ಕಾಸರಗೋಡು ನಗರಸಭಾ ಕಡಪ್ಪುರ ಮತ್ಸ್ಯಭವನ ಮತಗಟ್ಟೆಯಲ್ಲಿ ಮತದಾರರ ಸರತಿಸಾಲು. 
ದಕ್ಷಿಣ ಕನ್ನಡ

ಕಾಸರಗೋಡಲ್ಲಿ ಶಾಂತಿಯುತ ಮತದಾನ

ಗಾಲಿಕುರ್ಚಿಯಿಲ್ಲದೆ ಎಂಡೋಪೀಡಿತರ ಪರದಾಟ

ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಕಾರ್ಯಾಚರಿಸುತ್ತಿದ್ದ ಎಣ್ಮಕಜೆ ಪಂಚಾಯಿತಿ ಆರನೇ ಪೆರ್ಲ ನಾರ್ತ್ ಬೂತಿನ ಮತಯಂತ್ರ ಮತದಾನ ಆರಂಭಗೊಂಡ ತಾಸುಗಳೊಳಗೆ ಸ್ಥಗಿತಗೊಂಡಿದೆ. ತಕ್ಷಣ ಕಾರ್ಯಪ್ರವೃತ್ತರಾದ ಸಿಬ್ಬಂದಿ ಮತಯಂತ್ರ ದುರಸ್ತಿ ನಡೆಸಿದ್ದು, ಐದು ನಿಮಿಷ ಕಾಲಾವಧಿಯೊಳಗೆ ಮತದಾನ ಮುಂದುವರಿಸಲಾಗಿದೆ. ಇದೇ ರೀತಿ ಮಾಯಿಪ್ಪಾಡಿಯ ಮತಗಟ್ಟೆಯೊಂದರಲ್ಲಿ ಮತಯಂತ್ರ ನಿಮಿಷಗಳ ಕಾಲ ಕೈಕೊಟ್ಟಿತ್ತು.

ವೀಲ್‌ಚೇರ್‌ಗಾಗಿ ಪರದಾಟ

ಹಸಿರು ಸಂಹಿತೆಯೊಂದಿಗೆ ಕಾರ್ಯಾಚರಿಸಿದ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲಾ ಮತಗಟ್ಟೆಯೊಂದನ್ನು ಬಾಳೆ ತೋರಣ ದೊಂದಿಗೆ ಬ್ಯಾನರ್ ಅಳವಡಿಸಿ ಅಲಂಕರಿಸಲಾಗಿತ್ತು.