ಮಾಧವ ಗೌಡ ADMIN
ದಕ್ಷಿಣ ಕನ್ನಡ

ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

ನದಿಗೆ ಹಾರಿ ಆತ್ಮಹತ್ಯೆ

ಉಪ್ಪಿನಂಗಡಿ: ಕಳೆದ ಮೂರು ದಿನಗಳ ಹಿಂದೆ ಉಪ್ಪಿನಂಗಡಿಯ ಕುಮಾರಧಾರಾ ನದಿಯ ಹಳೇ ಸೇತುವೆಯ ಮೇಲೆ ಬೈಕ್ ಹಾಗೂ ಮೊಬೈಲ್ ಇಟ್ಟು ನಾಪತ್ತೆಯಾಗಿದ್ದ ಹಿರೇಬಂಡಾಡಿ ಗ್ರಾಮದ ಪೆರಾಬೆ ನಿವಾಸಿ ವಾಧವ ಗೌಡ (44) ಅವರ ಮೃತದೇಹ ಸೋಮವಾರ 34 ನೆಕ್ಕಿಲಾಡಿ ಗ್ರಾಮದ ಬೊಳ್ಳಾರ್ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.

ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆತೂರಿನಲ್ಲಿ ಟಯರ್ ಪಂಕ್ಚರ್ ಅಂಗಡಿಯನ್ನು ಇತ್ತೀಚೆಗಷ್ಟೇ ಆರಂಭಿಸಿದ್ದ ಅವರ ಅ.2ರಂದು ಮನೆಯಿಂದ ಅಂಗಡಿಗೆಂದು ತೆರಳಿದವರು ವಾಪಸ್ ಬಂದಿರಲಿಲ್ಲ.

ಬೈಕ್ ಹಾಗೂ ಮೊಬೈಲ್ ಉಪ್ಪಿನಂಗಡಿಯ ಕುಮಾರಧಾರ ನದಿಯ ಹಳೇ ಸೇತುವೆ ಮೇಲೆ ಪತ್ತೆಯಾಗಿದ್ದರಿಂದ ಅಗ್ನಿಶಾಮಕ ದಳದ ತಂಡ ಹಾಗೂ ಮುಳುಗುತಜ್ಞರು ಭಾನುವಾರ ಕುಮಾರಧಾರ ನೇತ್ರಾವತಿ ನದಿಗಳ ಸಂಗಮ ಸ್ಥಳದಲ್ಲಿ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸೋಮವಾರ ಬೊಳ್ಳಾರ್ ಎಂಬಲ್ಲಿ ನದಿಯಲ್ಲಿ ಸ್ಥಳೀಯರಿಗೆ ಮೃತದೇಹ ಕಂಡಿದ್ದು, ಪರಿಶೀಲಿಸಿದಾಗ ಅದು ಮಾಧವ ಗೌಡ ಅವರದ್ದಾಗಿತ್ತು. ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.