ಭಜನೆಯಲ್ಲಿ ತೊಡಗಿಸಿಕೊಂಡು ಶೈಕ್ಷಣಿಕ ಸಾಧನೆ ಮಾಡಿದ ಶ್ರೇಯಾ ಚೌಟ ಹಾಗೂ ನಿರೀಕ್ಷಾ ಕೆ. ಪಿ. ಅವರನ್ನು ಸನ್ಮಾನಿಸಲಾಯಿತು. ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಮೋನಪ್ಪ ಭಂಡಾರಿ ಕಲ್ಲೆಕಾರ್ ಗುತ್ತು, ಸುರೇಶ್ ಶೆಟ್ಟಿ ಗುರ್ಮೆ, ರವೀಶ್ ತಂತ್ರಿ ಕುಂಟಾರು ಮತ್ತಿತರರಿದ್ದರು.  
ದಕ್ಷಿಣ ಕನ್ನಡ

ನಿರಂತರ ಭಜನೆಯಿಂದ ಪರಿವರ್ತನೆ MANILA

*ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ | ಭಜನಾ ಸಂಕೀರ್ತನೆಯ ಮಂಗಳೋತ್ಸವ
ವಿಟ್ಲ: ಮನೆ-ಮನಗಳಲ್ಲಿ ಭಜನೆ ಮೂಲಕ ಶಕ್ತಿಯ ಸಂಚಾರವಾಗಿದೆ. ನಿರಂತರ ಭಜನೆಯಿಂದ ಬದುಕಿನಲ್ಲಿ ಪರಿವರ್ತನೆ ಕಾಣಬಹುದು. ಭಜನಾ ಸಂಕೀರ್ತನೆಯ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು. ಜನಾರ್ದನ ಸೇವೆಯ ಜತೆಗೆ ಜನತಾ ಸೇವೆಯನ್ನು ಬದುಕಿನಲ್ಲಿ ನಡೆಸಬೇಕು. ಸಂಘರ್ಷಮುಕ್ತ ಜೀವನ ನಮ್ಮದಾಗಬೇಕು. ಭಕ್ತಿ ಮಾರ್ಗದ ಮೂಲಕ ನಡೆದಾಗ ಸದ್ಭಾವನೆ, ಸತ್ಕಾರ್ಯಗಳು ನಡೆಯಲು ಸಾಧ್ಯ ಎಂದು ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ೫೦ ದಿನಗಳಿಂದ ನಡೆಯುತ್ತಿರುವ ಭಜನಾ ಸಂಕೀರ್ತನೆಯ ಮಂಗಳೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ಪುರುಷ ಸೂಕ್ತ ಹವನ, ಧನ್ವಂತರಿ ಯಾಗ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ ಮಾಣಿಲ ತಾರಿದಳ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಿಂದ ಶ್ರೀಧಾಮಕ್ಕೆ ಭಜನಾ ಮೆರವಣಿಗೆ ನಡೆಯಿತು.
ಭಜನೆಯಲ್ಲಿ ತೊಡಗಿಸಿಕೊಂಡು ಶೈಕ್ಷಣಿಕ ಸಾಧನೆ ಮಾಡಿದ ಶ್ರೇಯಾ ಚೌಟ ಹಾಗೂ ನಿರೀಕ್ಷಾ ಕೆ.ಪಿ. ಅವರನ್ನು ಸನ್ಮಾನಿಸಲಾಯಿತು. ಭಜನಾ ಸಂಘಟಕರಾದ ಸತೀಶ್ ಕುಮಾರ್, ಸುನಿತ್ ಮುರುವ ಅವರನ್ನು ಗೌರವಿಸಲಾಯಿತು.
ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಸೇವಾ ಪ್ರತಿಫಿನ ಅಧ್ಯಕ್ಷ ಮೋನಪ್ಪ ಭಂಡಾರಿ ಕಲ್ಲೆಕಾರ್ ಗುತ್ತು ಅಧ್ಯಕ್ಷತೆ ವಹಿಸಿದ್ದರು. ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಧಾರ್ಮಿಕ ವಿದ್ವಾಂಸ ಕುಂಟಾರು ರವೀಶ ತಂತ್ರಿ, ಮಾಜಿ ಸಚಿವ ನಾಗರಾಜ ಶೆಟ್ಟಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮುಡಿಪು ಸೂರಜ್ ಎಜುಕೇಶನಲ್ ಮತ್ತು ಚಾರಿಟೆಬಲ್ ಟ್ರಸ್ಟ್ ಅಧ್ಯಕ್ಷ ಮಂಜುನಾಥ ರೇವಣ್ಕರ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ರೈ ಬಲ್ಯೊಟ್ಟು, ಲೋಟಸ್ ಪ್ರಾಪರ್ಟಿಸ್ ಆಡಳಿತ ಪಾಲುದಾರ ಜಿತೇಂದ್ರ ಎಸ್. ಕೊಟ್ಟಾರಿ, ಸಾಮಾಜಿಕ ಕಾರ್ಯಕರ್ತ ಗಣರಾಜ ಭಟ್ ಕೆದಿಲ, ಮಹಾರಾಷ್ಟ್ರ ಬಿಜೆಪಿ ಘಟಕದ ಮೋಹನ್ ಗೌಡ, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು, ಅರ್ಚಕ ಗಣಪತಿ ಭಟ್ ಬಾಕಿಲಪದವು, ಪ್ರಧಾನ ಅರ್ಚಕ ಬಾಲಸುಬ್ರಹ್ಮಣ್ಯ ಭಟ್ ದಂಡೆಪ್ಪಾಡಿ, ಸಮಿತಿಯ ಡಾ.ಹರೀಶ್ ಬೊಟ್ಟಾರಿ ಚೇವಾರು, ಗೌರವಾಧ್ಯಕ್ಷ ವೆಂಕಟ್ರಮಣ ಭಟ್ ಕಲ್ಯಾಟೆ, ಪ್ರಧಾನ ಕಾರ್ಯದರ್ಶಿ ರೇವತಿ ಪೆರ್ನೆ ಉಪಸ್ಥಿತರಿದ್ದರು.
ವಿಜಯರತ್ನ ಶೆಟ್ಟಿ ಸ್ವಾಗತಿಸಿದರು. ತಾರಾನಾಥ ಕೊಟ್ಟಾರಿ ಸನ್ಮಾನ ಪತ್ರ ವಾಚಿಸಿದರು. ನಾರಾಯಣ ಭಟ್ ವಂದಿಸಿದರು. ಸತೀಶ್ ಕುಮಾರ್ ಕಾಪು, ದೀಪಕ್ ಕುಮಾರ್ ಅಡ್ಯಾರು ಕಾರ್ಯಕ್ರಮ ನಿರೂಪಿಸಿದರು.
"

ಮನುಷ್ಯರನ್ನು ಮಾನವೀಯರನ್ನಾಗಿಸಿ, ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ಪ್ರಯತ್ನವಾಗಬೇಕು. ಇತಿಹಾಸದ ವರ್ತಮಾನದ ಉದಾಹರಣೆಗಳು ಎಚ್ಚರ ಮೂಡಿಸಬೇಕು. ಸ್ವಾಮೀಜಿಯವರು ಮನಸ್ಸುಗಳನ್ನು ಜೋಡಿಸುವ ಕಾರ್ಯ ಮಾಡುತ್ತಿದ್ದಾರೆ. ದೇಶದ ಬಂಧುತ್ವ ಪ್ರಪಂಚದ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ.

— ಸುರೇಶ್ ಶೆಟ್ಟಿ ಗುರ್ಮೆ, ಕಾಪು ಶಾಸಕ

"

ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಏನೆಲ್ಲಾ ಮಾತನಾಡಿದರೂ ಸಂಘಟನೆಯ ಹಿಂದಿನ ಚಿಂತನೆ ದೊಡ್ಡದಿದೆ. ಕ್ಷೇತ್ರದಲ್ಲಿ ಪ್ರತಿಯೊಂದು ಸಮುದಾಯಕ್ಕೂ ಅವರದ್ದೇ ಆದ ಜವಾಬ್ದಾರಿಯಿದೆ. ಹಿಂದೂ ಸಮಾಜದಲ್ಲಿ ಯಾವುದೇ ಜಾತಿ ಭೇದವಿಲ್ಲ. ನಮ್ಮ ಚಿಂತನೆಗಳು ವಿಕಸಿತವಾಗಬೇಕಾಗಿದೆ. ಸಂತ ಶ್ರೇಷ್ಠರಿಂದ ಸಮಾಜದಲ್ಲಿ ಪರಿವರ್ತನೆಗಳಾಗಿವೆ. ರಾಷ್ಟ್ರಭಕ್ತಿಯ ಚಿಂತನೆ ಜಾಗೃತವಾಗಬೇಕಾಗಿದೆ.

— ರವೀಶ್ ತಂತ್ರಿ ಕುಂಟಾರು, ಧಾರ್ಮಿಕ ವಿದ್ವಾಂಸರು