ಸಾಹಿತಿ-ಸಾಹಿತ್ಯ ಸಂಸ್ಮರಣೆ ಕಾರ್ಯಕ್ರಮದಲ್ಲಿ ಡಾ.ತಾಳ್ತಜೆ ವಸಂತಕುಮಾರ ಮಾತನಾಡಿದರು. ಪ್ರೊ.ಪಿ.ಎನ್. ಮೂಡಿತ್ತಾಯ, ರವಿ ನಾಯ್ಕಾಪು, ಎ.ಆರ್.ಸುಬ್ಬಯ್ಯಕಟ್ಟೆ ಮತ್ತಿತರರಿದ್ದರು. 
ದಕ್ಷಿಣ ಕನ್ನಡ

ಹಿರಿಯ ಸಾಹಿತಿಗಳ ನೆನಪು ದಾರಿದೀಪ

ಸಾಹಿತಿ-ಸಾಹಿತ್ಯ ಸಂಸ್ಮರಣೆ

ಉಪ್ಪಳ: ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿ ಅಗಲಿದ ಪ್ರೊ.ಕೆ.ವಿ.ತಿರುಮಲೇಶ್, ಪ್ರೊ.ಟಿ.ಕೇಶವ ಭಟ್ಟ ಹಾಗೂ ಪ್ರೊ.ಕೆ.ಟಿ.ಗಟ್ಟಿ ಅವರ ಸಾಧನೆ ಮತ್ತು ಸಾಹಿತ್ಯದ ಸ್ಮರಣೆ ಮುಂದಿನ ಪೀಳಿಗೆಗೆ ಪ್ರೇರಣೆ ಹಾಗೂ ದಾರಿದೀಪವಾಗಲಿದೆ ಎಂದು ಹಿರಿಯ ವಿದ್ವಾಂಸ ಡಾ.ತಾಳ್ತಜೆ ವಸಂತಕುವಾರ ಅಭಿಪ್ರಾಯಪಟ್ಟರು.

ಬೆಂಗಳೂರಿನ ಶಂಪಾ ಪ್ರತಿಷ್ಠಾನದ ಆಶ್ರಯದಲ್ಲಿ ಪೊಸಡಿಗುಂಪೆಯಲ್ಲಿ ಶನಿವಾರ ‘ಸಾಹಿತಿ-ಸಾಹಿತ್ಯ ಸಂಸ್ಮರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಂಪಾ ಪ್ರತಿಷ್ಠಾನದ ಗೌರವಾಧ್ಯಕ್ಷ ಪ್ರೊ.ಪಿ.ಎನ್. ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ, ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂದ ಅಧ್ಯಕ್ಷ ರವಿ ನಾಯ್ಕಾಪು ಹಾಗೂ ಪತ್ರಕರ್ತ ಅಚ್ಯುತ ಚೇವಾರು ಮುಖ್ಯ ಅತಿಥಿಗಳಾಗಿದ್ದರು.

ಸಂಜೆ ಸಮಾರೋಪ ಸವಾರಂಭದ ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಕನ್ನಡ ಲೇಖಕರ ಸಂದ ಅಧ್ಯಕ್ಷ ಡಾ.ರಮಾನಂದ ಬನಾರಿ ವಹಿಸಿದ್ದರು. ನಿವೃತ್ತ ಮುಖ್ಯಶಿಕ್ಷಕ ರಾಜೇಂದ್ರ ಬಜಕೂಡ್ಲು ಸಮಾರೋಪ ಭಾಷಣ ಮಾಡಿದರು. ಸಾಹಿತಿ-ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಹಾಗೂ ಸುಭಾಶ್ ಪೆರ್ಲ ಅತಿಥಿಗಳಾಗಿದ್ದರು. ನಿರ್ಮಲಾ ಕೆ.ವಿ.ತಿರುಮಲೇಶ್ ಮತ್ತು ಲಕ್ಷ್ಮೀ ಪಾರ್ವತಿ ಬಿ. ಅವರನ್ನು ಗೌರವಿಸಲಾಯಿತು.

ನಿರ್ಮಲಾ ಪ್ರಾರ್ಥಿಸಿ, ಶಂಪಾ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಪ್ರಮೀಳಾ ಮಾಧವ ಸ್ವಾಗತಿಸಿದರು. ವಿಶಾಲಾಕ್ಷ ಪುತ್ರಕಳ, ಡಾ.ಶಾರದಾ ಬೆಂಗಳೂರು ಹಾಗೂ ಮಂಜುನಾಥ ಡಿ.ಎಸ್.ಬೆಂಗಳೂರು ಅತಿಥಿ ಪರಿಚಯ ಮಾಡಿದರು. ಸಾಹಿತಿ ಡಾ.ಯು.ಮಹೇಶ್ವರಿ ವಂದಿಸಿದರು. ಡಾ.ಎಸ್.ಎಲ್.ಮಂಜುನಾಥ್ ನಿರೂಪಿಸಿದರು.