ಗುರುಪುರದ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ವೈದ್ಯಕೀಯ ಶಿಬಿರ ನಡೆಯಿತು. 
ದಕ್ಷಿಣ ಕನ್ನಡ

ಆರೋಗ್ಯದ ನಿಯಮಿತ ಕಾಳಜಿ ಅಗತ್ಯ : ಡಾ.ಯೋಗೀಶ್ ತಂತ್ರಿ

ಪ್ರಮುಖ ಮುಖ್ಯಾಂಶಗಳು

ಶಿಬಿರದಿಂದ ಮಹಿಳೆಯರ ಸಹಿತ ಹಲವು ಪುರುಷರು ಮತ್ತು ಮಕ್ಕಳು ಪ್ರಯೋಜನ ಪಡೆದರು. ದಂತ, ಕಣ್ಣು, ಬಿಪಿ-ಶುಗರ್, ಮಧುಮೇಹ ಮತ್ತು ಸಾಮಾನ್ಯ ವೈದ್ಯಕೀಯ ತಪಾಸಣೆ ವ್ಯವಸ್ಥೆಗೊಳಿಸಲಾಗಿದ್ದು, ಅಗತ್ಯವಿದ್ದವರಿಗೆ ಉಚಿತ ಕನ್ನಡಕ ವಿತರಿಸಲಾಯಿತು.

ಟ್ರಸ್ಟ್ ವತಿಯಿಂದ ಮಂಗಳೂರಿನಲ್ಲಿ ಇಂತಹ ಶಿಬಿರ ಆಯೋಜಿಸುತ್ತಿದ್ದೇವೆ. ಹುಟ್ಟೂರಿನ ಜನರಿಗೆ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸುವ ಕನಸು ಕಂಡಿದ್ದು, ಅದೀಗ ನನಸಾಗಿದೆ. ಗ್ರಾಮೀಣ ಪ್ರದೇಶದವರಿಗೆ ಉಚಿತ ವೈದ್ಯಕೀಯ ಸೇವೆ ಲಭ್ಯವಾಗಬೇಕು ಎಂಬ ಉದ್ದೇಶದಿಂದ ಶಿಬಿರಕ್ಕೆ ಮಹತ್ವ ನೀಡಲಾಗಿದೆ. ಮಹಿಳೆಯರ ಸಹಿತ ಎಲ್ಲರೂ ಇದರ ಪ್ರಯೋಜನ ಪಡೆಯಬೇಕು.