ಮಂಗಳೂರು : ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್)ನ ಮುಖ್ಯ ಜಾಗೃತಾಧಿಕಾರಿಯಾಗಿ 2011ನೇ ಬ್ಯಾಚ್‌ನ ನಾಗಾಲ್ಯಾಂಡ್ ಕೇಡರ್‌ನ ಐಎಎಸ್ ಅಧಿಕಾರಿ ಮೊಹಮ್ಮದ್ ಅಲಿ ಶಿಹಾಬ್ ಎ. ಅವರು ಅಧಿಕಾರ ಸ್ವೀಕರಿಸಿದರು.
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದಲ್ಲಿರುವ ಎಂಆರ್‌ಪಿಎಲ್, ಒಎನ್‌ಜಿಸಿಯ ಅಂಗಸಂಸ್ಥೆಯಾಗಿದ್ದು, ಶೆಡ್ಯೂಲ್ ಎ ಮಿನಿರತ್ನ ಕೇಂದ್ರ ಸಾರ್ವಜನಿಕ ವಲಯದ ಉದ್ಯಮವಾಗಿದೆ. ಕೇಂದ್ರ ಸರ್ಕಾರದ ಸಮರ್ಥ ಪ್ರಾಧಿಕಾರವು ಮೊಹಮ್ಮದ್ ಅಲಿ ಶಿಹಾಬ್ ಎ. ಅವರನ್ನು ಎಂಆರ್‌ಪಿಎಲ್‌ನ ಮುಖ್ಯ ಜಾಗೃತಾಧಿಕಾರಿಯಾಗಿ ನೇಮಕ ಮಾಡಲು ಅನುಮೋದನೆ ನೀಡಿತ್ತು.
2011ನೇ ಬ್ಯಾಚ್‌ನ ಭಾರತೀಯ ಆಡಳಿತ ಸೇವಾ ಅಧಿಕಾರಿಯಾಗಿರುವ ಅವರು ಆಡಳಿತ ಮತ್ತು ಸಾರ್ವಜನಿಕ ಆಡಳಿತ ಕ್ಷೇತ್ರದಲ್ಲಿ ವ್ಯಾಪಕ ಅನುಭವ ಹೊಂದಿದ್ದಾರೆ. ರಾಜ್ಯ ಸಚಿವಾಲಯ ಹಾಗೂ ಜಿಲ್ಲಾಡಳಿತದಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿರುವ ಅವರು, ನಾಗಾಲ್ಯಾಂಡ್ ಸರ್ಕಾರದ ವಿವಿಧ ಪ್ರಮುಖ ಅಭಿವೃದ್ಧಿ ಕ್ಷೇತ್ರಗಳಲ್ಲಿಯೂ ಸೇವೆ ಸಲ್ಲಿಸಿದ್ದಾರೆ.
ಸಾರ್ವಜನಿಕ ಆಡಳಿತದಲ್ಲಿ ಪರಿಣಾಮಕಾರಿ ಫಲಿತಾಂಶಗಳನ್ನು ಸಾಧಿಸಿರುವ ಅನುಭವ ಹೊಂದಿರುವ ಶಿಹಾಬ್ ಅವರ ನೇತೃತ್ವದಲ್ಲಿ ಸಂಸ್ಥೆಯ ಜಾಗೃತಿ ಮತ್ತು ಪಾರದರ್ಶಕತಾ ವ್ಯವಸ್ಥೆ ಮತ್ತಷ್ಟು ಬಲಗೊಳ್ಳುವ ನಿರೀಕ್ಷೆಯನ್ನು ಎಂಆರ್‌ಪಿಎಲ್ ವ್ಯಕ್ತಪಡಿಸಿದೆ.