ವಿಟ್ಲ: ಕೆದಿಲ ಪಾಟ್ರಕೋಡಿ ೧೧ಕೆವಿ ವಿದ್ಯುತ್ ಮಾರ್ಗದ ಜಿಒಎಸ್ ಸ್ವಿಚ್ ತೆರೆಯುವ ಸಂದರ್ಭ ವಿದ್ಯುತ್ ಪ್ರವಹಿಸಿ ಮಾಣಿ ಸೆಕ್ಷನ್ ಆಫೀಸ್‌ನ ಲೈನ್‌ಮನ್, ಪುತ್ತೂರು ಕೆಮ್ಮಾಯಿ ನಿವಾಸಿ ರವಿಚಂದ್ರ (೫೨) ಮೃತಪಟ್ಟಿದ್ದಾರೆ.
ವಿಟ್ಲ ಉಪವಿಭಾಗಕ್ಕೆ ಸೇರಿದ ಮಾಣಿ ಶಾಖೆಗೆ ಸೇರಿದ ಲೈನ್‌ಮನ್ ರವಿಚಂದ್ರ ಶನಿವಾರ ವಿದ್ಯುತ್ ಲೈನ್ ಆಫ್ ಮಾಡಲು ತೆರಳಿದಾಗ ಜಿಒಎಸ್‌ನಲ್ಲಿ ಗ್ರೌಂಡಿಂಗ್ ಆಗಿ ವಿದ್ಯುತ್ ಶಾಕ್‌ಗೆ ಒಳಗಾಗಿದ್ದಾರೆ ಎನ್ನಲಾಗಿದೆ. ತಕ್ಷಣ ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ವೈದ್ಯರು ಪರೀಕ್ಷಿಸಿದಾಗ ಮೃತಪಟ್ಟಿರುವುದು ದೃಢಪಟ್ಟಿದೆ. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳದಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ.