ಕಥೆ ಕೇಳಿ ನಾಟಕ ಬರೆಯಿರಿ ನಾಟಕ ರಚನಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದವರಿಗೆ ಶ್ರೀ ಗುರುದೇವಾನಂದ ಸ್ವಾಮೀಜಿ ಪುಸ್ತಕ ಮತ್ತು ಲೇಖನಿ ನೀಡಿ ಹರಿಸಿದರು.  
ದಕ್ಷಿಣ ಕನ್ನಡ

ಸಮಾಜಕ್ಕೆ ಮೌಲ್ಯಯುತ ಸಂದೇಶ ಸಾರುವ ನಾಟಕಗಳು ODIYOORU

ಒಡಿಯೂರು ಶ್ರೀ ಆಶೀರ್ವಚನ | ಕಥೆ ಕೇಳಿ ನಾಟಕ ಬರೆಯಿರಿ ಸ್ಪರ್ಧೆ

ವಿಟ್ಲ: ನಾಟಕದ ಮುಖ್ಯ ಉದ್ದೇಶ ಮನರಂಜನೆಯಾದರೂ ಅದು ಸಮಾಜಕ್ಕೆ ಮೌಲ್ಯಯುತ ಸಂದೇಶ ನೀಡುವಂತಿರಬೇಕು. ಒಂದು ಒಳ್ಳೆಯ ರೀತಿಯಲ್ಲಿ ನೈತಿಕ ಮೌಲ್ಯಯುಕ್ತವಾದ ನಾಟಕ ಪ್ರದರ್ಶನವಾಗಬೇಕು. ಆ ಮೂಲಕ ಸಮಾಜದ ಪರಿವರ್ತನೆ ಆಗಬೇಕೆಂಬ ದೃಷಿಯಿಂದ ನಾಟಕದ ಕಥೆಯನ್ನು ರೂಪಿಸಿದ್ದೇವೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೆಳಿದರು.

ಒಡಿಯೂರು ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಕಥೆ ಕೇಳಿ ನಾಟಕ ಬರೆಯಿರಿ- ನಾಟಕ ರಚನಾ ಸ್ಪರ್ಧೆಯ ಸಭೆಯಲ್ಲಿ ಆಶೀರ್ವಚನ ನೀಡಿದರು.

ಸ್ವಾಮೀಜಿ ಹೇಳುವ ಕಥೆಯನ್ನು ನಾಟಕವನ್ನಾಗಿಸಿ ಪ್ರಸ್ತುತಪಡಿಸುವ ವಿಶಿಷ್ಟ ಸ್ಪರ್ಧೆ ಇದಾಗಿದೆ. ಮುಂಬೈ, ಬೆಂಗಳೂರು, ದ.ಕ., ಕಾಸರಗೋಡು ಜಿಲ್ಲೆಗಳಿಂದ ಸುಮಾರು ೩೧ ಮಂದಿ ನಾಟಕ ರಚನೆಕಾರರು ಭಾಗವಹಿಸಿದ್ದರು. ಎಲ್ಲರಿಗೂ ಶಾಲು ಹೊದಿಸಿ ಪುಸ್ತಕ ಮತ್ತು ಲೇಖನಿ ನೀಡಿ ಶ್ರೀಗಳು ಹರಸಿದರು.

ಸಾಧ್ವೀ ಮಾತಾನಂದಮಯೀ ಸಾನ್ನಿಧ್ಯ ವಹಿಸಿದ್ದರು. ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕ ಲೋಕನಾಥ ಜಿ.ಶೆಟ್ಟಿ ಉಪಸ್ಥಿತರಿದ್ದರು. ಸ್ಪರ್ಧೆಯ ಸಂಘಟಕ ಕದ್ರಿ ನವನೀತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಒಡಿಯೂರು ತುಳುಕೂಟದ ಅಧ್ಯಕ್ಷ ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.