ರಾಮಕೃಷ್ಣ ಮಿಷನ್ ಮಂಗಳೂರು, ನಿಟ್ಟೆ ಎಜುಕೇಷನ್ ಟ್ರಸ್ಟ್ ಹಾಗೂ ಸ್ವಚ್ಚ ಮಂಗಳೂರು ಪ್ರತಿಷ್ಠಾನದ ಸಹಯೋಗದಲ್ಲಿ ಡಾ. ಎನ್. ವಿನಯ ಹೆಗ್ಡೆ ಅವರ ಜನ್ಮದಿನದ ಅಂಗವಾಗಿ ಎನ್. ವಿನಯ ಹೆಗ್ಡೆ ಮತ್ತು ಸಮಾಜೋದ್ಯಮ ಎಂಬ ವಿಷಯದ ಕುರಿತಾಗಿ ಶುಕ್ರವಾರ ರಾಮಕೃಷ್ಣ ಮಠದ ಅಮೃತ ಭವನದಲ್ಲಿ ವಿಶೇಷ ಸಂವಾದ ಕಾರ್ಯಕ್ರಮ ನಡೆಯಿತು. 
ದಕ್ಷಿಣ ಕನ್ನಡ

ದಿ.ಎನ್. ವಿನಯ ಹೆಗ್ಡೆ ವಿಶೇಷ ಸಂವಾದ ಕಾರ್ಯಕ್ರಮ

ಮಂಗಳೂರು: ರಾಮಕೃಷ್ಣ ಮಿಷನ್ ಮಂಗಳೂರು, ನಿಟ್ಟೆ ಎಜುಕೇಷನ್ ಟ್ರಸ್ಟ್ ಹಾಗೂ ಸ್ವಚ್ಚ ಮಂಗಳೂರು ಪ್ರತಿಷ್ಠಾನದ ಸಹಯೋಗದಲ್ಲಿ ಡಾ. ಎನ್. ವಿನಯ ಹೆಗ್ಡೆ ಅವರ ಜನ್ಮದಿನದ ಅಂಗವಾಗಿ ಎನ್. ವಿನಯ ಹೆಗ್ಡೆ ಮತ್ತು ಸಮಾಜೋದ್ಯಮ ಎಂಬ ವಿಷಯದ ಕುರಿತಾಗಿ ಶುಕ್ರವಾರ ರಾಮಕೃಷ್ಣ ಮಠದ ಅಮೃತ ಭವನದಲ್ಲಿ ವಿಶೇಷ ಸಂವಾದ ಕಾರ್ಯಕ್ರಮ ನಡೆಯಿತು.
ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಪೂಜ್ಯ ಸ್ವಾಮಿ ಜಿತಕಾಮನಂದಜಿ ಮಹಾರಾಜ್ ಮಾತನಾಡುತ್ತಾ ನಿಟ್ಟೆ ವಿನಯ ಹೆಗಡೆ ಅವರ ಜೀವನ ಚರಿತ್ರೆ, ಪಠ್ಯಕ್ರಮ ರೀತಿಯಲ್ಲಿ ಪ್ರಕಟವಾಗಿ ಮುಂದಿನ ಪೀಳಿಗೆಗೆ ಅವರು ಬದುಕಿದ ಶೈಲಿ ತಿಳಿಯಬೇಕು. ನಿಟ್ಟೆ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ 46 ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯನ್ನು ಜಗತ್ತಿನಲ್ಲಿ ಗುರುತಿಸುವ ಮಟ್ಟಕ್ಕೆ ಶಿಕ್ಷಣ ಕ್ಷೇತ್ರ ಪರಿಶ್ರಮಪಟ್ಟು ಕಟ್ಟಿ ಬೆಳೆಸಿದವರು. ಅವರು ಕಟ್ಟಿರುವ ಸಂಸ್ಥೆ ಜಗತ್ತಿನಲ್ಲಿ ಗುರುತಿಸಬಲ್ಲಂತಹ ಸಂಸ್ಥೆಯಾಗಿದೆ. ಬಡ ವಿದ್ಯಾರ್ಥಿಗಳಿಗೆ, ಮಹಿಳೆಯರ ಸಬಲೀಕರಣಕ್ಕೆ ಹಾಗೂ ಗ್ರಾಮೀಣಾಭಿವೃದ್ಧಿಗೆ ಶ್ರಮಿಸಿರುವುದು ಇವರ ಸಾಧನೆಗೆ ಹಿಡಿದ ಕೈಗನ್ನಡಿ ಎಂದರು.
ಹ್ಯಾಂಗೊ ಐಸ್ ಕ್ರೀಮ್ಸ್ ಪ್ರೈವೇಟ್ ಲಿಮಿಟೆಡ್‌ನ ಎಂ.ಡಿ ಪ್ರದೀಪ್ ಜಿ ಪೈ, ಯೆನೆಪೋಯಾ ವಿಶ್ವವಿದ್ಯಾಲಯದ ಪ್ರೊ. ಚಾನ್ಸಲರ್ ಮೊಹಮ್ಮದ್ ಫರ್ಹಾದ್, ನಿಟ್ಟೆ ವಿಶ್ವವಿದ್ಯಾಲಯದ ಎನ್. ವಿಶಾಲ್ ಹೆಗ್ಡೆ, ಆಳ್ವಾಸ ಎಜುಕೇಷನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವಾ, ಪ್ರಮುಖರಾದ ಗಣೇಶ್ ಕಾರ್ಣಿಕ್, ರಂಜನ್ ಬೆಳ್ಳರ್ಪಾಡಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ದಿಲ್ ರಾಜ್ ಆಳ್ವಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಂತೋಷ ಆಳ್ವಾ ಸ್ವಾಗತಿಸಿದರು. ಸಂವಾದಕಾರರಾಗಿ ರಂಜನ್ ಬೆಳ್ಳರ್ಪಾಡಿ ನಿರೂಪಿಸಿದರು.