ಸಾಮೂಹಿಕ ಲಕ್ಷ್ಮೀ ಪೂಜೆಯ ಕಾರ್ಯಕ್ರಮದಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಶತುಂತಳಾ ಟಿ.ಶೆಟ್ಟಿ, ರಂಗತ್ರೇಯ ಅರಸು, ಗಣೇಶ್ ಕುಮಾರ್ ದೇಲಂತಮಜಲು, ವೇದಾವತಿ ಎಸ್.ಮಧೂರು ಇದ್ದರು.  
ದಕ್ಷಿಣ ಕನ್ನಡ

ಸಮಾಜದಿಂದ ದೂರವಾಗಲಿ ವಿಕೃತಿ, ವಿರೋಧಾಭಾಸ MANILA

ಪ್ರಮುಖ ಮುಖ್ಯಾಂಶಗಳು

  • ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ
  • ಸಾಮೂಹಿಕ ಲಕ್ಷ್ಮೀ ಪೂಜೆ
ವಿಟ್ಲ: ಸಮಾಜದಲ್ಲಿರುವ ಮೂಢನಂಬಿಕೆ, ದುಶ್ಚಟಗಳ ಬಗ್ಗೆ ಅರಿವು ಮೂಡಿಸುವ ಕಾರ್ಯವಾಗಬೇಕು. ವಿಕೃತ ಮನಸ್ಸು, ವಿರೋಧಾಭಾಸ ಭಾವನೆ ದೂರವಾಗಬೇಕು. ಸಹಭೋಜನ, ಸಹಬಾಳ್ವೆಗೆ ಪ್ರತಿಮನೆಯಲ್ಲಿ ಒತ್ತು ನೀಡಬೇಕು. ನಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜತೆಗೆ ಪಾಶ್ಚಿಮಾತ್ಯ ದೇಶಕ್ಕೆ ಪಸರಿಸುವ ಕಾರ್ಯ ನಡೆಯಬೇಕಾಗಿದೆ. ಶ್ರೀಧಾಮ ಜಗತ್ತಿಗೆ ಆತ್ಮಧಾಮವಾಗಿ ಪ್ರತಿಯೊಬ್ಬರ ಶ್ರದ್ಧಾಕೇಂದ್ರವಾಗಿ ಬೆಳೆಯುತ್ತಿದೆ ಎಂದು ಶ್ರೀ ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಶ್ರೀಧಾಮ ಶ್ರೀ ದುರ್ಗಾ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆಯ ಅಂಗವಾಗಿ ೪೮ದಿನಗಳ ಕಾಲ ನಡೆಯುವ ಸಾಮೂಹಿಕ ಲಕ್ಷ್ಮೀ ಪೂಜೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಪೈವಳಿಕೆ ಅರಮನೆಯ ರಂಗತ್ರೇಯ ಅರಸು, ಜಿಲ್ಲಾ ಬಿಜೆಪಿ ಕೋಶಾಧಿಕಾರಿ ಸಂಜಯ ಪ್ರಭು ಮಂಗಳೂರು, ಉದ್ಯಮಿ ಶ್ರೀನಿವಾಸ್ ಪುಂಡಲೀಕ ಶೇಟ್, ಕಾಸರಗೋಡು ಸರ್ಕಾರಿ ಕಾಲೇಜು ಸಹಾಯಕ ಪ್ರಾಧ್ಯಾಪಕಿ ವೇದಾವತಿ ಎಸ್.ಮಧೂರು, ಉದ್ಯಾವರ ಭಗವತಿ ಕ್ಷೇತ್ರದ ಗುಳಗಜ್ಜ ದೈವದ ಪಾತ್ರಿ ಧನು ಬೆಳ್ಚಪ್ಪಾಡ, ಪರಂಬಳ ಶ್ರೀ ಮಹಮ್ಮಾಯಿ ದೇವಸ್ಥಾನದ ಪ್ರಧಾನ ಅರ್ಚಕ ಕಿರಣ್ ಕುಮಾರ್ ಕಯ್ಯಾರು, ವಿಷ್ಣುಮೂರ್ತಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಗಣೇಶ್ ಕುಮಾರ್ ದೇಲಂತಮಜಲು, ಸಮಿತಿ ಅಧ್ಯಕ್ಷ ಹರೀಶ್ ಬೊಟ್ಟಾರಿ, ರೇವತಿ ಪೆರ್ನೆ ಉಪಸ್ಥಿತರಿದ್ದರು.
ಸೋಮಪ್ಪ ಪೂಜಾರಿ ಸ್ವಾಗತಿಸಿದರು. ಚೆನ್ನಪ್ಪ ಎರುಗಲ್ಲು ವಂದಿಸಿದರು. ಸತೀಶ್ ಕುಮಾರ್ ಕಾಪು ನಿರೂಪಿಸಿದರು.
"

ಮಕ್ಕಳಿಗೆ ನಮ್ಮತನದ ಬಗ್ಗೆ ತಿಳಿಸಿದಾಗ ಮಾತ್ರ ಸಂಸ್ಕಾರ, ಸಂಸ್ಕೃತಿ ಉಳಿಯಲು ಸಾಧ್ಯ. ಬಾಲಭೋಜನದ ಮೂಲಕ ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯ ಶ್ರೀಧಾಮದಲ್ಲಿ ನಡೆಯುತ್ತಿದೆ. ಸಮಾಜಕ್ಕೆ ಜ್ಞಾನ ನೀಡುವ ಕಾರ್ಯ ನಡೆಯಬೇಕಾಗಿದೆ. ಯುವ ಸಮಾಜ ಒಗ್ಗಟ್ಟಾಗುವ ಅಗತ್ಯವಿದೆ.

— ಶಕುಂತಳಾ ಟಿ. ಶೆಟ್ಟಿ, ಮಾಜಿ ಶಾಸಕಿ