ತೊಕ್ಕೊಟ್ಟು ಜಂಕ್ಷನ್‌ನಲ್ಲಿ ತೆರೆದ ಚರಂಡಿ.
- ಬಾಯ್ದೆರೆದ ಚರಂಡಿ, ಬೆಂಕಿಯುಗುಳುವ ತ್ಯಾಜ್ಯರಾಶಿ
- ವಾಹನ ಸಂಚಾರ ದುಸ್ತರ
- ಸರ್ವೀಸ್ ರಸ್ತೆಯಲ್ಲೇ ರಾಶಿ ಹಾಕಿ ಬೆಂಕಿ, ನಗರಸಭೆಯ ಮಾನ ಹರಾಜು
ದುರ್ನಾತ ಬೀರುತ್ತಾ ಕಾಯಿಲೆಗಳನ್ನು ಕೈಬೀಸಿ ಕರೆಯುತ್ತಿದೆ ಬಾಯ್ದೆರೆದ ಚರಂಡಿ, ಪಕ್ಕದಲ್ಲೇ ಬೆಂಕಿಯಲ್ಲಿ ಬೆಂದ ತ್ಯಾಜ್ಯರಾಶಿ, ಮುಂಭಾಗದಲ್ಲಿರುವ ಫ್ಲೈಓವರ್ ಅಡಿಯಲ್ಲಿ ಮಿನಿ ಮಾರುಕಟ್ಟೆ. ಇದು ಉಳ್ಳಾಲದ ಹೃದಯ ತೊಕ್ಕೊಟ್ಟು ನಗರಗದ ದುರವಸ್ಥೆ!
ಒಂದು ಕಾಲದಲ್ಲಿ ವೈಭವದಿಂದ ಮೆರೆದಿದ್ದ ತೊಕ್ಕೊಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಅವೈಜ್ಞಾನಿಕವಾಗಿ ಮೇಲ್ಸೇತುವೆ ನಿರ್ಮಾಣಗೊಂಡ ಬಳಿಕ ಇಲ್ಲಿನ ವೈಭವಕ್ಕೆ ಪೆಟ್ಟು ಬಿದ್ದಿದೆ. ಮೇಲ್ಸೇತುವೆ ಅಡಿಭಾಗದಲ್ಲಿ ಸುಂದರ ಉದ್ಯಾನ, ಫುಟ್‌ಪಾತ್ ನಿರ್ಮಿಸಿ ಉಳ್ಳಾಲದ ಘನತೆ ಹೆಚ್ಚಿಸಬೇಕಿದ್ದ ನಗರಸಭೆ ಎಡವಿದ ಪರಿಣಾಮ ಹಲವು ವರ್ಷಗಳಿಂದ ಮಿನಿ ಮಾರುಕಟ್ಟೆ ನಿರ್ಮಾಣಗೊಂಡಿದೆ.
ಬಾಯ್ದೆರೆದ ಚರಂಡಿ
ಮಿನಿ ಮಾರುಕಟ್ಟೆ ಸಂಕಷ್ಟ
ಸ್ಪೀಕರ್ ಘನತೆಗೂ ಕುತ್ತು
ಜಂಕ್ಷನ್‌ನಲ್ಲಿದ್ದ ತ್ಯಾಜ್ಯರಾಶಿ ತೆರವುಗೊಳಿಸಲಾಗಿದೆ. ರಾ.ಹೆ. ಪ್ರಾಧಿಕಾರದಿಂದ ಚರಂಡಿಗೆ ಸ್ಲಾೃಬ್ ಮುಚ್ಚುವ ಕಾರ್ಯ ನಡೆಯಲಿದೆ. ಚರಂಡಿಗೆ ನೀರು ಬಿಡುತ್ತಿರುವ ಸ್ಥಳೀಯ ಹೋಟೆಲ್, ವಸತಿ ಸಂಕೀರ್ಣಗಳಿಗೆ ನೋಟಿಸ್ ನೀಡಲಾಗಿದೆ. ರಾ.ಹೆಯಿಂದ ಅನುಮತಿ ಸಿಕ್ಕ ಬಳಿಕ ಫ್ಲೈಓವರ್ ಅಡಿ ಸೌಂದರ್ಯಕ್ಕೆ ಆದ್ಯತೆ ನೀಡಲಾಗುವುದು.
ಅತ್ಯಂತ ಸುಂದರ ಮತ್ತು ಸ್ವಚ್ಛವಾಗಿರಬೇಕಾದ ಉಳ್ಳಾಲದ ಹೆಬ್ಬಾಗಿಲು ತೊಕ್ಕೊಟ್ಟು ಜಂಕ್ಷನ್ ಸಮಸ್ಯೆಗಳಿಂದ ಕೂಡಿದೆ. ಈ ವಿಚಾರದಲ್ಲಿ ರಾ.ಹೆ., ಲೋಕೋಪಯೋಗಿ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳು ಇನ್ನೊಬ್ಬರತ್ತ ಬೆರಳು ತೋರಿಸದೆ ತಮ್ಮ ಜವಾಬ್ದಾರಿ ನಿರ್ವಹಿಸಬೇಕು, ಶಾಸಕರೂ ಈ ಬಗ್ಗೆ ಗಮನಹರಿಸಬೇಕು. ಜನಪ್ರತಿನಿಧಿಗಳ ಆಡಳಿತ ಇದ್ದಾಗ ಆಗದ ಕೆಲಸ ಪ್ರಸ್ತುತ ಅಧಿಕಾರಿಗಳ ಆಡಳಿತದಲ್ಲಿ ಆಗುತ್ತಿದೆ ಎನ್ನುವುದಕ್ಕೆ ಭಟ್ನಗರ ಚೆಂಬುಗುಡ್ಡೆ ರಸ್ತೆ ಸಾಕ್ಷಿ.
ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಬೆಂಕಿಗಾಹುತಿಯಾಗಿರುವ ತ್ಯಾಜ್ಯ ರಾಶಿ.(ಮೊದಲು).