Mangalore University 
ದಕ್ಷಿಣ ಕನ್ನಡ

ಪದವಿ ಪ್ರಾಧ್ಯಾಪಕರಿಗೆ ಪಿಎಚ್‌ಡಿ ಗೈಡ್‌ಶಿಪ್!, ಮಂಗಳೂರು ವಿವಿ ವ್ಯಾಪ್ತಿ ಖಾಯಂ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವರಿಗೆ ಅರ್ಹತೆ, ರಾಜ್ಯಪಾಲರ ಅನುಮೋದನೆ ಪಡೆದು ಜಾರಿಗೊಳಿಸಲು ಸಿದ್ದತೆ

ಮಂಗಳೂರು: ನೀವುಪದವಿ ಕಾಲೇಜಿನಲ್ಲಿ 10ವರ್ಷಉಪನ್ಯಾಸ ವೃತ್ತಿ ನಿರ್ವಹಿಸಿದ್ದೀರಾ?ನಿಮಗಿದೋಶುಭ ಸುದ್ದಿ....!ಮಂಗಳೂರುವಿಶ್ವವಿದ್ಯಾನಿಲಯ ವ್ಯಾಪ್ತಿಗೆಬರುವ ಪದವಿ ಕಾಲೇಜುಗಳ ಸಹಾಯಕ,ಸಹಪ್ರಾಧ್ಯಾಪಕರಿಗೆ ಇನ್ನು ಮುಂದೆಪಿಎಚ್ ಡಿ ಮಾರ್ಗದರ್ಶಕ ಮಾನ್ಯತೆಲಭಿಸಲಿದೆ.

ವಿಶ್ವವಿದ್ಯಾನಿಲಯದಘಟಕ/ಸಂಯೋಜಿತಕಾಲೇಜುಗಳಲ್ಲಿ ಖಾಯಂ ನೆಲೆಯಲ್ಲಿಕರ್ತವ್ಯ ನಿರ್ವಹಿಸುತ್ತಿರುವ10ವರ್ಷಗಳಬೋಧನಾ ಅನುಭವ ಇರುವ ಹಿರಿಯಅಧ್ಯಾಪಕರುಗಳು ಸಂಶೋಧನಾಮಾರ್ಗದರ್ಶಕರಾಗಿ ಪರಿಗಣಿಸಲುಜಂಟಿ ನಿರ್ದೇಶಕರ ಸಹಕಾರದೊಂದಿಗೆಅಂಕಿ ಅಂಶಗಳನ್ನು ಸಂಗ್ರಹಿಸಲುವಿವಿ ನಿರ್ಧರಿಸಿದೆ.ವಿಸ್ತೃತಪ್ರಸ್ತಾವನೆ ಸಿದ್ದಪಡಿಸಿರಾಜ್ಯಪಾಲರ ಅನುಮೋದನೆ ಪಡೆಯಲುವಿವಿ ಉದ್ದೇಶಿಸಿದೆ.

ಪಿಎಚ್ಡಿ ಮಾರ್ಗದರ್ಶಕರಾಗಿ ಮಾನ್ಯತೆ

ನಿಯಮಪ್ರಕಾರ ಪ್ರೊಫೆಸರ್ 8,ಅಸೋಸಿಯೇಟ್ಪ್ರೊಫೆಸರ್ 6ಹಾಗೂಅಸಿಸ್ಟೆಂಟ್ ಪ್ರೊಫೆಸರ್ 4ಮಂದಿಗೆಗೈಡ್ ಆಗಲು ಅವಕಾಶವಿದೆ.ವಿವಿವ್ಯಾಪ್ತಿಯಲ್ಲಿ ಪಿಎಚ್ ಡಿ ಸೆಂಟರ್ಆಗಿ ಈಗಾಗಲೇ ವಿವಿಧ ಕಾಲೇಜುಗಳನ್ನುನೇಮಕ ಮಾಡಲಾಗಿದೆ.ಅಲ್ಲಿಸಂಶೋಧನೆಗೆ ಬೇಕಾದ ಪೂರಕ ವ್ಯವಸ್ಥೆಹಾಗೂ ಮಾರ್ಗದರ್ಶಕರೂ ಇರುತ್ತಾರೆ.ಅದರಮೂಲಕ ಪಿಎಚ್ ಡಿ ಪಡೆಯಲು ಅವಕಾಶಇದೆ.ಅದನ್ನುಹೊರತುಪಡಿಸಿ ಇದೀಗ ಎಲ್ಲಾ ಕಾಲೇಜಿನಹಿರಿಯ ಅರ್ಹ ಅಧ್ಯಾಪಕರನ್ನುಪಿಎಚ್ ಡಿ ಮಾರ್ಗದರ್ಶಕರಾಗಿಮಾನ್ಯತೆ ನೀಡುವುದು ಇದೀಗ ಹೊಸತೀರ್ಮಾನ.

--------------

ಯುಜಿಸಿನಿಯಮ ಅಡ್ಡಿ ಸಾಧ್ಯತೆ

ಮಂಗಳೂರುವಿವಿಯಲ್ಲಿ ಬಹುತೇಕ ಪ್ರಾಧ್ಯಾಪಕರುನಿವೃತ್ತಿಯಾಗುತ್ತಿದ್ದಾರೆ.ಹಿರಿಯಉಪನ್ಯಾಸಕರ ಸಂಖ್ಯೆಯೂ ಈಗಕಡಿಮೆಯಾಗಿದೆ.ಹೆಚ್ಚಿನವರುನಿವೃತ್ತಿಯಾದ ಕಾರಣದಿಂದ ಗೈಡ್‌ನವರುಇಲ್ಲದೆ ಪಿಎಚ್‌ಡಿ ಪಡೆಯಲುವಿದ್ಯಾರ್ಥಿಗಳಿಗೆ ಸಮಸ್ಯೆಆಗುತ್ತಿದೆ.ಈನೆಲೆಯಲ್ಲಿ ಸೂಕ್ತ ಯೋಜನೆಹಾಕಿಕೊಳ್ಳುವುದು ಅಗತ್ಯ ಎಂಬುದನ್ನುವಿವಿ ಗಂಭೀರವಾಗಿ ಪರಿಗಣಿಸಿದೆ.ಹೀಗಾಗಿವಿವಿಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವವಿನಿಯಮಕ್ಕೆ ಪೂರಕ ಮಾರ್ಗಸೂಚಿಯನ್ನುತಯಾರಿಸಿ ಸೂಕ್ತ ಕ್ರಮ ಕೈಗೊಳ್ಳಬಹುದುಎಂಬುದನ್ನು ವಿವಿಯಲ್ಲಿ ಇತ್ತೀಚೆಗೆನಡೆದ ಸಿಂಡಿಕೇಟ್ ಸಭೆಯಲ್ಲಿತೀರ್ಮಾನಿಸಲಾಗಿದೆ.ಆದರೆಈ ಯೋಜನೆಗೆ ಯುಜಿಸಿ ನಿಯಮಅಡ್ಡಿಯಾಗುತ್ತಿದೆ.ಪಿಎಚ್ಡಿ ಮಾರ್ಗದರ್ಶಕರಾಗಲು ಮಾರ್ಗದರ್ಶಕಸಂಶೋಧನಾ ಕೇಂದ್ರದಲ್ಲಿಕಾರ್ಯನಿರ್ವಹಿಸಬೇಕು ಎಂಬ ನಿಯಮದಜತೆಗೆ ಇನ್ನೂ ಹಲವಾರು ನಿಯಮಗಳನ್ನುಯುಜಿಸಿ ನೀಡಿದೆ.ಆದರೆಮಂಗಳೂರು ವಿವಿ ವ್ಯಾಪ್ತಿಗೆಬರುವ ಬಹುತೇಕ ಪದವಿ ಕಾಲೇಜುಗಳಲ್ಲಿಸಂಶೋಧನಾ ಕೇಂದ್ರವಾಗಿ ಮಾರ್ಪಟ್ಟಿಲ್ಲ.

---------------

ರಾಜ್ಯಪಾಲರಅನುಮೋದನೆ ಬಳಿಕ ಜಾರಿ

2024-25ರಲ್ಲಿ248ಸೀಟ್ಗಳನ್ನು ಪಿಎಚ್ ಡಿಗಾಗಿನಿಗದಿಪಡಿಸಲಾಗಿದೆ.ಇದಕ್ಕಿಂತಲೂಅಧಿಕ ಮಂದಿ ಅರ್ಜಿ ಹಾಕಿದ್ದು,ಅಂತಿಮಲೆಕ್ಕ ಸದ್ಯ ಪ್ರಗತಿಯಲ್ಲಿದೆ.ಕೆಲವುವಿಭಾಗಕ್ಕೆ ಪಿಎಚ್ ಡಿ ನಿರೀಕ್ಷಿಸಿಅರ್ಜಿ ಸಲ್ಲಿಕೆ ಅಧಿಕವಿದೆ.ಗೈಡ್ಗಳ ಲಭ್ಯತೆ ಆಗ ಕೆಲವರಿಗೆ ಸಿಗುತ್ತಿಲ್ಲಎಂಬ ಮಾತು ಇದೆ.ಹೀಗಾಗಿಕಾಲೇಜಿನ ಅರ್ಹ ಹಿರಿಯ ಉಪನ್ಯಾಸಕರನ್ನುಗೈಡ್ ರೂಪದಲ್ಲಿ ಮಾನ್ಯತೆ ನೀಡಲುಅವಕಾಶ ಕಲ್ಪಿಸುವ ಬಗ್ಗೆ ವಿವಿಸಿಂಡಿಕೇಟ್ ನಲ್ಲಿ ಚರ್ಚೆ ಆಗಿದೆ.ಈಕುರಿತು ಪೂರಕವಾಗಿ ನಾವು ಹೆಜ್ಜೆಇಡಲಿದ್ದೇವೆ.ಈಬಗ್ಗೆ ರಾಜ್ಯಪಾಲರಿಂದ ಅನುಮೋದನೆಪಡೆದು ಅಂತಿಮ ತೀರ್ಮಾನ ಕೈಗೊಳ್ಳಲಾಗುವುದುಎಂದು ಮಂಗಳೂರು ವಿವಿ ಮಾಹಿತಿನೀಡಿದೆ.

--------------

ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಗೈಡ್ ಕೊರತೆ ಎದುರಾಗುತ್ತಿತ್ತು. ಹಲವು ಮಂದಿ ಆಸಕ್ತರು ಬಂದರೂ ಅವರಿಗೆ ಸರಿಯಾದ ಗೈಡ್ ಸಿಗದೆ ಪಿಎಚ್ ಡಿ ಮಾಡಲು ಸಾಧ್ಯವಾಗುತ್ತಿಲ್ಲ. ಜತೆಗೆ ಹಿರಿಯ ಅಧ್ಯಾಪಕರು ನಿವೃತ್ತಿಯಾಗುತ್ತಿರುವ ಕಾರಣದಿಂದ ಮುಂದೆ ಸಮಸ್ಯೆ ಇನ್ನಷ್ಟು ಕಾಡುವ ಅಪಾಯ ಇದೆ. ಇದಕ್ಕಾಗಿ ಪೂರ್ವಭಾವಿಯಾಗಿ ಇತರ ಕಾಲೇಜಿನ ಅರ್ಹ ಉಪನ್ಯಾಸಕರನ್ನೇ ಬಳಸಿಕೊಳ್ಳಲು ಸಾಧ್ಯವಾದರೆ ಮಕ್ಕಳಿಗೆ ಅನುಕೂಲವಾಗುತ್ತದೆ ಎಂಬ ಕಾರಣದಿಂದ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.