Death 
ದಕ್ಷಿಣ ಕನ್ನಡ

ಕಾಂಪ್ಲೆಕ್ಸ್‌ನಿಂದ ಬಿದ್ದು ಪೇಂಟರ್ ಸಾವು

ತಡರಾತ್ರಿ ಕಟ್ಟಡದ ಮೇಲಂತಸ್ತಿನಿಂದ ಆಯತಪ್ಪಿ ಕೆಳಗೆ ಬಿದ್ದ ಪರಿಣಾಮ ಮೃತ

ಮೂಡುಬಿದಿರೆ: ಪೇಟೆಯಲ್ಲಿರುವ ಕಾಂಪ್ಲೆಕ್ಸ್ ಕಟ್ಟಡದಿಂದ ಪೇಂಟರ್ ಬಿದ್ದು ಶುಕ್ರವಾರ ತಡರಾತ್ರಿ ಮೃತಪಟ್ಟಿದ್ದಾರೆ. ಮೃತರು ಮೂಲತಃ ಪುತ್ತೂರಿನವರಾಗಿದ್ದು, ಹಲವು ವರ್ಷಗಳಿಂದ ಮೂಡುಬಿದಿರೆಯಲ್ಲಿ ವಾಸವಾಗಿದ್ದ ಸುರೇಶ್ ಆಚಾರ್ಯ(55) ಎಂದು ಗುರುತಿಸಲಾಗಿದೆ.

ಕಾಂಪ್ಲೆಕ್ಸ್‌ನಲ್ಲಿ ರಾತ್ರಿ ವೇಳೆ ತಂಗುತ್ತಿದ್ದ ಸುರೇಶ್ ಆಚಾರ್ಯ ಶುಕ್ರವಾರ ತಡರಾತ್ರಿ ಆಯತಪ್ಪಿ ಕಟ್ಟಡದ ಮೇಲಂತಸ್ತಿನಿಂದ ಕೆಳಗೆ ಬಿದ್ದ ಪರಿಣಾಮ ಮೃತಪಟ್ಟಿದ್ದಾರೆ.