ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಽ ಮಾತಾನಂದಮಯೀ ಸಾನ್ನಿಧ್ಯ ವಹಿಸಿದ್ದರು. ಕ್ಯಾ.ಬ್ರಿಜೇಶ್ ಚೌಟ, ರಾಜೇಶ್ ನಾಕ್ ಯು., ಡಾ.ಕೆ.ಪ್ರಕಾಶ್ ಶೆಟ್ಟಿ, ಶ್ಯಾಮ ಎನ್. ಶೆಟ್ಟಿ, ಡಾ.ರವಿ ಶೆಟ್ಟಿ ಮೂಡಂಬೈಲ್ ಇದ್ದರು.
- ಒಡಿಯೂರು ಶ್ರೀ ಆಶೀರ್ವಚನ
- ಗ್ರಾಮೋತ್ಸವ, ಗುರುವಂದನಾ ಸೇವಾ ಸಂಭ್ರಮ ಧರ್ಮಸಭೆ
ವಿಟ್ಲ: ಅಧ್ಯಾತ್ಮ ಭಾರತದ ಹೃದಯವಾಗಿದೆ. ಬಂಧನದಿಂದ ಮುಕ್ತಿ ಪಡೆಯಲು ಅಧ್ಯಾತ್ಮ ಸಹಕಾರಿಯಾಗಿದೆ. ಅಧ್ಯಾತ್ಮದ ಬದುಕಿನಲ್ಲಿರುವ ಸುಖ ಬೇರೆ ಕಡೆ ಸಿಗಲು ಸಾಧ್ಯವಿಲ್ಲ. ಅಹಂಕಾರ- ಮಮಕಾರವನ್ನು ಮೀರಿ ಧರ್ಮ ಸೂತ್ರದಲ್ಲಿ ಬದುಕು ನಡೆಸಬೇಕು. ಅರ್ಹ ವ್ಯಕ್ತಿಗಳಿಗೆ ಸೇವೆ ಮಾಡಬೇಕಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಶ್ರೀಗಳ ಜನ್ಮದಿನೋತ್ಸವ ಸಮಿತಿ ವತಿಯಿಂದ ಶ್ರೀಗಳ ಜನ್ಮದಿನೋತ್ಸವ, ಗ್ರಾಮೋತ್ಸವ -೨೦೨೬, ಗುರುವಂದನಾ ಸೇವಾ ಸಂಭ್ರಮದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ಸಾಧ್ವಿ ಮಾತಾನಂದಮಯೀ ಮಾರ್ಗದರ್ಶನದಲ್ಲಿ ಲೋಕನಾಥ ಜಿ.ಶೆಟ್ಟಿ, ಸರಿತಾ ಲೋಕನಾಥ ಅವರು ಶ್ರೀಗಳ ಪಾದಪೂಜೆ ಮಾಡಿದರು.
ಸಾಧ್ವಿ ಮಾತಾನಂದಮಯಿ ಸಾನ್ನಿಧ್ಯ ವಹಿಸಿದ್ದರು. ಪರಿಸರವಾದಿ ಡಾ.ಆರ್.ಕೆ.ನಾಯರ್ ಅವರಿಗೆ ಗೌರವಾಭಿನಂದನೆ ನಡೆಯಿತು. ಲೋಕನಾಥ ಜಿ.ಶೆಟ್ಟಿ ತಾಳಿಪ್ಪಾಡಿಗುತ್ತು, ಸರಿತಾ ಲೋಕನಾಥ ಶ್ರೀಗಳ ಪಾದಪೂಜೆ ನೆರವೇರಿಸಿದರು. ಚಂದ್ರಶೇಖರ ಉಪಾಧ್ಯಾಯ ಕುರುವಮೂಲೆ ವೈದಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಕ್ ಯು., ಎಂ.ಆರ್.ಜಿ. ಗ್ರೂಪ್ ಅಧ್ಯಕ್ಷ ಡಾ.ಕೆ.ಪ್ರಕಾಶ್ ಶೆಟ್ಟಿ, ಬಾಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಶ್ಯಾಮ ಎನ್.ಶೆಟ್ಟಿ, ದೋಹಕತಾರ್ ಆಡಳಿತ ನಿರ್ದೇಶಕ ಡಾ.ರವಿ ಶೆಟ್ಟಿ ಮೂಡಂಬೈಲ್, ಮುಂಬೈ ಉದ್ಯಮಿ ಭಾಸ್ಕರ್ ಆರ್.ಶೆಟ್ಟಿ, ಹಿರಿಯ ವಕೀಲ ಒ.ಶ್ಯಾಮ ಭಟ್, ಪ್ರಗತಿಪರ ಕೃಷಿಕ ಶ್ಯಾಮಪ್ರಸಾದ ಕೊಣಲೆ, ಉದ್ಯಮಿ ವಾಮಯ್ಯ ಬಿ.ಶೆಟ್ಟಿ, ಚಂದ್ರಹಾಸ ರೈ, ಪದ್ಮನಾಭ ಕೊಟ್ಟಾರಿ, ದಾಮೋದರ ಎಸ್.ಶೆಟ್ಟಿ, ಡಾ.ಅದೀಪ್ ಕೃಷ್ಣ ಶೆಟ್ಟಿ, ರೋಹಿತ್ ಶೆಟ್ಟಿ ನಗ್ರಿಗುತ್ತು, ಉಷಾ ಕುಮಾರ್ ಶೆಟ್ಟಿ, ಎ.ಸುರೇಶ್ ರೈ ಉಪಸ್ಥಿತರಿದ್ದರು.
ಒಡಿಯೂರು ಶ್ರೀಗಳಿಗೆ ಮಾತೆಯರಿಂದ ಉಯ್ಯಾಲೆ ಸೇವೆ ನಡೆಯಿತು.
ವಿದ್ಯಾಪೀಠದ ಮುಖ್ಯ ಶಿಕ್ಷಕಿ ರೇಣುಕಾ ಎಸ್.ರೈ ಪ್ರಾರ್ಥಿಸಿದರು. ಮುಂಬೈ ಗುರುದೇವ ಸೇವಾ ಬಳಗದ ಪ್ರಧಾನ ಕಾರ್ಯದರ್ಶಿ ಪೇಟೆಮನೆ ಪ್ರಕಾಶ್ ಕೆ.ಶೆಟ್ಟಿ ಸ್ವಾಗತಿಸಿದರು. ಯೋಜನೆಯ ಸಾರ್ವಜನಿಕ ಸಂಪರ್ಕಾಽಕಾರಿ ಮಾತೇಶ್ ಭಂಡಾರಿ ವರದಿ ಮಂಡಿಸಿದರು. ಜನ್ಮದಿನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಶವಂತ ವಿಟ್ಲ ವಂದಿಸಿದರು. ಕಾರ್ಯಾಧ್ಯಕ್ಷ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ತುಲಾಭಾರ ಸೇವೆ
ಬೆಳಗ್ಗೆ ಗಣಪತಿ ಹವನ, ಮಹಾಪೂಜೆ, ರಾಜಾಂಗಣಕ್ಕೆ ಶೋಭಾಯಾತ್ರೆ, ಪರಶುರಾಮ ಮೂರ್ತಿಯನ್ನು ಅನಾವಣ ಮಾಡಲಾಯಿತು. ರವಿರಾಜ್ ಶೆಟ್ಟಿ ಒಡಿಯೂರು ಬಳಗದಿಂದ ನಾಮಸಂಕೀರ್ತನೆ, ಗುರುಕುಲದ ಪುಟಾಣಿಗಳಿಂದ ಗುರುವಂದನೆ, ಉಯ್ಯಾಲೆ ಸೇವೆ, ತುಲಾಭಾರ ಸೇವೆ ನಡೆಯಿತು. ಅರಿಶಿನ, ಏಲಕ್ಕಿ, ಕಲ್ಲುಸಕ್ಕರೆ, ಗೋಡಂಬಿ, ಬಾದಾಮಿಯಲ್ಲಿ ಶ್ರೀಗಳ ತುಲಾಭಾರ ಸೇವೆ ನಡೆಯಿತು. ರಾತ್ರಿ ರಂಗಪೂಜೆ, ವಿಶೇಷ ಬೆಳ್ಳಿ ರಥೋತ್ಸವ, ಮಹಾಪೂಜೆ ನಡೆಯಿತು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ರಾಜಾಂಗಣದಲ್ಲಿ ನಡೆದ ಗ್ರಾಮೋತ್ಸವ, ಗುರುವಂದನೆ-ಸೇವಾ ಸಂಭ್ರಮ ಕಾರ್ಯಕ್ರಮದಲ್ಲಿ ಗುರುಬಂಧುಗಳು ರಜತದ ಮೂಲಕ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರಿಗೆ ತುಲಾಭಾರ ಸೇವೆ ಸಮರ್ಪಿಸಿದರು.
ವಿವಿಧ ಸಹಾಯ ಹಸ್ತ
೧೯ ಮಂದಿಗೆ ಪ್ರತಿಭಾ ಪುರಸ್ಕಾರ, ೭೬ ಮಂದಿ ಅನಾರೋಗ್ಯಪೀಡಿತರ ಚಿಕಿತ್ಸೆಗೆ, ಮನೆ ನಿರ್ಮಾಣ, ದುರಸ್ತಿ ಕಾರ್ಯಕ್ಕೆ ೨೩ ಮಂದಿಗೆ, ಮರಣ ಸಾಂತ್ವನದಡಿ ೨೮ ಕುಟುಂಬಗಳಿಗೆ ಹಾಗೂ ೭ ಶ್ರದ್ಧಾಕೇಂದ್ರಗಳಿಗೆ ಸಹಾಯಹಸ್ತವಾಗಿ ೧೫.೪೩ ಲಕ್ಷ ರೂ. ಮೊತ್ತವನ್ನು ಹಸ್ತಾಂತರಿಸಲಾಯಿತು.
ಬದುಕು ಕಟ್ಟಿಕೊಳ್ಳುವಾಗ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ದೇವರ ಅನುಗ್ರಹ ಇದ್ದಾಗ ಎಲ್ಲವನ್ನೂ ಮೀರಿ ಯಶಸ್ಸು ಗಳಿಸಬಹುದು. ಕನಸು ಹಾಗೂ ಸಂಕಲ್ಪ ಇದ್ದಾಗ ಗುರಿ ತಲುಪಲು ಸಾಧ್ಯವಾಗುತ್ತದೆ. ಎಲ್ಲರ ಪ್ರೀತಿ ವಿಶ್ವಾಸವೇ ದೊಡ್ಡ ಆಸ್ತಿಯಾಗಿದೆ. ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ ನೀಡಬೇಕು.
— ಡಾ.ಕೆ.ಪ್ರಕಾಶ್ ಶೆಟ್ಟಿ ಎಂಆರ್‌ಜಿ ಗ್ರೂಪ್ ಅಧ್ಯಕ್ಷ
ಗ್ರಾಮೀಣ ಕ್ಷೇತ್ರದಲ್ಲಿ ಮಹಿಳೆಯರ ಸಬಲೀಕರಣಕ್ಕೆ ಒಡಿಯೂರು ಕ್ಷೇತ್ರ ಬಹಳ ದೊಡ್ಡ ಕೆಲಸ ಮಾಡುತ್ತಿದೆ. ಕೆಲಸದಲ್ಲಿ ಬದ್ಧತೆ ಹಾಗೂ ನಿರಂತರತೆ ಇದ್ದಾಗ ಉತ್ತಮ ಫಲಿತಾಂಶ ಲಭಿಸುತ್ತದೆ. ಯುವಸಮಾಜವನ್ನು ರಾಷ್ಟ್ರ ನಿರ್ಮಾಣದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವ ಕಾರ್ಯವಾಗಬೇಕು. ಮಾದಕವಸ್ತುಗಳ ಬಗ್ಗೆ ಮನೆಮನೆಯಲ್ಲಿ ಜಾಗೃತಿಯಾಗಬೇಕು.
— ಕ್ಯಾ. ಬ್ರಿಜೇಶ್ ಚೌಟ, ಸಂಸದ