ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನದ ಸಭಾ ಕಾರ್ಯಕ್ರಮವನ್ನು ಹರೀಶ್ ಎಸ್.ಇಂಜಾಡಿ ಉದ್ಘಾಟಿಸಿದರು. ಪ್ರಮುಖರಾದ ಭರತ್ ನೆಕ್ರಾಜೆ, ಸುಜಾತಾ ಕಲ್ಲಾಜೆ, ಗಿರಿಧರ್ ಸ್ಕಂದ ಮೊದಲಾದವರಿದ್ದರು.
ಸುಳ್ಯ ಪಶು ಆಸ್ಪತ್ರೆ ಆಡಳಿತ ಪಶುವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಹಾಗೂ ಕಡಬ ಪಶು ಕಚೇರಿಯ ವಿಸ್ತರಣಾಧಿಕಾರಿ ನಿರಂಜನ್ ಬಿ.ಎಸ್. ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು. ಮಿಶ್ರ ತಳಿ ಕರುಗಳ ಪ್ರದರ್ಶನದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಸುಮಾರು 70 ಕರುಗಳು ಪ್ರದರ್ಶನದಲ್ಲಿ ಪಾಲ್ಗೊಂಡಿದ್ದವು.
ಸುಬ್ರಹ್ಮಣ್ಯ ಪಶು ವೈದ್ಯಕೀಯ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮಲ್ಲಿಕಾ ಸ್ವಾಗತಿಸಿದರು. ಡಾ.ವೆಂಕಟಚಲಪತಿ ಸಹಕರಿಸಿದರು. ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ಹಾಗೂ ಕೃಷಿಕ ಕಿಶೋರ್ ಕುಮಾರ್ ಕೂಜುಗೋಡು ನಿರೂಪಿಸಿದರು.