ಪ್ರಮುಖ ಮುಖ್ಯಾಂಶಗಳು
ಉಪ್ಪಿನಂಗಡಿ ಪ.ಪಂ. ಆಗದೇ ಇರುವುದರಿಂದ ಇಲ್ಲಿ ಒಳಚರಂಡಿ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಆದರೆ ನದಿಯಲ್ಲಿ ಹಿನ್ನೀರು ಸಂಗ್ರಹವಾಗುತ್ತಿರುವುದರಿಂದ ಉಂಟಾಗಿರುವ ಸೂಕ್ಷ್ಮ ಸ್ಥಿತಿಯಲ್ಲಿ ಪೇಟೆಯ ತ್ಯಾಜ್ಯವೂ ನದಿಯನ್ನು ನೇರವಾಗಿ ಸೇರದಂತೆ ಕ್ರಮ ಕೈಗೊಳ್ಳಬೇಕಾಗಿದೆ. ನದಿಯಲ್ಲಿ ಹಿನ್ನೀರು ಸಂಗ್ರಹವಾಗುತ್ತಿರುವುದರಿಂದ ಅಂತರ್ಜಲವೃದ್ಧಿಯಾಗಿ ಹಲವಾರು ಮನೆಗಳ ಶೌಚಗೃಹದಲ್ಲಿಯೂ ನೀರು ತುಂಬಿ ಸಮಸ್ಯೆಗಳಾಗುತ್ತಿದೆ. ಪುಣ್ಯತೀರ್ಥ ಸ್ನಾನ ಮಾಡುವ ಸಂಗಮ ಕ್ಷೇತ್ರವಾಗಿರುವ ಉಪ್ಪಿನಂಗಡಿಯಲ್ಲಿ ನದಿ ಕಲ್ಮಶಗಳಿಂದ ತುಂಬಿರುವುದು ಬೇಸರ ಮೂಡಿಸುತ್ತಿದೆ.