ಆಟಿದ ಆಯನೊ ಮತ್ತು ಒಡಿಯೂರು ಶ್ರೀಗಳ ಜನ್ಮದಿನೋತ್ಸವ- ಗ್ರಾಮೋತ್ಸವದ ಯಶಸ್ಸಿಗೆ ಶ್ರಮಿಸಿದ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಸಾಽ ಮಾತಾನಂದಮಯೀ, ಲೋಕನಾಥ ಜಿ.ಶೆಟ್ಟಿ ತಾಳಿಪ್ಪಾಡಿಗುತ್ತು, ಕದ್ರಿ ನವನೀತ ಶೆಟ್ಟಿ, ಕೃಷ್ಣ ಶೆಟ್ಟಿ ತಾರೆಮಾರು, ಎ.ಸುರೇಶ್ ರೈ ಇತರರು ಇದ್ದರು. 
ದಕ್ಷಿಣ ಕನ್ನಡ

ತುಳು ಸಂಪ್ರದಾಯದಿಂದ ಆರೋಗ್ಯ ರಕ್ಷಣೆ ODIYOORU

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಒಡಿಯೂರು ಶ್ರೀ ಆಶೀರ್ವಚನ
  • ಸಂಸ್ಥಾನದಲ್ಲಿ ಆಟಿದ ಆಯನೊ ಕಾರ್ಯಕ್ರಮ
ವಿಟ್ಲ: ಸುಸಂಸ್ಕೃತ ಸಮಾಜ ನಿರ್ಮಾಣದ ಉದ್ದೇಶ ನಮ್ಮೊಳಗೆ ಬರಬೇಕು. ಭಾರತದ ಸಂಸ್ಕೃತಿಯನ್ನು ಉಳಿಸಿದಾಗ ದೇಶ ಬಲಿಷ್ಠವಾಗುತ್ತದೆ. ಸನಾತನ ಧರ್ಮದ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಾಗಬೇಕು. ತುಳುವರು ಸಂಪ್ರದಾಯ ಅನುಸರಿದಾಗ ಆರೋಗ್ಯ ಕಾಪಾಡಲು ಸಾಧ್ಯವಾಗುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.
ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನ ಮಂದಿರದಲ್ಲಿ ಆಟಿದ ಆಯನೊ ಮತ್ತು ಒಡಿಯೂರು ಶ್ರೀಗಳ ಜನ್ಮದಿನೋತ್ಸವ- ಗ್ರಾಮೋತ್ಸವದ ಯಶಸ್ಸಿಗೆ ಶ್ರಮಿಸಿದ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ಆಶೀರ್ವಚನ ನೀಡಿದರು.
ಆಟಿ ತಿಂಗಳಲ್ಲಿ ತುಳುವರು ತಿನ್ನುವ ಆಹಾರ ಆರೋಗ್ಯಕರವಾಗಿವೆ. ವ್ಯಕ್ತಿಯ ವಿಕಾಸದಿಂದ ದೇಶದ ವಿಕಾಸ ಸಾಧ್ಯವಾಗುತ್ತದೆ. ಭ್ರಷ್ಟಾಚಾರಮುಕ್ತ ಭಾರತಕ್ಕೆ ಪ್ರತಿಯೊಬ್ಬರ ಕೊಡುಗೆ ಅಗತ್ಯವಾಗಿದೆ. ನಮ್ಮ ಬದುಕು ಸಮಾಜಕ್ಕೆ ಸಂದೇಶವಾಗಿರಬೇಕು. ಗ್ರಾಮವಿಕಾಸ ಯೋಜನೆಗೆ ೨೫ ವರ್ಷ ತುಂಬಿದ್ದು, ಸೆಪ್ಟೆಂಬರ್ ೨೦ಕ್ಕೆ ರಜತ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದರು.
ಸಾಧ್ವಿ ಮಾತಾನಂದಮಯೀ ಸಾನ್ನಿಧ್ಯ ವಹಿಸಿದ್ದರು. ಜನ್ಮದಿನೋತ್ಸವ ಸಮಿತಿ ಅಧ್ಯಕ್ಷ ಲೋಕನಾಥ ಜಿ.ಶೆಟ್ಟಿ ತಾಳಿಪ್ಪಾಡಿಗುತ್ತು, ಕಾರ್ಯಾಧ್ಯಕ್ಷ ಕದ್ರಿ ನವನೀತ ಶೆಟ್ಟಿ, ಉಪಾಧ್ಯಕ್ಷ ಕೃಷ್ಣ ಶೆಟ್ಟಿ ತಾರೆಮಾರು, ಸ್ವಾಗತ ಸಮಿತಿ ಅಧ್ಯಕ್ಷ ಎ.ಸುರೇಶ್ ರೈ, ಒಡಿಯೂರು ತುಳುಕೂಟದ ಮಾಜಿ ಅಧ್ಯಕ್ಷ ಮಲಾರು ಜಯರಾಮ ರೈ ಮತ್ತಿತರರು ಉಪಸ್ಥಿತರಿದ್ದರು.
ಆಹಾರ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಯಶವಂತ ವಿಟ್ಲ ಸ್ವಾಗತಿಸಿದರು. ಶ್ರೀ ಗುರುದೇವ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕಾಽಕಾರಿ ಮಾತೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.
"

ಸೇವೆ ಮಾಡಲು ಅವಕಾಶ ಲಭಿಸಿರುವುದು ಸೌಭಾಗ್ಯವಾಗಿದೆ. ಒಳ್ಳೆಯ ಮನಸ್ಸಿರುವಲ್ಲಿ ಶ್ರೇಯಸ್ಸು ಇರುತ್ತದೆ. ಆನಂದವನ್ನು ಹಂಚುವ ಕಾರ್ಯ ಗುರುಗಳಿಂದ ನಡೆಯುತ್ತಿದೆ. ಲೋಕಹಿತ ಸಂಕಲ್ಪದೊಂದಿಗೆ ಆತ್ಮೋನ್ನತಿ ಗುರುಗಳ ಉದ್ದೇಶವಾಗಿದೆ. ಅವರು ಶಿಷ್ಯರಿಗೆ ಸೇವೆ ಸಲ್ಲಿಸಲು ಅಗಾಧವಾದ ಅವಕಾಶ ಕಲ್ಪಿಸಿದ್ದಾರೆ. ತುಳುನಾಡಿನ ಸಂಸ್ಕೃತಿ ಉಳಿಸಲು ಕಾರ್ಯಕ್ರಮಗಳ ಆಚರಣೆ ಮುಖ್ಯ.

— ಸಾಧ್ವಿ ಮಾತಾನಂದಮಯೀ, ಒಡಿಯೂರು