ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ವೆಂಕಟೇಶ್ ಹೆಗ್ಡೆ ಮಾತನಾಡಿದರು. ಶ್ರೀಹರಿನಾರಾಯಣದಾಸ ಆಸ್ರಣ್ಣ, ಗುರುರಾಜ್ ಎಸ್.ಪೂಜಾರಿ ಮೊದಲಾದವರಿದ್ದರು.  
ದಕ್ಷಿಣ ಕನ್ನಡ

ಸನಾತನ ಧರ್ಮದ ತಿಳಿವಳಿಕೆಯಿಂದ ಸಮಾಜ ಸದೃಢ : ಶ್ರೀಹರಿನಾರಾಯಣದಾಸ ಆಸ್ರಣ್ಣ

ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗುರುರಾಜ್ ಎಸ್.ಪೂಜಾರಿ, ಬೆಳ್ಳಾಯರು ಶ್ರೀ ಚಂದ್ರಮೌಳೀಶ್ವರ ದೇವಸ್ಥಾನದ ಉಪಾಧ್ಯಕ್ಷ ವಿದ್ಯಾಧರ ಶೆಟ್ಟಿ, ರಮೇಶ್ ಕಲ್ಲಾಪು, ಮೂಲ್ಕಿ ಹೋಬಳಿ ಒಂಬತ್ತು ಮಾಗಣೆ ಮುಂಡಾಲ ಸೇವಾ ಟ್ರಸ್ಟ್ ಉಪಾಧ್ಯಕ್ಷ ಶಂಕರ್ ಮಾಸ್ಟರ್ ಗೋಳಿಜೋರಾ, ಶಿಕ್ಷಕಿ ಸಂಧ್ಯಾ ಉಮೇಶ್ ಆಚಾರ್ಯ, ಕೆರೆಕಾಡು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ಕೆರೆಕಾಡು, ರತ್ನಾ ಶಿವಾನಂದ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.

ಹಿಂದುತ್ವ ದೇಶದ ಅಸ್ಮಿತೆ. ದೇಶದಲ್ಲಿ ಹಿಂದುತ್ವ ಉಳಿಯಬೇಕು. ಯುವಜನಾಂಗಕ್ಕೆ ಸಂಸ್ಕಾರ ಸಂಸ್ಕೃತಿ ಕಲಿಸಿದರೆ ಭಾರತದ ಭವ್ಯ ಪ್ರಜೆಗಳಾಗುತ್ತಾರೆ. ಮಕ್ಕಳಿಂದ ಮೊಬೈಲ್ ದೂರವಿಟ್ಟು ಧಾರ್ಮಿಕ ಆಚರಣೆಗೆ ಮಹತ್ವ ನೀಡಿದರೆ ಕುಟುಂಬದ ಮೌಲ್ಯ ಉಳಿಯಲು ಸಾಧ್ಯ.