ಮೊಟ್ಟೆತ್ತಡ್ಕ ಮಿಶನ್‌ಮೂಲೆ ಶ್ರೀ ರಕ್ತೇಶ್ವರಿ - ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಶಿಲಾಮಯ ಗರ್ಭಗುಡಿಗೆ ಶಿಲಾನ್ಯಾಸ ನೆರವೇರಿತು. 
ದಕ್ಷಿಣ ಕನ್ನಡ

ಧರ್ಮ ಸಂಗ್ರಹದಿಂದ ಮೋಕ್ಷ Mission Moole Temple

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿಕೆ
  • ಶಿಲಾಮಯ ಗರ್ಭಗುಡಿ ಶಿಲಾನ್ಯಾಸ
ಪುತ್ತೂರು: ಸನ್ಮಾರ್ಗದ ಜೀವನದಲ್ಲಿ ಮುನ್ನಡೆದು ಮೋಕ್ಷ ಪಡೆಯಲು ಧರ್ಮದ ಸಂಗ್ರಹದ ಅಗತ್ಯವಿದೆ. ಶ್ರದ್ಧಾಭಕ್ತಿಯಿಂದ ಕೆಲಸ ಮಾಡಿದಾಗ ದೇವಿಯ ಅನುಗ್ರಹ ಲಭಿಸುತ್ತದೆ. ಈ ಮೂಲಕ ಎಲ್ಲದರೂ ಯಶಸ್ಸು ಲಭಿಸುತ್ತದೆ ಎಂದು ಹಾಸನ ಅರೇಮಾದನ ಹಳ್ಳಿ ಶ್ರೀ ವಿಭೂಷಿತ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು.
ಮೊಟ್ಟೆತ್ತಡ್ಕ ಮಿಶನ್ ಮೂಲೆ ಶ್ರೀ ರಕ್ತೇಶ್ವರಿ - ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಶಿಲಾಮಯ ಗರ್ಭಗುಡಿ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ನಾಗೇಶ್ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಾಜಿ ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿದ್ದರು.
ಸಮಿತಿ ಗೌರವಾಧ್ಯಕ್ಷ ಡಾ.ಸುರೇಶ್ ಪುತ್ತೂರಾಯ, ಹೇಮನಾಥ ಶೆಟ್ಟಿ, ಬೂಡಿಯಾರು ರಾಧಾಕೃಷ್ಣ ರೈ, ಅರುಣ್‌ಕುಮಾರ್, ಜಯಂತ ನಡುಬೈಲು, ಅಜಿತ್ ನಾಯಕ್, ಮಲ್ಲಿಕಾ ಪಕಳ, ಸಂಚಾಲಕ ರವೀಂದ್ರ ಶೆಟ್ಟಿ ನುಳಿಯಾಲು, ನಗರಸಭೆ ಮಾಜಿ ಸದಸ್ಯೆ ಶೈಲಾ ಪೈ ಮತ್ತಿತರರು ಉಪಸ್ಥಿತರಿದ್ದರು. ಸತೀಶ್ ರೈ ಮಿಶನ್ ಮೂಲೆ ಸ್ವಾಗತಿಸಿದರು. ಮೋಹನ್ ಪಾಟಾಳಿ ವಂದಿಸಿದರು. ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.
"

ಪುಣ್ಯ ಸಂಪಾದನೆಗೆ ದೇವಿ ಜೀರ್ಣೋದ್ಧಾರದ ಅವಕಾಶ ನೀಡಿದ್ದಾರೆ. ವೈಭವಕ್ಕಿಂತ ಸಮಾಜಕ್ಕೆ ಬೇಕಾದ ಸಾನ್ನಿಧ್ಯದ ಜೀರ್ಣೋದ್ಧಾರ ಅಗತ್ಯ. ತಾಯಂದಿರಿಗೆ ಗೌರವ ನೀಡಿದಷ್ಟು ದೇಶ ಬೆಳಗುತ್ತದೆ. ಮಕ್ಕಳಿಗೆ ಮಠಮಂದಿರಗಳ ಮೂಲಕ ಧರ್ಮ ಶಿಕ್ಷಣ ನೀಡಬೇಕು.