ಮೂಲ್ಕಿ: ದೇವರ ಮೇಲಿನ ವಿಶ್ವಾಸ ನಮ್ಮ ಜೀವನವನ್ನು ಉತ್ತಮವಾಗಿ ಮುಂದುವರಿಯಲು ಸಹಕರಿಸುತ್ತದೆ. ಸಂಘಟಿತ ಪ್ರಾರ್ಥನೆಗೆ ದೇವರು ಸದಾ ಆಶೀರ್ವಾದ ನೀಡುತ್ತಾರೆ ಎಂದು ಮಂಗಳೂರು ಧರ್ಮಗುರು ಸಂತೋಷ್ ರಾಡ್ರಿಗಸ್ ಹೇಳಿದರು.
ಮೂಲ್ಕಿ ಇನ್ಯಾಕ್ಯುಲೇಟ್ ಕಂಸೆಪ್ಶೃನ್ ಚರ್ಚ್ ವಾರ್ಷಿಕ ಹಬ್ಬದ ಪೂರ್ವಭಾವಿಯಾಗಿ ನಡೆದ ಪರಮ ಪ್ರಸಾದ ಪೂಜೆಯ ಮುಖ್ಯ ಯಾಜಕರಾಗಿ ಆಶೀರ್ವಚನ ನೀಡಿದರು.
ಮೂಲ್ಕಿ ಚರ್ಚ್‌ನಿಂದ ಕಾರ್ನಾಡು ಪೇಟೆ ಮಾರ್ಗವಾಗಿ ಪರಮ ಪ್ರಸಾದದ ಮೆರವಣಿಗೆ ನಡೆದು ಬಳಿಕ ಆರಾಧನೆ ನಡೆಯಿತು. ಮೂಲ್ಕಿ ಚರ್ಚ್ ಧರ್ಮಗುರು ಫಾ.ಆಂಟನಿ ಶೇರಾ, ಡಿವೈನ್ ಕಾಲ್ ಸೆಂಟರ್‌ನ ಫಾ.ಮ್ಯಾಕ್ಸಿಮ್ ಪಿಂಟೋ ಎಸ್.ವಿ.ಡಿ, ಫಾ.ವಾಲ್ಟರ್ ಮೆಂಡೋನ್ಸಾ ಎಸ್.ವಿ.ಡಿ, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಓಸ್ವಲ್ಡ್ ಕೊರೆಯಾ, ಕಾರ್ಯದರ್ಶಿ ಎಡ್ವಿನ್ ಡಿಸೋಜ, ವಾರ್ಡ್ ಗುರಿಕಾರರು, ಪಾಲನಾ ಸಮಿತಿ ಸದಸ್ಯರು ಮತ್ತು ಧರ್ಮ ಸಭಾ ಸದಸ್ಯರು ಇದ್ದರು.