ಪಜಿರಡ್ಕ ಶ್ರೀ ಸದಾಶಿವೇಶ್ವರ ಕ್ಷೇತ್ರಕ್ಕೆ ಪುಷ್ಪರಥ ಹಾಗೂ ಧ್ವಜಸ್ತಂಭವನ್ನು ನೀಡಿದ ದಾನಿಗಳಾದ ಸುಕನ್ಯಾ ಮತ್ತು ಡಿ.ಜಯರಾಮ ರಾವ್ ದಂಪತಿಯನ್ನು ಗೌರವಿಸಲಾಯಿತು. ಪ್ರಮುಖರಾದ ಶರತ್‌ಕೃಷ್ಣ ಪಡುವೆಟ್ನಾಯ, ರಕ್ಷಿತ್ ಶಿವರಾಂ, ಸಂಪತ್ ಸುವರ್ಣ ಮೊದಲಾದವರಿದ್ದರು. 
ದಕ್ಷಿಣ ಕನ್ನಡ

ಧಾರ್ಮಿಕ ಕ್ಷೇತ್ರಗಳಲ್ಲಿ ರಾಜಕೀಯ ಸಲ್ಲ : ಕನ್ಯಾಡಿ ಶ್ರೀ

ಧಾರ್ಮಿಕ ಕ್ಷೇತ್ರಗಳಲ್ಲಿ ರಾಜಕೀಯ ಮಾಡದೆ ಸಹೋದರ ಭಾವದಿಂದ ಭಗವಂತನ ಸೇವೆಯಲ್ಲಿ ನಿರತರಾಗಬೇಕು. ಧರ್ಮದ ಕಾರ್ಯದಲ್ಲಿ ತಾರತಮ್ಯ ಸಲ್ಲದು ಎಂದು ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಂ ಮಠಾಧೀಶ ಮಹಾಮಂಡಲೇಶ್ವರ 1008 ಶ್ರೀ ಸ್ವಾಮಿ ಸದ್ಗುರು ಬ್ರಹ್ಮಾನಂದ ಸರಸ್ವತಿ ಮಹಾರಾಜ್ ಹೇಳಿದರು.
ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನ ಸಂಗಮ ಕ್ಷೇತ್ರದ ಧ್ವಜ ಪ್ರತಿಷ್ಠಾಪನಾ ಬ್ರಹ್ಮಕಲಶ ಮಹೋತ್ಸವ, ಪ್ರತಿಷ್ಠಾಪನಾ ದಿನಾಚರಣೆ, ವಾರ್ಷಿಕ ಜಾತ್ರೆ ರಥೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಆನುವಂಶಿಕ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡುವೆಟ್ನಾಯ ಮಾತನಾಡಿದರು.

ಎಲ್ಲಾ ಬೇಧವನ್ನು ಮೆಟ್ಟಿ ನಿಂತು ಎಲ್ಲರನ್ನೂ ಒಂದೇ ಭಾವನೆಯಿಂದ ಕಾಣುವುದೇ ಧಾರ್ಮಿಕ ಕ್ಷೇತ್ರ. ಪಜಿರಡ್ಕ ಮತ್ತು ಉಜಿರೆ ಕ್ಷೇತ್ರ ಬಂಗಾಡಿ ಸೀಮೆಯ ಪ್ರಧಾನ ದೇವಸ್ಥಾನವಾಗಿದ್ದು, ಕಾಲದ ಹೊಡೆತದಿಂದ ಹಿಂದಿನ ವೈಭವವನ್ನು ಕಳೆದುಕೊಂಡಿತು. ಇಂದು ಗತ ವೈಭವದ ದಿನಗಳನ್ನು ಪುನಃ ಕಾಣುವ ಭಾಗ್ಯ ಕಂಡು ಬರುತ್ತಿದೆ.