- ಕನಸಾಗಿದೆ ಟರ್ಮಿನಲ್ ದರ್ಜೆಗೇರುವಿಕೆ
- ಯಾತ್ರಿಕರು, ಸಂಘಗಳ ಮನವಿಗಿಲ್ಲ ಕಿಮ್ಮತ್ತು
- ಮೂಲಸೌಕರ್ಯ ಕಲ್ಪಿಸುವಂತೆ ಸ್ಥಳೀಯರ ಪಟ್ಟು
- ಅಧಿಕಾರಿ, ಜನಪ್ರತಿನಿಧಿಗಳಿಂದ ನೀರಸ ಸ್ಪಂದನೆ
ಪ್ಲಾಟ್‌ಫಾರ್ಮ್‌ನಲ್ಲಿ ಲಿಫ್ಟ್ ನಿರ್ಮಾಣ
ಪ್ರತಿಭಟನೆಗೂ ಕ್ಯಾರಿಲ್ಲ
ರೈಲ್ವೆ ಪ್ರಯಾಣಿಕರ ಸಂಘ, ಸ್ಥಳೀಯ ಸಂಘಟನೆಗಳು, ವ್ಯಾಪಾರ ಸಂಸ್ಥೆಗಳು ಮತ್ತು ಸ್ಥಳೀಯರು ಸತತವಾಗಿ ಸಚಿವರು, ರೈಲ್ವೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಮನವಿ ಮಾಡುತ್ತಲೇ ಇದ್ದರೂ ಇಂದಿನವರೆಗೂ ಬೇಡಿಕೆ ಈಡೇರಿಕೆ ಮರೀಚಿಕೆಯಾಗಿ ಉಳಿದಿದ್ದು, ಈಗಾಗಲೇ ಆಂದೋಲನ, ಪ್ರತಿಭಟನೆಗಳು ಕೂಡ ನಡೆದಿವೆ.
ಕುಂಬಳೆ ರೈಲು ನಿಲ್ದಾಣದಿಂದ ನಿತ್ಯವೂ ನೂರಾರು ಮಂದಿ ಪ್ರಯಾಣಿಸುತ್ತಾರೆ. ಕುಂಬಳೆ ರೈಲ್ವೆ ನಿಲ್ದಾಣದಲ್ಲಿ ಮೂಲಸೌಕರ್ಯಗಳು ಅಭಿವೃದ್ಧಿಗೊಳ್ಳದೇ ದಶಕಗಳೇ ಕಳೆದಿದ್ದು, ದೂರ ಸಂಚರಿಸುವ ವೇಗದೂತ ರೈಲುಗಳ ನಿಲುಗಡೆಗೂ ಅವಕಾಶ ಕಲ್ಪಿಸಬೇಕು.