ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಉಪ್ಪಳ ಟಕದ ವಾರ್ಷಿಕೋತ್ಸವದಲ್ಲಿ ಯೋಗೀಶ್‌ರಾವ್ ಚಿಗುರುಪಾದೆ ಅವರನ್ನು ಸನ್ಮಾನಿಸಲಾಯಿತು.  
ದಕ್ಷಿಣ ಕನ್ನಡ

ಅಶಕ್ತ ಕಲಾವಿದರಿಗೆ ಪಟ್ಲ ಫೌಂಡೇಶನ್ ಕಾಮಧೇನು : ಕೊಂಡೆವೂರು ಸ್ವಾಮೀಜಿ

ಸೌಮ್ಯ ಆರ್
ಕುಳೂರು ಶ್ರೀಹರಿ ಭಜನಾ ಮಂದಿರದ ವಠಾರದಲ್ಲಿ ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಉಪ್ಪಳ ಘಟಕ ವಾರ್ಷಿಕೋತ್ಸವದಲ್ಲಿ ಆಶೀರ್ವಚನ ನೀಡಿದರು.
ಉಪ್ಪಳ ಘಟಕ ಗೌರವಾಧ್ಯಕ್ಷ ಪಿ.ಆರ್. ಶೆಟ್ಟಿ ಪೊಯ್ಯೆಲು ಕುಳೂರು ಅಧ್ಯಕ್ಷತೆ ವಹಿಸಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಮುಖ್ಯ ಅತಿಥಿಯಾಗಿದ್ದರು.
ಗಡಿನಾಡಿನ ಪ್ರಸಂಗಕರ್ತ ಯೋಗೀಶ ರಾವ್ ಚಿಗುರುಪಾದೆ ಅವರನ್ನು ಸನ್ಮಾನಿಸಲಾಯಿತು.

ಕಳೆದ 10 ವರ್ಷಗಳಲ್ಲಿ ಪಟ್ಲ ಫೌಂಡೇಶನ್ ಸುಮಾರು ಎಂಟು ಕೋಟಿಗೂ ಮಿಕ್ಕಿ ಅಶಕ್ತ , ಬಡ ಕಲಾವಿದರಿಗೆ ಮನೆ, ಆರೋಗ್ಯ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಧನಸಹಾಯ ನೀಡಿದೆ. ಮೂರು ವರ್ಷಗಳಿಂದ ಯಕ್ಷ ಶಿಕ್ಷಣ ಯೋಜನೆಯಡಿ ಕರ್ನಾಟಕದ ಆಯ್ದ ಶಾಲೆಗಳಲ್ಲಿ ಉಚಿತ ಯಕ್ಷಗಾನ ತರಬೇತಿ ನೀಡುತ್ತಾ ಬಂದಿದೆ. ಸುಮಾರು ಎಂಟು ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಯಕ್ಷಗಾನ ಕಲಿಕೆಯಲ್ಲಿ ತೊಡಗಿಕೊಂಡಿದ್ದಾರೆ.