಯ ಮಂಗಳೂರಿನ ಪಿಲಿಕುಳ ಜೈವಿಕ ಉದ್ಯಾನವನದ ಅಧೀನದ ಮೃಗಾಲಯದೊಳಗಿರುವ ಕೃಷ್ಣಮೃಗ ಮಂಗಳವಾರ ರಾತ್ರಿ ಮೃತಪಟ್ಟಿದ್ದು, ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಅಳಿವಿನಂಚಿನಲ್ಲಿರುವ ಗ್ರೇಟ್ ಇಂಡಿಯನ್ ಬಸ್ಟರ್ಡ್‌ಗೆ ನೆಲೆಯಾಗಿರುವ ರಾಣೇಬೆನ್ನೂರು ಕೃಷ್ಣಮೃಗ ಅಭಯಾರಣ್ಯದಿಂದ ಹಲವು ವರ್ಷದ ಹಿಂದೆ ತಂದಿರುವ ಈ ಕೃಷ್ಣಮೃಗವು ಕಳೆದ ಹಲವು ತಿಂಗಳಿನಿಂದ ಆರೋಗ್ಯವಾಗಿಯೇ ಇತ್ತು. ಇತ್ತೀಚೆಗೆ ಲೋಕಾಯುಕ್ತ ಪರಿಶೀಲನೆ ವೇಳೆ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 1024 ಜೀವವೈವಿದ್ಯಗಳಿದ್ದು, ಇದರ ಆರೋಗ್ಯ ಚಿಕಿತ್ಸೆ ನೋಡಿಕೊಳ್ಳಲು ಕೇವಲ ಬ್ಬ ಪ್ರಾಣಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿರುವುದು ಕಂಡುಬಂದಿತ್ತು.
ಪ್ರೀಝರ್‌ನಲ್ಲಿ ಕೃಷ್ಣಮೃಗ ಕಳೆಬರ
ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 120ಕ್ಕೂ ಹೆಚ್ಚು ವಿವಿಧ ಪ್ರಾಣಿ-ಪಕ್ಷಿಗಳಿವೆ. ಇದರಲ್ಲಿ 40 ಪ್ರಾಣಿಪಕ್ಷಿಗಳು ಅಳಿವಿನಂಚಿನಲ್ಲಿರುವ ಜೀವಿಗಳಾಗಿವೆ. ಯಾವುದೇ ಜೀವಿ ಇಲ್ಲಿ ಮೃತಪಟ್ಟರೂ 15 ಗಂಟೆಯ ಒಳಗೆ ಪೋಸ್ಟ್‌ಮಾರ್ಟಂ ಮಾಡುವುದು ಅನಿವಾರ್ಯ. ಪಿಲಿಕುಳದಲ್ಲಿ ಸತ್ತುಬಿದ್ದಿದ್ದ ಕೃಷ್ಣಮೃಗದ ಸಾವಿನ ಮೂಲ ಕಾರಣ ತಿಳಿಯಲು ನಿಯಮದಂತೆ ಪಿಲಿಕುಳ ಪ್ರಾಣಿಸಂಗ್ರಹಾಲಯದ ಮರಣೋತ್ತರ ಪರೀಕ್ಷಾ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಬೇಕು. ಆದರೆ ಮೃತ ಕೃಷ್ಣಮೃಗದ ಪೋಸ್ಟ್‌ಮಾರ್ಟಂ ಮಾಡದೆ ಸಂಗ್ರಹಾಲಯದ ಶೀಥಲೀಕರಣದಲ್ಲೇ ಬುಧವಾರ ರಾತ್ರಿವರೆಗೆ ಇಡಲಾಗಿದೆ. ದೇಶದ ಯಾವುದೇ ಪ್ರಾಣಿ ಸಂಗ್ರಹಾಲಯದ ಪ್ರಾಣಿಗಳು ಸಾವಿಗೀಡದಲಿ ಸೆಂಟ್ರಲ್ ಝೂ ಕೌನ್ಸಿಲ್ ಆಫ್ ಇಂಡಿಯಾಗೆ ಅಧಿಕೃತವಾಗಿ ಮಾಹಿತಿ ನೀಡುವುದು ಜವಾಬ್ದಾರಿ. ಆದರೆ ಬುಧವಾರ ಪಿಲಿಕುಳದಲ್ಲಿ ಕೃಷ್ಣಮೃಗ ಸಾವಿಗೀಡಗಿದ್ದರೂ ಸಿಝಡ್‌ಸಿಐ ಗೆ ಮಾಹಿತಿ ಇಲ್ಲ, ದ.ಕ ಜಿಲ್ಲಾಡಳಿತಕ್ಕೂ ಮಾಹಿತಿ ಇಲ್ಲ.
ವೈದ್ಯರ ನಿರ್ಲಕ್ಷೃದಿಂದ ಕೃಷ್ಣಮೃಗ ಸಾವು
ಲೋಕಾಯುಕ್ತರ ತನಿಖಾ ವರದಿಯಂತೆ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ 2021ರಿಂದ 2024ರ ವರೆಗೆ 100ಕ್ಕೂ ಅಧಿಕ ಪ್ರಾಣಿ ಪಕ್ಷಿಗಳು ಸಾವಿಗೀಡಗಿದ್ದು, ಇದಕ್ಕೆ ಮೂಲ ಕಾರಣ ವೈದ್ಯರ ನಿಲಕ್ಷೃ. ಬುಧವಾರ ಮೃತಪಟ್ಟ ಕೃಷ್ಣಮೃಗದ ಸಾವಿಗೂ ವೈದ್ಯರ ನಿರ್ಲಕ್ಷೃ ಎಂಬ ಆರೋಪ ಕೇಳಿಬರುತ್ತಿದೆ. ಇಲ್ಲಿನ ಎಕ್ಸ್‌ರೇ ಹಾಗೂ ಅಲ್ಟ್ರಾಸೌಂಡ್ ಮೆಶೀನ್‌ಗಳು ದುರಸ್ತಿಯಾಗದೆ 3 ವರ್ಷಗಳಿಂದ ಬಳಕೆಯಲ್ಲಿಲ್ಲ. ಪ್ರಾಣಿಗಳಿಗೆ ಆಹಾರ ಪೂರೈಕೆ ಮಾಡುವ ಟೈಂಡರ್ ಕೈ ತಪ್ಪಿದ ಪರಿಣಾಮ ಪ್ರಾಣಿಗಳಿಗೆ ವಿಷಾ ಪ್ರಾಶನ ಮಾಡುವಂತೆ ಆಮಿಷ ಈಡಿದ ಬಗ್ಗೆ ಕಾವೂರು ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ಕೂಡ ದಾಖಲಾಗಿತ್ತು. ಕೃಷ್ಣಮೃಗ ಸಾವಿಗೆ ವಿಷ ಆಹಾರ ಪೂರೈಕೆ, ವಿಷ ಪ್ರಾಶನವೂ ಸಾಧ್ಯತೆ ಇದೆ. ಆದರೆ ಮೃತ ಕೃಷ್ಣಮೃಗದ ಮರಣೋತ್ತರ ಪರೀಕ್ಷೆ ನಡೆಸದೆ ವೈದ್ಯರು ನಿರ್ಲಕ್ಷೃವಹಿಸಿರುವುದೂ ಕಂಡುಬಂದಿದೆ.