ಮಾಣಿಲ ಶ್ರೀಧಾಮ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ೪೯ ದಿನಗಳ ಕಾಲ ನಡೆದ ‘ಓಂ ನಮೋ ಭಗವತೇ ವಾಸುದೇವಾಯ’ ಮಂತ್ರ ಪಠಣದ ಮಂಗಳಾಚರಣೆಯ ಧಾರ್ಮಿಕ ಸಭೆಯಲ್ಲಿ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಮುಂಬೈ ಸಾಧ್ವೀ ಸತ್ಯಾಮೃತ ನಂದಿನಿ ಸಾನ್ನಿಧ್ಯ ವಹಿಸಿದ್ದರು. ಡಾ.ಹರೀಶ್ ಬೊಟ್ಟಾರಿ ಚೇವಾರು, ಪ್ರಕಾಶ್ ವೈ.ಪುತ್ತೂರು, ರೇವತಿ ಪೆರ್ನೆ ಇತರರು ಉಪಸ್ಥಿತರಿದ್ದರು. 
ದಕ್ಷಿಣ ಕನ್ನಡ

ದೇವರ ನಾಮಸ್ಮರಣೆಯಿಂದ ಋಣಾತ್ಮಕತೆ ದೂರ MANILA

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಮಾಣಿಲ ಶ್ರೀ ಆಶೀರ್ವಚನ
  • ೪೯ ದಿನಗಳ ಮಂತ್ರ ಪಠಣ ಮಂಗಳಾಚರಣೆ
ವಿಟ್ಲ: ನಿರಂತರ ಭಗವಂತನ ನಾಮಸ್ಮರಣೆಯಿಂದ ಋಣಾತ್ಮಕತೆ ಹಾಗೂ ಮನೆ, ಮನಸ್ಸಿನ ಅಮಂಗಳಗಳು ದೂರವಾಗುತ್ತವೆ. ಆಕ್ರೋಶ ಹಾಗೂ ಉದ್ವೇಗದಿಂದ ಮನುಷ್ಯ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾನೆ. ಮಠ-ಮಂದಿರಗಳಿಂದ ಸಂಸ್ಕಾರ, ಸಂಸ್ಕೃತಿ ಉಳಿಸುವ ಕೆಲಸ ನಡೆಯುತ್ತಿದೆ ಎಂದು ಮಾಣಿಲ ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಶ್ರೀಧಾಮ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ೪೯ ದಿನಗಳ ‘ಓಂ ನಮೋ ಭಗವತೇ ವಾಸುದೇವಾಯ’ ಮಂತ್ರ ಪಠಣದ ಮಂಗಳಾಚರಣೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.
ವಿಟ್ಲ ಅರಮನೆಯ ಅರಸರಾದ ಬಂಗಾರು ಅರಸರು ಮಾತನಾಡಿ, ಭೂಸುಧಾರಣೆಯ ಬಳಿಕ ದೇವಸ್ಥಾನಗಳು ಊರಿನವರ ಸಹಕಾರದಿಂದ ಮುನ್ನಡೆಯುತ್ತಿವೆ. ಧಾರ್ಮಿಕ ಕಾರ್ಯಕ್ರಮಗಳೆಲ್ಲವೂ ಸುಸೂತ್ರವಾಗಿ ನಡೆದುಕೊಂಡು ಬರುತ್ತಿವೆ ಎಂದರು.
ನೇಪಾಳ ದುರಂತದಲ್ಲಿ ಮೃತಪಟ್ಟವರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಮುಂಬೈನ ಸಾಧ್ವೀ ಸತ್ಯಾಮೃತ ನಂದಿನಿ ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷ ಡಾ.ಹರೀಶ್ ಬೊಟ್ಟಾರಿ ಚೇವಾರು ಅಧ್ಯಕ್ಷತೆ ವಹಿಸಿದ್ದರು. ಕೋಶಾಽಕಾರಿ ಪ್ರಕಾಶ್ ವೈ.ಪುತ್ತೂರು, ಪ್ರಧಾನ ಕಾರ್ಯದರ್ಶಿ ರೇವತಿ ಪೆರ್ನೆ, ಟ್ರಸ್ಟಿ ವನಿತಾ ವಿ.ಶೆಟ್ಟಿ, ಕಟೀಲು ಭಾಸ್ಕರ ದೇವಸ್ಯ, ಪ್ರಭಾಕರ ಪ್ರಭು ಉಪಸ್ಥಿತರಿದ್ದರು.
ನಾರಾಯಣ ಭಟ್ ಸ್ವಾಗತಿಸಿದರು. ಡಾ.ಸತೀಶ್ ಪುಣ್ಚಿತ್ತಾಯ ವಂದಿಸಿದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಕುಮಾರ್ ಕಾಪು ಸಹಕರಿಸಿದರು.
"

ಮನುಷ್ಯನ ಸ್ವಚ್ಛ ಪ್ರೀತಿಯಿಂದ ಎಲ್ಲವನ್ನು ಗೆಲ್ಲಬಹುದು. ಜಗತ್ತನ್ನು ಅಗೋಚರ ಶಕ್ತಿ ಆಳುತ್ತಿದ್ದು, ಇದರ ಪ್ರಭಾವವನ್ನು ಅರಿಯಬೇಕು. ಅವಧೂತರ ನಿತ್ಯಾನಂದರ ಲೀಲೆಯನ್ನು ಜತ್ತಿಗೆ ತೋರಿಸುವ ಕಾರ್ಯವಾಗಬೇಕು. ವಿಶಾಲವಾದ ಪ್ರಪಂಚದಲ್ಲಿ ಸಾಧನೆಗೆ ಬೇಕಾದಷ್ಟು ಅವಕಾಶಗಳಿವೆ. ನೇಪಾಳದ ದುಸ್ಥಿತಿ ಇಡೀ ಜಗತ್ತಿಗೆ ಬರುವ ಮೊದಲ ಎಚ್ಚೆತ್ತುಕೊಳ್ಳಬೇಕು.

— ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮಾಣಿಲ ಶ್ರೀಧಾಮ