ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನ ಶ್ರೀ ಗುರುದೇವಾನಂದ ಸ್ವಾಮೀಜಿ ಉದ್ಘಾಟಿಸಿದರು. ಸಾಧ್ವಿ ಮಾತಾನಂದಮಯೀ, ಸಾನ್ವಿ ಚೆಂಬರ್ಪು, ನಿನಾದ್ ಕೈರಂಗಳ ಇದ್ದರು. 
ದಕ್ಷಿಣ ಕನ್ನಡ

ಸಾಹಿತ್ಯದಿಂದ ಸಮಾಜದ ಹಿತ ಕಾಪಾಡುವ ಕಾರ್ಯ ODIYOORU

ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ | ಒಡಿಯೂರಿನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನ

ವಿಟ್ಲ: ಸಾಹಿತ್ಯ ಸಮಾಜದ ಕೈಕನ್ನಡಿಯಂತೆ ಇದೆ. ಸಾಹಿತ್ಯ ಸಹಿಸುವಂತಿರುವ ಜತೆಗೆ ಸಮಾಜದ ಹಿತ ಕಾಪಾಡುವ ಕಾರ್ಯ ಮಾಡಬೇಕು. ಸಾಹಿತ್ಯ ಎಂಬುದು ಅಡಗಿರುವ ವಿಚಾರಗಳನ್ನು ಹೊರಗೆ ತರುವ ಮಾಧ್ಯಮ. ವ್ಯಾಸ ಹಾಗೂ ದಾಸ ಸಾಹಿತ್ಯ ಬದುಕಿಗೆ ಬೇಕಾಗಿದ್ದು, ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಕ್ಕಳ ಸಾಹಿತ್ಯ ಸಮ್ಮೇಳನ ಮೂಲಕ ಭವ್ಯ ಭಾರತದ ಸಂಕಲ್ಪ ಮಾಡಬಹುದು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಒಡಿಯೂರು ರಾಜಾಂಗಣದಲ್ಲಿ ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ರಜತ ಮಹೋತ್ಸವ ಸಂಭ್ರಮದ ಅಂಗವಾಗಿ ಒಡಿಯೂರು ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಸಮ್ಮೇಳನಾಧ್ಯಕ್ಷೆ ಒಡಿಯೂರು ಶಾಲೆಯ ಸಾನ್ವಿ ಚೆಂಬರ್ಪು ಮಾತನಾಡಿ, ಕನ್ನಡ ಭಾಷೆ ಕೇವಲ ಮಾತನಾಡುವ ಮಾಧ್ಯಮವಲ್ಲ; ನಮ್ಮ ಸಂಸ್ಕೃತಿ, ಉಸಿರು, ಅಸ್ತಿತ್ವವಾಗಿದೆ. ಕನ್ನಡ ಸಾಹಿತ್ಯದಲ್ಲಿ ಸಾಮಾನ್ಯ ಜನರ, ರೈತರ ಬದುಕು, ಹಳ್ಳಿಯ ಸೊಗಡು, ಪ್ರಕೃತಿಯ ಸೌಂದರ್ಯ, ಮನವೀಯ ಸಂದೇಶ, ಮಕ್ಕಳ ಕನಸುಗಳಿವೆ ಎಂದರು.

ಶೋಭಾಯಾತ್ರೆಗೆ ಒಡಿಯೂರು ಸಾಧ್ವಿ ಮಾತಾನಂದಮಯೀ ಚಾಲನೆ ನೀಡಿದರು. ಕಲ್ಲಡ್ಕ ಶಾಲೆಯ ವಿದ್ಯಾರ್ಥಿ ನಿನಾದ್ ಕೈರಂಗಳ ಧ್ವಜಾರೋಹಣ ನಡೆಸಿದರು. ಕಲ್ಲಡ್ಕ ಶಾಲೆಯ ಟಿ.ಸುಶ್ಮಿತಾ ಭಟ್ ಸ್ವಾಗತಿಸಿದರು. ಒಡಿಯೂರು ಶಾಲೆಯ ರೀತಿ ವಿ.ಭಟ್ ಪ್ರಸ್ತಾವನೆಗೈದರು. ವಿಟ್ಲ ಜೆಸೀಸ್ ಶಾಲೆಯ ಧನ್ವಿ ಸಿ.ಎಚ್. ವಂದಿಸಿದರು. ಅಳಿಕೆ ಶಾಲೆಯ ಧನ್ವಿ ಕಾರ್ಯಕ್ರಮ ನಿರೂಪಿಸಿದರು.

ಕವಿತಾಗೋಷ್ಠಿ

ವಿಟ್ಲ ಜೇಸೀಸ್ ಶಾಲೆಯ ಶ್ರುತಿಕಾ ಅಧ್ಯಕ್ಷತೆ ವಹಿಸಿದ್ದರು. ಒಡಿಯೂರು ಶಾಲೆಯ ನವ್ಯಶ್ರೀ, ವಿಟ್ಲ ಪಿಎಂಶ್ರೀ ಶಾಲೆಯ ಸೀಮಾ ಎಸ್., ಒಡಿಯೂರು ಶಾಲೆಯ ಮೇಘಶ್ರೀ, ಪೂರ್ವಿ, ಅಳಿಕೆ ಶಾಲೆಯ ಶ್ರೀರ್ಷಿತಾ ಕಾರಂತ್, ಗುಡ್ಡೆ ಅಂಗಡಿ ಶಾಲೆಯ ಚಿನ್ಮಯಿ ಕವನ ವಾಚಿಸಿದರು. ಒಡಿಯೂರು ಶಾಲೆಯ ತಾತ್ವಿಕ್ ಶೆಟ್ಟಿ ಸ್ವಾಗತಿಸಿದರು. ಕೇಪು ಶಾಲೆಯ ಪ್ರೀತೇಶ್ ವಂದಿಸಿದರು. ಒಡಿಯೂರು ಶಾಲೆಯ ಮೈಥಿಲಿ ಕೆ. ನಿರೂಪಿಸಿದರು.

ಸಂವಾದ ಮಂಟಪ

ಕಲ್ಲಡ್ಕ ಶಾಲೆಯ ವೈಷ್ಣವಿ ಕಡ್ಯ ಅಧ್ಯಕ್ಷತೆ ವಹಿಸಿದ್ದರು. ಸಂವಾದಕರಾಗಿ ವಿಠಲ ಪ್ರೌಢ ಶಾಲೆಯ ನಿಶ್ಮಿತಾ, ಒಡಿಯೂರು ಶಾಲೆಯ ಚಿರಸ್ವಿ ಭಾಗವಹಿಸಿದರು. ಕನ್ಯಾನ ಸರಸ್ವತಿ ಶಾಲೆಯ ಕೃತಿ ಕೆ. ಸ್ವಾಗತಿಸಿದರು. ಕೇಪು ಶಾಲೆಯ ವರ್ಷಾ ವಂದಿಸಿದರು. ವಿಟ್ಲ ಪಿಎಂ ಶ್ರೀ ಶಾಲೆಯ ಜಿ.ಎಂ.ಅಕ್ಷರ ಶ್ಯಾಮ್ ಭಟ್ ಕಾರ್ಯಕ್ರಮ ನಿರೂಪಿಸಿದರು.

ಗಾನ ನೃತ್ಯ ಚಿತ್ರ

ಶೇಖರ ಶೆಟ್ಟಿ ಬಾಯಾರು ತಂಡದಲ್ಲಿ ಕುಕ್ಕಾಜೆ ಶಾಲೆಯ ಆದ್ಯ ಪಿ.ಬಿ. ಚಿತ್ರ ಬಿಡಿಸಿದರು. ವಿಜಯಾ ಶೆಟ್ಟಿ ಸಾಲೆತ್ತೂರು ತಂಡದಲ್ಲಿ ಮಂಚಿ ಕೊಳ್ನಾಡು ರಶ್ಮಿ ಬಿ. ಚಿತ್ರ ಮಾಡಿದರು. ವಿಶ್ವನಾಥ್ ಕುಲಾಲ್ ಮಿತ್ತೂರು ತಂಡದಲ್ಲಿ ಕಲ್ಲಡ್ಕ ಶಾಲೆಯ ನಿನಾದ್ ಕೈರಂಗಳ ಚಿತ್ರ ರಚಿಸಿದರು. ಒಡಿಯೂರು ಶಾಲೆಯ ವಿದ್ಯಾರ್ಥಿಗಳು ಗಾನ ಹಾಗೂ ನೃತ್ಯ ನಡೆಸಿದರು.

ಕಥಾ ಗೋಷ್ಠಿ

ವಿಟ್ಲ ಜೇಸೀಸ್ ಶಾಲೆಯ ರಾಶಿ ಬಿ.ಆರ್. ಬಲಿಪಗುಳಿ ಅಧ್ಯಕ್ಷತೆ ವಹಿಸಿದ್ದರು. ಒಡಿಯೂರು ಶಾಲೆಯ ಚರಿಷ್ಮಾ, ಕಲ್ಲಂಗಳ ಶಾಲೆಯ ಯಶಿಕಾ, ಅಳಿಕೆ ಶಾಲೆಯ ಮೋಕ್ಷಾ, ಗುಡ್ಡೆ ಅಂಗಡಿ ಶಾಲೆಯ ವಿನುತಾ ಶೆಟ್ಟಿ, ಒಡಿಯೂರು ಶಾಲೆಯ ಮಧುರಿಮಾ ಎಸ್.ಭಟ್ ಕಥಾ ವಾಚಕರಾಗಿ ಭಾಗವಹಿಸಿದರು. ವಿಠಲ ಶಾಲೆಯಾ ಅನ್ವಿತಾ ಎಂ. ಸ್ವಾಗತಿಸಿದರು. ಪಿಎಂಶ್ರೀ ಶಾಲೆಯ ತ್ವಿಶಾ ಪಿ.ಕೆ. ವಂದಿಸಿದರು. ಕನ್ಯಾನ ಸರಸ್ವತಿ ಶಾಲೆಯ ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು.