ರಾಷ್ಟ್ರ ಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ದರ್ಶನ್ ಎಚ್.ವಿ. ಚಾಲನೆ ನೀಡಿದರು. ಪ್ರದೀಪ್ ಕುಮಾರ್, ನಾಝಿಯ ಸುಲ್ತಾನ್, ಕೃಷ್ಣ ಹೆಗ್ಡೆ ಮಿಯಾರ್ ಮೊದಲಾದವರಿದ್ದರು.  
ದಕ್ಷಿಣ ಕನ್ನಡ

ರಾಷ್ಟ್ರ ಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ಚಾಲನೆ

ಮಂಗಳೂರು: ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಆಶ್ರಯದಲ್ಲಿ ಕಶಾರ್ಪ್ ಫಿಟ್ನೆಸ್ ವತಿಯಿಂದ ಮಂಗಳೂರಿನ ಟಿ.ವಿ.ರಮಣ ಪೈ ಸಭಾಂಗಣದಲ್ಲಿ ಐದು ದಿನಗಳ ಕಾಲ ನಡೆಯಲಿರುವ ರಾಷ್ಟ್ರ ಮಟ್ಟದ ಸೀನಿಯರ್ ಕ್ಲಾಸ್ಲಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಗೆ ಮಂಗಳವಾರ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ.ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ದೇಶದಲ್ಲಿ ಪವರ್‌ಲಿಫ್ಟಿಂಗ್, ಈಜು, ಬ್ಯಾಡ್ಮಿಂಟನ್, ಕಬಡ್ಡಿಯಂತಹ ಕ್ರೀಡೆಗಳು ಜನಪ್ರಿಯಗೊಳ್ಳುತ್ತಿವೆ. ಪ್ರತಿಯೊಬ್ಬರೂ ಆಸಕ್ತಿಯ ಕ್ರೀಡೆಯಲ್ಲಿ ತೊಡಗಿಸಿಕೊಂಡು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢರಾಗುವುದು ಅವಶ್ಯ ಎಂದರು.
ಅಸೋಸಿಯೇಶನ್ ಜನರಲ್ ಮ್ಯಾನೇಜರ್ ಪ್ರದೀಪ್ ಕುಮಾರ್ ಮಾತನಾಡಿ, ಈ ಕ್ರೀಡಾಕೂಟಕ್ಕೆ ದೇಶದ ವಿವಿಧ ಭಾಗದ 300ಕ್ಕೂ ಅಧಿಕ ಕ್ರೀಡಾಪಟುಗಳು ಆಗಮಿಸಿದ್ದಾರೆ. ಮಕ್ಕಳಿಗೆ ಮನೆಗಳಲ್ಲಿಯೇ ಕ್ರೀಡಾ ಸಂಸ್ಕೃತಿಯನ್ನು ಬೆಳೆಸಿಕೊಡಬೇಕು ಎಂದು ತಿಳಿಸಿದರು.
ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತೆ ನಾಝಿಯ ಸುಲ್ತಾನ್, ಎಂಆರ್‌ಪಿಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಮಿಯಾರ್, ಉದ್ಯಮಿಗಳಾದ ರಘು ಶರ್ಮ, ಮುಕುಂದ್ ಕಾಮತ್, ಕಶಾರ್ಪ್ ಫಿಟ್ನೆಸ್ ನಿರ್ದೇಶಕ ಆನಂದ್ ಪ್ರಭು, ಝಿಹಾ ಎಚ್.ಎಂ., ಪವರ್ ಲಿಫ್ಟಿಂಗ್ ಇಂಡಿಯ ಕಾರ್ಯದರ್ಶಿ ಪಿ.ಜೆ. ಜೋಸೆಫ್, ಆಸ್ಟ್ರೇಲಿಯ ಪವರ್ ಲಿಫ್ಟಿಂಗ್ ಕೋಚ್ ಗ್ಯಾರಿ ವಿಲಿಯಮ್ಸ್, ಮಾಜಿ ಮೇಯರ್ ಪುರಂದರ ಕೂಳೂರು, ಕೂಟದ ನಿರ್ದೇಶಕ, ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಕುದ್ರೋಳಿ, ಅಸೋಸಿಯೇಶನ್ ದ.ಕ. ಜಿಲ್ಲಾಧ್ಯಕ್ಷ ಉಮೇಶ್ ಗಟ್ಟಿ, ಕಾರ್ಯದರ್ಶಿ ಮಧುಚಂದ್ರ ಎಂ., ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಖಜಾಂಚಿ ಜಯರಾಮ ಶೆಟ್ಟಿಗಾರ್, ಕಶಾರ್ಪ್ ಫಿಟ್ನೆಸ್ ನಿರ್ದೇಶಕಿ ಡಾ. ಸಾವಿಲ್ ಉಚ್ಚಿಲ್ ಮೊದಲಾದವರಿದ್ದರು.
ರಾಷ್ಟ್ರ ಮಟ್ಟದ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ಗೆ ದರ್ಶನ್ ಎಚ್.ವಿ. ಚಾಲನೆ ನೀಡಿದರು. ಪ್ರದೀಪ್ ಕುಮಾರ್, ನಾಝಿಯ ಸುಲ್ತಾನ್, ಕೃಷ್ಣ ಹೆಗ್ಡೆ ಮಿಯಾರ್ ಮೊದಲಾದವರಿದ್ದರು.