ನೀರುಮಾರ್ಗ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶ್ರೀ ಸಾಯಿ ಈಶ್ವರ ಗುರೂಜಿ ಉದ್ಘಾಟಿಸಿದರು. ಡಾ.ಭರತ್ ಶೆಟ್ಟಿ, ಗೋಪಾಲ ಜೋಯಿಸರು, ರವಿರಾಜ ಶೆಟ್ಟಿ ನಿಟ್ಟೆಗುತ್ತು, ಶಶಿಧರ ಭಟ್ ಬೊಳ್ಮಾರಗುತ್ತು, ಪದ್ಮನಾಭ ಕೋಟ್ಯಾನ್, ರಾಜೇಶ್ ಭಟ್, ಭಾಸ್ಕರ ಜೆ.ಮಾಣೂರು, ಉಮಾನಾಥ ಸುವರ್ಣ, ಮುರಳೀಧರ ಕರ್ಕೇರ ಕೆಂಪುಗುಡ್ಡೆ, ಪ್ರಶಾಂತ್ ಕಾಜವ ಮಿತ್ತಕೋಡಿ ಇದ್ದರು.
ನೀರುಮಾರ್ಗ ಮಾಣೂರು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ನಡೆಯುತ್ತಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ಶುಕ್ರವಾರ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಪ್ರಧಾನ ಕಾರ್ಯದರ್ಶಿ ಶ್ರೀ ಸಾಯಿ ಈಶ್ವರ ಗುರೂಜಿ ಆಶೀರ್ವಚನ ನೀಡಿದರು.ನೃತ್ಯ ವೈಭವ ನಡೆಸಿಕೊಟ್ಟ ಧನ್ಯಾ ಡಿ.ಭಟ್, ಪ್ರಾಯೋಜಕ ಸಂಸ್ಥೆ ಪ್ರಮುಖರಾದ ಉಮಾನಾಥ ಸುವರ್ಣ, ಹರೀಶ್ ನೀರುಮಾರ್ಗ, ನಿರೂಪಿಕಿ ಪ್ರಜ್ಞಾ ಪೂಜಾರಿ, ಶರ್ಮಿಳಾ ಕಾಪಿಕಾಡು ಅವರನ್ನು ಅಭಿನಂದಿಸಲಾಯಿತು.
ಉದ್ಯಮಿ ರವಿರಾಜ ಶೆಟ್ಟಿ ನಿಟ್ಟೆಗುತ್ತು ಸಭೆ ಉದ್ಘಾಟಿಸಿದರು. ಜೀರ್ಣೋದ್ಧಾರ ಮತ್ತು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ ಭಟ್ ಬೊಳ್ಮಾರಗುತ್ತು, ಅಧ್ಯಕ್ಷ ಪದ್ಮನಾಭ ಕೋಟ್ಯಾನ್(ಬಿಎಲ್‌ಪಿ), ಪ್ರಧಾನ ಅರ್ಚಕ ರಾಜೇಶ್ ಭಟ್, ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಜೆ.ಮಾಣೂರು, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಉಮಾನಾಥ ಸುವರ್ಣ, ಮುರಳೀಧರ ಕರ್ಕೇರ ಕೆಂಪುಗುಡ್ಡೆ, ನರಿಂಗಾನ ಕಂಬಳ ಸಮಿತಿ ಕಾರ್ಯಾಧ್ಯಕ್ಷ ಪ್ರಶಾಂತ್ ಕಾಜವ ಮಿತ್ತಕೋಡಿ, ನೀರುಮಾರ್ಗ ಗ್ರಾಪಂ ಅಧ್ಯಕ್ಷ ಶ್ರೀಧರ ಚಿಕ್ಕಬೆಟ್ಟು, ಉದ್ಯಮಿಗಳಾದ ರಾಜೇಶ್ ಸುವರ್ಣ ಗುರುಪುರ, ಸಾಕ್ಷಾತ್ ಶೆಟ್ಟಿ, ಮೆಸ್ಕಾಂ ಅಧಿಕಾರಿ ರಾಜೇಶ್, ಎಂವಿಕೆ ಭಟ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ವಿನಯ ಕುಮಾರ್ ಶೆಟ್ಟಿ ಗುರುಪುರ, ಗುರುಪುರ ಮುಂಡಿತ್ತಾಯ ಪಾತ್ರಿ ಚಂದ್ರಹಾಸ ಪೂಜಾರಿ ಕೌಡೂರು, ಸುದರ್ಶನ ಶೆಟ್ಟಿ ಪೆರ್ಮಂಕಿ, ಮೂರ್ತೆದಾರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಜ್ಞಾ ಪೂಜಾರಿ ಒಡಿಲ್ನಾಳ ನಿರೂಪಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಪತ್ರಕರ್ತ ವಿಜಯ್ ಕೋಟ್ಯಾನ್ ಸ್ವಾಗತಿಸಿದರು. ವಸಂತ ಕೆಂಪುಗುಡ್ಡೆ ವಂದಿಸಿದರು. ಬಳಿಕ ಚಾ ಪರ‌್ಕ ಕಲಾವಿದೆರ್ ಕುಡ್ಲ ಅಭಿನಯದ ನಾಟಕ ‘ಪುದರ್ ದೀತಿಜಿ’ ಪ್ರದರ್ಶನಗೊಂಡಿತು.
ನಮಗೀಗ ಎಲ್ಲವೂ ಇದ್ದರೂ ನೆಮ್ಮದಿ ಇಲ್ಲದಂತಾಗಿದೆ. ಪುಣ್ಯ ಕ್ಷೇತ್ರಗಳ ಮುಂಭಾಗದಲ್ಲಿ ಕುಳಿತಾಗ, ಅಹಂ-ದ್ವೇಷ ಬಿಟ್ಟಾಗ, ಪ್ರಕೃತಿಯ ಮಡಿಲಲ್ಲಿ ಕುಳಿತಾಗ ನೆಮ್ಮದಿ ಸಿಗುತ್ತದೆ. ಆದರೆ ನಮಗೀಗ ವ್ಯವಧಾನ-ತಾಳ್ಮೆ ಇಲ್ಲದಂತಾಗಿದೆ.