ನರಿಂಗಾನ ಗ್ರಾಮದ ತೌಡುಗೋಳಿ ಆರೋಗ್ಯ ಕ್ಷೇಮ ಕೇಂದ್ರ, ಕಲ್ಲರಕೋಡಿ ಪ್ರೌಢಶಾಲಾ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿದರು. ಪ್ರಶಾಂತ್ ಕಾಜವ, ರಮೇಶ್ ಶೆಟ್ಟಿ, ಜ್ಯೋತಿ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ನರಿಂಗಾನ ಜಿಲ್ಲೆಗೆ ಮಾದರಿ ಗ್ರಾಮ

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಗ್ರಾಮಸ್ಥರ ಸಹಕಾರದಿಂದ 20 ವರ್ಷಗಳಲ್ಲಿ ನರಿಂಗಾನ ಗ್ರಾಮವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುತ್ತಾ ಬಂದಿರುವ ಫಲವಾಗಿ ಜಿಲ್ಲೆಗೆ ಮಾದರಿ ಗ್ರಾಮವಾಗುವಷ್ಟು ಅಭಿವೃದ್ಧಿ ಕಂಡಿದೆ ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.
ನರಿಂಗಾನ ಗ್ರಾಮದ ತೌಡುಗೋಳಿ ಆರೋಗ್ಯ ಕ್ಷೇಮ ಕೇಂದ್ರ, ಕಲ್ಲರಕೋಡಿ ಪ್ರೌಢಶಾಲಾ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಮಹಮ್ಮದ್ ನವಾಜ್ ಮಾತನಾಡಿದರು. ನರಿಂಗಾನ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ, ನರಿಂಗಾನ ಗ್ರಾಪಂ ನಿಕಟಪೂರ್ವ ಉಪಾಧ್ಯಕ್ಷೆ ಜ್ಯೋತಿ ಡಿಸೋಜ, ಪಂಚಾಯಿತಿ ಸದಸ್ಯರಾದ ಶೈಲಜಾ ಶೆಟ್ಟಿ, ಶೇಖಬ್ಬ, ಮುರಳೀಧರ ಶೆಟ್ಟಿ ಮೋರ್ಲ, ಸುಂದರ ಪೂಜಾರಿ, ರಹಿಮಾನ್, ಸಲೀಂ, ಮಲ್ಲಿಕಾ, ಲತೀಫ್, ಪಿಡಿಒ ಶ್ವೇತಾ, ಕಾರ್ಯದರ್ಶಿ ನಳಿನಿ ಎ.ಕೆ., ಚಂದ್ರಹಾಸ್ ಶೆಟ್ಟಿ, ಕಾಂಗ್ರೆಸ್ ವಲಯಾಧ್ಯಕ್ಷ ಹನೀಫ್ ಶೈನ್, ಬಿಜೆಪಿ ಮುಖಂಡರಾದ ಪ್ರೇಮಾನಂದ ರೈ, ಅಶ್ರಫ್ ಕಲ್ಲರಕೋಡಿ, ಬಿ.ನಾರಾಯಣ ಶೆಟ್ಟಿ, ಯುವಕ ಮಂಡಲ ಮಾಜಿ ಗೌರವಾಧ್ಯಕ್ಷರಾದ ಉದಯ ಶಂಕರ ಶೆಟ್ಟಿ, ನವೀನ್ ಶೆಟ್ಟಿ, ಅಂಗನವಾಡಿ ಮೇಲ್ವಿಚಾರಕಿ ಮುಬೀನಾ, ಅಂಗನವಾಡಿ ಶಿಕ್ಷಕಿ ಚಂದ್ರಾವತಿ ಮೊದಲಾದವರು ಉಪಸ್ಥಿತರಿದ್ದರು. ಕಲ್ಲರಕೋಡಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ನಯನಾ ಕುಮಾರಿ ಸ್ವಾಗತಿಸಿದರು. ಪ್ರಭಾರ ಮುಖ್ಯ ಶಿಕ್ಷಕಿ ಸುಜಾತಾ ವಂದಿಸಿದರು. ಲತೀಫ್ ಕಾಪಿಕಾಡ್ ನಿರ್ವಹಿಸಿದರು.