ಮಂಜನಾಡಿ ಕೊಪ್ಪಲಕೋಡಿಯಲ್ಲಿ ಗುಡ್ಡ ಕುಸಿತ ಪ್ರಕರಣದ ತಾಂತ್ರಿಕ ತನಿಖೆಗೆ ಎನ್‌ಐಟಿಕೆ ಅಧಿಕಾರಿಗಳ ತಂಡ ಭೇಟಿ ನೀಡಿತು. ಜಿಪಂ ಇಂಜಿನಿಯರ್‌ಗಳಾದ ನಿತಿನ್ ಹಾಗೂ ಲಾಯ್ಡ, ಮಂಜನಾಡಿ ಗ್ರಾಪಂ ಸಾಹುಲ್ ಹಮೀದ್ ಇನ್ನಿತರರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ಮಂಜನಾಡಿ ಗುಡ್ಡ ಕುಸಿತ, ತಾಂತ್ರಿಕ ತನಿಖೆ ಆರಂಭ

ಪ್ರಮುಖ ಮುಖ್ಯಾಂಶಗಳು

  • ಅಪಾಯಕಾರಿ ಪ್ರದೇಶದಲ್ಲಿ ರಸ್ತೆಗೆ ಅನುಮತಿ
  • ಎನ್‌ಐಟಿಕೆ ಅಧಿಕಾರಿಗಳ ತಂಡ ಭೇಟಿ
ಕಳೆದ ಮೇ ತಿಂಗಳಲ್ಲಿ ನಡೆದ ಘಟನೆಯಲ್ಲಿ ಅಶ್ವಿನಿ ಎಂಬುವರು ಎರಡೂ ಕಾಲು ಕಳೆದುಕೊಂಡಿದ್ದರೆ, ಅವರ ಇಬ್ಬರು ಮಕ್ಕಳು ಮತ್ತು ಅತ್ತೆ ಮೃತಪಟ್ಟಿದ್ದರು. ಮಾವ ಒಂದು ಕಾಲು ಕಳೆದುಕೊಂಡು ಶಾಶ್ವತ ಅಂಗವೈಕಲ್ಯಕ್ಕೊಳಗಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಅಶ್ವಿನಿ ಹಾಗೂ ಮನೆಯವರು ನ್ಯಾಯಕ್ಕಾಗಿ ನಡೆಸುತ್ತಿರುವ ಹೋರಾಟದ ಭಾಗವಾಗಿ ಎನ್‌ಐಟಿಕೆ ಅಧಿಕಾರಿಗಳ ತಂಡ ತನಿಖೆ ಆರಂಭಿಸಿದೆ. ಮಂಗಳವಾರ ಎನ್‌ಐಟಿಕೆ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊಫೆಸರ್‌ಗಳಾದ ಡಾ.ಪಳನಿಸಾಮಿ ಟಿ., ಡಾ.ಶ್ರೀವಲ್ಸಾ ಕೊಳಥಾಯರ್ ಸ್ಥಳಕ್ಕೆ ಭೇಟಿ ನೀಡಿ ಜಿಪಂ ಇಂಜಿನಿಯರ್‌ಗಳು ಹಾಗೂ ಮಂಜನಾಡಿ ಗ್ರಾಪಂ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ವರದಿ ಪಡೆದಿದ್ದಾರೆ.