ರಾಜ್ಯ ಸರ್ಕಾರಿ ನೌಕರರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ ಭಾನುವಾರ ಜರುಗಿತು. ಸಿ.ಎಸ್. ಷಡಕ್ಷರಿ, ಎನ್.ಆರ್. ದಾಮೋದರ ಶರ್ಮಾ, ಮಲ್ಲಿಕಾರ್ಜುನ ಬಿ. ಬಳ್ಳಾರಿ, ಎಸ್. ಬಸವರಾಜು ಇದ್ದರು. 
ದಕ್ಷಿಣ ಕನ್ನಡ

ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿ

Chethan padubidri

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಕರೆ
ಮಂಗಳೂರು: ಹಲವಾರು ಸವಾಲು, ಸಮಸ್ಯೆ, ಒತ್ತಡಗಳ ನಡುವೆಯೂ ಸರ್ಕಾರಿ ನೌಕರರು ಕೆಲಸ ನಿರ್ವಹಿಸಬೇಕಾದ ಕಠಿಣ ಸ್ಥಿತಿ ಇದೆ. ಸರ್ಕಾರದ ವ್ಯವಸ್ಥೆ ಗೌರವಿಸಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ಭ್ರಷ್ಟಾಚಾರ ತೊಲಗಬೇಕು ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ಹೇಳಿದರು.
ಭಾನುವಾರ ಮಂಗಳೂರು ಮಣ್ಣಗುಡ್ಡೆಯ ಸಂಘನಿಕೇತನದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಸಂಘದ ವತಿಯಿಂದ ನಡೆದ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲೆಗಳ ರಾಜ್ಯ ಸರ್ಕಾರಿ ನೌಕರರ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಮಕ್ಕಳ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನೌಕರರಿಗೆ ಒಪಿಎಸ್ ಜಾರಿಗೆ ಕಾರ್ಯತತ್ಪರನಾಗಿದ್ದೇನೆ. ಸರ್ಕಾರದ ನಿರೀಕ್ಷೆಗೆ ತಕ್ಕಂತೆ ನಾವು ಕೆಲಸ ಮಾಡಬೇಕು. ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಾ ಸಮಾಜದಲ್ಲಿ ನಾವೇ ಬದಲಾವಣೆಯನ್ನು ತರಬೇಕು. ನಮ್ಮಿಂದಲೇ ಸುಧಾರಣೆ ಪ್ರಾರಂಭವಾಗಲಿ ಎಂದವರು ಆಶಿಸಿದರು.
ಶ್ರೀ ನವಾಕ್ಷರಿ ಬಾರ್ಕೂರಿನ ಧಾರ್ಮಿಕ ಚಿಂತಕ ಎನ್.ಆರ್. ದಾಮೋದರ ಶರ್ಮಾ ಸಂಪನ್ಮೂಲ ವ್ಯಕ್ತಿಯಾಗಿದ್ದರು. ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಬಿ. ಬಳ್ಳಾರಿ, ಪ್ರಧಾನ ಕಾರ್ಯದರ್ಶಿ ಎಸ್. ಬಸವರಾಜು, ಹಿರಿಯ ಉಪಾಧ್ಯಕ್ಷರುಗಳಾದ ಸುರೇಶ್‌ ಸಿ. ಶೇಡಶ್ಯಾಳ, ಆರ್. ಮೋಹನ್ ಕುಮಾರ್, ಸೋಮಶೇಖರಯ್ಯ, ಮೋಹನ್ ಕುಮಾರ್ ಎಲ್., ಕೊಡಗು ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಎಂ.ಸಿ., ಉಡುಪಿ, ದ.ಕ. ಮತ್ತು ಉಡುಪಿ ಜಿಲ್ಲೆಯ ಪದಾಧಿಕಾರಿಗಳಾದ ಲತೇಶ್ ಎ., ಸುರೇಶ್ ನಾಯ್ಕ, ಅಂಬರೀಶ್ ಯು.ಕೆ., ಸುಧೀರ್ ಎ., ಪದ್ಮನಾಭ ಜೋಗಿ, ಡಾ. ರಾಜೇಂದ್ರ ಕೆ., ದಯಾನಂದ ಬೆನ್ನೂರು, ಆನಂದ್ ಜತ್ತನ್, ಸಂದೀಪ್, ರಾಜೇಶ್ ಪಿ.ಡಿ., ಬಾಬು ಪಿ.ಎಂ., ಮೋಹನ್ ಪೆರಾಜೆ, ಸಮ್ಮೀ ಎಸ್.ಡಿ., ಜಯರಾಜ್ ಜೈನ್, ಡಾ. ದೊರೆಸ್ವಾಮಿ, ಡಾ. ನಿತಿನ್ ಪ್ರಭು, ಶಿವಪ್ರಸಾದ್ ಶೆಟ್ಟಿ, ವಿಮಲ್ ನೆಲ್ಯಾಡಿ, ಡಾ. ನಾಗೇಶ್, ರವಿ ಎಸ್. ಪೂಜಾರಿ, ಬಾಲಕೃಷ್ಣ, ಬಸವರಾಜು, ಶಿವಾನಂದ ಆಚಾರ್ಯ, ಶೇಖರ್ ಪೂಜಾರಿ, ಪ್ರದೀಪ್, ತಿಮ್ಮಯ್ಯ ಉಪಸ್ಥಿತರಿದ್ದರು.
ದ.ಕ. ಜಿಲ್ಲಾಧ್ಯಕ್ಷ ನವೀನ್ ಕುಮಾರ್ ಎಂ.ಎಸ್. ಸ್ವಾಗತಿಸಿದರು. ಮೋಹನ ಶಿರ್ಲಾಲು ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ನಿವೃತ್ತ ಅಧಿಕಾರಿಗಳನ್ನೂ ಸನ್ಮಾನಿಸಲಾಯಿತು.

ಬದುಕು ಎನ್ನುವುದು ಕಲ್ಲು ಮುಳ್ಳುಗಳ ಹಾದಿ. ಯಾವುದಕ್ಕೂ ಎದೆಗುಂದದೆ ಆತ್ಮವಿಶ್ವಾಸದಿಂದ ಕೆಲಸ ನಿರ್ವಹಿಸಿ. ಸ್ವಾಭಿಮಾನದ ಬದುಕಿನ ಮೂಲಕ ಸಮಾಜದ ಆಸ್ತಿಯಾಗಿರಿ.

— ಎನ್.ಆರ್. ದಾಮೋದರ ಶರ್ಮಾ, ಶ್ರೀ ನವಾಕ್ಷರಿ ಬಾರ್ಕೂರು