ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಧ್ವೀ ಮಾತಾನಂದಮಯೀ ಸಾನ್ನಿಧ್ಯ ವಹಿಸಿದ್ದರು. 
ದಕ್ಷಿಣ ಕನ್ನಡ

ಆಸೆ ದೂರವಾದಾಗ ಸುಖ ಪ್ರಾಪ್ತಿODIYOORU

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಒಡಿಯೂರು ಶ್ರೀ ಶುಭನುಡಿ
  • ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತ
ವಿಟ್ಲ: ನಾವು ಆಸೆಗಳಿಗೆ ಬಲಿಯಾದರೆ ಅವನತಿಗೆ ಕಾರಣವಾಗುತ್ತದೆ. ಇಂದು ಮನುಷ್ಯ-ಮನುಷ್ಯರ ನಡುವೆ ಅಂತರ ಹೆಚ್ಚಾಗಿ ಹೊಂದಾಣಿಕೆ ಇಲ್ಲದಂತಾಗಿದೆ. ಇದಕ್ಕೇ ಮೂಲ ಕಾರಣ ಆಸೆಯೇ. ಇರುವುದರಲ್ಲಿ ತೃಪ್ತಿಪಟ್ಟಾಗ ಸುಖ ಪ್ರಾಪ್ತಿಯಾಗುತ್ತದೆ. ಆಪತ್ತುಗಳನ್ನು ಮೀರಿ ಬದುಕಬೇಕಾದರೆ ಧರ್ಮಶ್ರದ್ಧೆ ಬೇಕು. ಮಾನವೀಯತೆಯನ್ನು ಮೆರೆಯಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಆಯೋಜಿಸಿದ್ದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಯಲ್ಲಿ ಆಶೀರ್ವಚನ ನೀಡಿದರು.
ಇಂದು ಸಮಾಜದಲ್ಲಿ ನಡೆಯುವ ಅಹಿತಕರ ಘಟನೆಗಳಿಗೆ ಮನುಷ್ಯರಲ್ಲಿನ ತಾಳ್ಮೆ-ಸಹನೆಯ ಕೊರತೆಯೇ ಕಾರಣ. ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಲು ಅಧ್ಯಾತ್ಮ ಶಿಕ್ಷಣ ಅಗತ್ಯ. ಭಾರತದಲ್ಲಿ ಮಾತ್ರ ಅಧ್ಯಾತ್ಮ ಶಿಕ್ಷಣ ಸಿಗಲು ಸಾಧ್ಯ. ಬದುಕು ಚಲನಶೀಲವಾದುದು. ಜೀವನ ಪಯಣ ಸಾಗಬೇಕಾದರೆ ಲಕ್ಷ್ಮೀಯೂ ಬೇಕು, ನಾರಾಯಣನೂ ಬೇಕು ಎಂದರು.
ಸಾಧ್ವೀ ಮಾತಾನಂದಮಯೀ ಉಪಸ್ಥಿತರಿದ್ದರು. ಶಿವಕುಮಾರ ಭಟ್ ಹಾಗೂ ಪ್ರಕಾಶ್ ನಾರಾಯಣ ಭಟ್ ಪೌರೋಹಿತ್ಯದಲ್ಲಿ ವ್ರತ ಪೂಜೆ ನಡೆಯಿತು.
"

ಪಾವಿತ್ರ್ಯಕ್ಕೆ ಇನ್ನೊಂದು ಹೆಸರು ಲಕ್ಷ್ಮೀದೇವಿ. ಸಮುದ್ರಮಥನ ಕಾಲದಲ್ಲಿ ಉದಿಸಿದವಳೇ ಶ್ರೀಲಕ್ಷ್ಮೀ. ಸೇವೆಗೆ ಆದರ್ಶರಾದವರೆಂದರೆ ಲಕ್ಷ್ಮೀ ಮತ್ತು ಹನುಮಂತ. ನಾವು ಯಾರಿಗೆ ಸೇವೆ ಮಾಡಬೇಕು ಎನ್ನುವ ಅರಿವಿರಬೇಕು. ಯಾರಿಗೆ ಅಗತ್ಯವಿದೆಯೋ ಅಂತಹವರಿಗೆ ಸೇವೆ ಮಾಡಬೇಕು. ಭವಿಷ್ಯಪುರಾಣದಲ್ಲಿ ಬರುವಂತಹ ಕಥೆಯೇ ಶ್ರೀ ವರಮಹಾಲಕ್ಷ್ಮೀ ವ್ರತವಾಗಿದೆ.

— ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ