ಎ.ಜೆ. ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗ ಹಾಗೂ ತರಬೇತಿ ಮತ್ತು ಉದ್ಯೋಗ ವಿಭಾಗದ ಸಹಯೋಗದಲ್ಲಿ ಗುರುವಾರ ಸಿಂಗ್ಯುಲಾರಿಟಿ 24 ಗಂಟೆಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಎ.ಜೆ. ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗ ಹಾಗೂ ತರಬೇತಿ ಮತ್ತು ಉದ್ಯೋಗ ವಿಭಾಗದ ಸಹಯೋಗದಲ್ಲಿ ಗುರುವಾರ ಸಿಂಗ್ಯುಲಾರಿಟಿ 24 ಗಂಟೆಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಕಾರ್ಯಕ್ರಮ ಉದ್ಘಾಟನೆಗೊಂಡಿತು.
ದಕ್ಷಿಣ ಕನ್ನಡ

ಕೋಡಿಂಗ್ ಕ್ಷೇತ್ರದಲ್ಲಿ ಎಐ ಕ್ರಾಂತಿ

ಎ.ಜೆ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಕಾರ್ಯಕ್ರಮ

ವರದಿ: ಶ್ರವಣ್‌ಕುಮಾರ್ ನಾಳ

ಮಂಗಳೂರು: ಕೋಡಿಂಗ್ ಕ್ಷೇತ್ರದಲ್ಲಿ ಎಐ ಕ್ರಾಂತಿಯನ್ನೇ ಸೃಷ್ಟಿಸಿದೆ. ಸಾಫ್ಟ್‌ವೇರ್ ಡೆವಲಪರ್‌ಗಳಿಗೆ ಇದು ಅತ್ಯಂತ ಶಕ್ತಿಶಾಲಿ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಜುಎಗೊ ಸ್ಟುಡಿಯೋಸ್‌ನ ಉಪಾಧ್ಯಕ್ಷ ಹಾಗೂ ಡೆಲಿವರಿ ಹೆಡ್ ಅಭಿಜಿತ್ ಶೆಟ್ಟಿ ಹೇಳಿದರು.

ಎ.ಜೆ. ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ವಿಭಾಗ ಹಾಗೂ ತರಬೇತಿ ಮತ್ತು ಉದ್ಯೋಗ ವಿಭಾಗದ ಸಹಯೋಗದಲ್ಲಿ ಗುರುವಾರ ನಡೆದ ಸಿಂಗ್ಯುಲಾರಿಟಿ 24 ಗಂಟೆಗಳ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೆಲವೇ ಸೆಕೆಂಡುಗಳಲ್ಲಿ ಸಂಕೀರ್ಣ ಪ್ರೋಗ್ರಾಮಿಂಗ್ ಕೋಡ್‌ಗಳನ್ನು ಬರೆಯುವುದು, ದೋಷಗಳನ್ನು (ಚ್ಠಿಜ) ಹುಡುಕುವುದು ಮತ್ತು ಪರಿಹಾರಗಳನ್ನು ಸೂಚಿಸುವುದರಲ್ಲಿ ಎಐ ಮುಂಚೂಣಿಯಲ್ಲಿದೆ. ಇದರಿಂದಾಗಿ ಹೊಸ ಆ್ಯಪ್‌ಗಳು ಮತ್ತು ತಂತ್ರಜ್ಞಾನಗಳ ನಿರ್ಮಾಣ ವೇಗಗೊಂಡಿದೆ. ಕೋಡಿಂಗ್‌ನಷ್ಟೇ ಪ್ರಮುಖವಾದ ಡಿಕೋಡಿಂಗ್ ಅಥವಾ ದತ್ತಾಂಶ ವಿಶ್ಲೇಷಣಾ ಕಾರ್ಯದಲ್ಲೂ ಎಐ ನಿಖರತೆ ಮೆರೆಯುತ್ತಿದೆ. ಅಸಂಖ್ಯಾತ ಮತ್ತು ಅರ್ಥವಾಗದ ಕೋಡ್‌ಗಳು ಅಥವಾ ಸಂಕೀರ್ಣ ಮಾಹಿತಿಯನ್ನು ಸರಳ ಭಾಷೆಗೆ ಪರಿವರ್ತಿಸಲು ಇದು ನೆರವಾಗುತ್ತದೆ. ಸೈಬರ್ ಭದ್ರತೆ ಮತ್ತು ದೊಡ್ಡ ಪ್ರಮಾಣದ ಮಾಹಿತಿ (ಆಜಿಜ ಈಠಿ)ನಿರ್ವಹಣೆಯಲ್ಲಿ ಡಿಕೋಡಿಂಗ್ ಪ್ರಕ್ರಿಯೆಯನ್ನು ಎಐ ಅತ್ಯಂತ ಸುಲಭಗೊಳಿಸಿದೆ ಎಂದರು.

ಎ.ಜೆ. ತಾಂತ್ರಿಕ ಮಹಾವಿದ್ಯಾಲಯದ ಕ್ಯಾಂಪಸ್ ಡೈರೆಕ್ಟರ್ ಡಾ.ಟಿ ಜಯಪ್ರಕಾಶ್ ರಾವ್ ಅಧ್ಯಕ್ಷತೆ ವಹಿಸಿದ್ದರು.

ಸಂಸ್ಥೆ ಪ್ರಾಚಾರ್ಯ ಡಾ. ಅಶೋಕ್ ಕುಮಾರ್ ಟಿ, ಉಪಪಾಚಾರ್ಯ ಡಾ. ಆಂಟೋನಿ ಪಿ. ಜೆ, ತರಬೇತಿ ಮತ್ತು ಉದ್ಯೋಗ ನಿಯೋಜನೆ ವಿಭಾಗ ಡೀನ್ ಡಾ. ಬ್ರೂಸ್ ಮ್ಯಾಥ್ಯೂ, ಕಾರ್ಯಕ್ರಮದ ಸಂಯೋಜಕರಾದ ಸಹಾಯಕ ಪ್ರಾಧ್ಯಾಪಕರಾದ ಶೇರಾನ್ ಸಿ. ಡಿಸೋಜ, ಸ್ನಿತಾ ಶೆಟ್ಟಿ, ತರಬೇತಿ ಮತ್ತು ಉದ್ಯೋಗ ನಿಯೋಜನೆ ವಿಭಾಗ ಮುಖ್ಯಸ್ಥ ಸತ್ಯೇಂದ್ರ ಭಟ್ ಜೆ ಸಹಿತ ಹಲವರಿದ್ದರು.

ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸ್ನಿತಾ ಶೆಟ್ಟಿ ವಂದಿಸಿದರು. ಶಿವಾನಿ ಕಾರ್ಯಕ್ರಮ ನಿರೂಪಿಪಿಸಿದರು.

ಒಂದು ಲಕ್ಷ ರೂ. ಬಹುಮಾನ

ಹ್ಯಾಕಥಾನ್‌ನಲ್ಲಿ ಕರಾವಳಿ ಬುದ್ಧಿಮತ್ತೆ, ಪೂರೈಕೆ ಸರಪಳಿ ಬುದ್ಧಿಮತ್ತೆ ಹಾಗೂ ಕೈಗಾರಿಕಾ ಬುದ್ಧಿಮತ್ತೆ ಎಂಬ ಮೂರು ಪ್ರಮುಖ ತಂತ್ರಜ್ಞಾನ ವಿಭಾಗಗಳನ್ನು ಒಳಗೊಂಡಿದ್ದು, ಆಯಾ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಕಾಲೀನ ಸವಾಲುಗಳಿಗೆ ತಂತ್ರಜ್ಞಾನ, ದತ್ತಾಂಶ ಹಾಗೂ ನವೀನ ಚಿಂತನೆಯ ಮೂಲಕ ಪರಿಹಾರ ಕಂಡುಕೊಳ್ಳಲು ಸ್ಪರ್ಧಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಒಟ್ಟು ಒಂದು ಲಕ್ಷ ರೂ. ಬಹುಮಾನ ನೀಡಲಾಗುತ್ತಿದ್ದು, ನವೀನ, ತಾಂತ್ರಿಕವಾಗಿ ಪರಿಣಾಮಕಾರಿ ಹಾಗೂ ಸಮಾಜಕ್ಕೆ ಉಪಯುಕ್ತ ಪರಿಹಾರಗಳನ್ನು ರೂಪಿಸುವ ತಂಡಗಳಿಗೆ ಪ್ರೋತ್ಸಾಹ ದೊರೆಯಲಿದೆ. ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳ್ನಾಡು ಸೇರಿದಂತೆ ಸುಮಾರು 200ಕ್ಕೂ ಅಧಿಕ ಸಂಸ್ಥೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಇಂದಿನ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿ ಬದಲಾಗಿದೆ. ಇದು ಕೇವಲ ಒಂದು ಯಂತ್ರದ ಆಟವಲ್ಲ, ಮನುಷ್ಯನಂತೆ ಯೋಚಿಸುವ ಮತ್ತು ಸಮಸ್ಯೆಗಳನ್ನು ನಿಮಿಷಗಳಲ್ಲಿ ಪರಿಹರಿಸುವ ಅದ್ಭುತ ಶಕ್ತಿಯಾಗಿದೆ. ದತ್ತಾಂಶಗಳ ವಿಶ್ಲೇಷಣೆಯಿಂದ ಹಿಡಿದು ಸೃಜನಶೀಲ ಕೆಲಸಗಳವರೆಗೆ ಎಐ ತನ್ನ ಅಸಾಧಾರಣ ಕಾರ್ಯಕ್ಷಮತೆಯಿಂದ ಎಲ್ಲರ ಗಮನ ಸೆಳೆದಿದೆ.
ಡಾ.ಟಿ ಜಯಪ್ರಕಾಶ್ ರಾವ್, ಕ್ಯಾಂಪಸ್ ಡೈರೆಕ್ಟರ್ ಎ.ಜೆ. ತಾಂತ್ರಿಕ ಮಹಾವಿದ್ಯಾಲಯ, ಮಂಗಳೂರು