ಮಂಗಳೂರು: ನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಹಠಾತ್ ಆಗಿ ಅಧಿಕಾರಿಗಳು, ಸಿಬ್ಬಂದಿ ಜತೆ ಸೇರಿ ತಪಾಸಣೆ ನಡೆಸಿದ್ದು, ಈ ವೇಳೆ ನಿಷೇಧಿತ ಮೊಬೈಲ್, ಚಾರ್ಜರ್‌ಗಳನ್ನು ಪತ್ತೆಯಾಗಿದೆ.
ಜಿಲ್ಲಾ ಕಾರಾಗೃಹ ಅಧಿಕಾರಿಯಾದ ಶರಣ ಬಸಪ್ಪ ಅವರು ಸಿಬ್ಬಂದಿಗಳ ಜತೆ ಸೇರಿ ಜ.14ರಂದು ರಾತ್ರಿ ಕಾರಾಗೃಹದಲ್ಲಿರುವ ಸೆಲ್‌ನಲ್ಲಿ ಬಿಗು ತಪಾಸಣೆ ನಡೆಸಿದ್ದಾರೆ. ಈ ಸಂದರ್ಭ ‘ಎ’ ವಿಭಾಗದ ಕೊಠಡಿ ಸಂಖ್ಯೆ 3ರಲ್ಲಿ ಮತ್ತು ಬಿ ವಿಭಾಗದ ಕೊಠಡಿ ಸಂಖ್ಯೆ 5 ರಲ್ಲಿ , ಎ ವಿಭಾಗದ ಕೊಠಡಿ ಸಂಖ್ಯೆ 3 ರಲ್ಲಿ ವಿವೋ ಮೊಬೈಲ್ ಪೋನ್, ಏರ್ ಟೆಲ್ ಸಿಮ್ ಕಾರ್ಡ್, ಕಪ್ಪು ಬಣ್ಣದ ಹೆಚ್‌ಡಿಎಂ ಕೀಪ್ಯಾಡ್ ಮೋಬೈಲ್ ಏರ್ ಟೆಲ್ ಸಿಮ್ ಕಾರ್ಡ್, ಮೊಬೈಲ್ ಚಾರ್ಜರ್ ಅಡೆಪ್ಟರ್, ಚಾರ್ಜರ್ ಕೇಬಲ್ ಗಳು-2 ಲಭಿಸಿದೆ. ಬಿ ವಿಭಾಗದ ಕೊಠಡಿ ಸಂಖ್ಯೆ 5 ರಲ್ಲಿ 1 ಕಂದು ಬಣ್ಣದ ನೋಕಿಯಾ ಕೀ ಪ್ಯಾಡ್ ಮೊಬೈಲ್ ಪೋನ್ ಪತ್ತೆಯಾಗಿದೆ.
ಈ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.