ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ಅವರ ನೇತೃತ್ವದಲ್ಲಿ ರೈಲ್ವೆ ಮಾರ್ಗದಲ್ಲಿ ಎದುರಾಗುವ ಸಮಾಲುಗಳ ಬಗ್ಗೆ ಸಮಗ್ರ ಪರಿಶೀಲನೆ, ಮೂಲಸೌಕರ್ಯ ಮತ್ತು ಸುರಕ್ಷತಾ ವ್ಯವಸ್ಥೆಗಳ ಸಿದ್ಧತೆಯನ್ನು ಪರಿಶೀಲಿಸಲಾಯಿತು. 
ದಕ್ಷಿಣ ಕನ್ನಡ

ಕೊಂಕಣ ರೈಲ್ವೆ ಮಾರ್ಗದ ಮೂಗಾರು ಪೂರ್ವ ಪರಿಶೀಲನೆ

ಮಂಗಳೂರು: ಪ್ರತೀ ವರ್ಷ ಮಳೆಗಾಲದ ಸಂದರ್ಭ ರೈಲು ಸಂಚಾರ ಹಾಗೂ ಕಾರ್ಯಾಚರಣೆಗೆ ಎದುರಾಗುವ ಸವಾಲುಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೊಂಕಣ ರೈಲ್ವೆ ಮಾರ್ಗದಾದ್ಯಂತ ಮುಂಗಾರು ಪೂರ್ವ ಪರಿಶೀಲನಾ ಕಾರ್ಯಕ್ರಮ ನಡೆಯಿತು.
ಕೊಂಕಣ ರೈಲ್ವೆ ಕಾರ್ಪೊರೇಷನ್ ಲಿಮಿಟೆಡ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ಅವರ ನೇತೃತ್ವದಲ್ಲಿ ರೈಲ್ವೆ ಮಾರ್ಗದಲ್ಲಿ ಎದುರಾಗುವ ಸಮಾಲುಗಳ ಬಗ್ಗೆ ಸಮಗ್ರ ಪರಿಶೀಲನೆ, ಮೂಲಸೌಕರ್ಯ ಮತ್ತು ಸುರಕ್ಷತಾ ವ್ಯವಸ್ಥೆಗಳ ಸಿದ್ಧತೆಯನ್ನು ಪರಿಶೀಲಿಸಲಾಯಿತು.
ಮಾರ್ಚ್ 10ರಂದು ಮಡಗಾಂವ್- ತೋಕುರ್‌ವರೆಗೆ ಇರುವ ವಿಭಾಗ, ಮಡಗಾಂವ್-ರೋಹಾ ವರೆಗೆ ಇರುವ ವಿಭಾಗದ ಪರಿಶೀಲನೆ ನಡೆಸಲಾಯಿತು. ಪರಿಶೀಲನೆಯ ವೇಳೆ ರೈಲು ಹಳಿ, ಸೇತುವೆಗಳು, ಸುರಂಗಗಳು, ಬೆಟ್ಟ ಕತ್ತರಿಕೆಗಳು, ಇಳಿಜಾರು ಪ್ರದೇಶಗಳು, ಸಿಗ್ನಲಿಂಗ್ ವ್ಯವಸ್ಥೆಗಳು, ನೀರು ನಿಲ್ಲುವ ಸಾಧ್ಯತೆಯಿರುವ ಸ್ಥಳಗಳು, ನಿಲ್ದಾಣ ಮೂಲಸೌಕರ್ಯ ಮತ್ತು ಮಾರ್ಗದಾದ್ಯಂತ ಸ್ಥಾಪಿಸಲಾದ ಸೌರ ಬೆಳಕು ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದು ಸುರಕ್ಷತಾ ವ್ಯವಸ್ಥೆಗಳಿಗೆ ಹಲವು ಯೋಜನೆ ರೂಪಿಸಲಾಯಿತು ಎಂದು ಕೊಂಕಣ ರೈಲ್ವೆ ಮಾಹಿತಿ ನೀಡಿದೆ.