ಕಳವಾರು ಎಂಬಲ್ಲಿ ತಲವಾರ್‌ನಿಂದ ದಾಳಿ
ಮಂಗಳೂರು: ನಗರದ ಹೊರವಲಯದ ಕಳವಾರು ಎಂಬಲ್ಲಿ ತಲವಾರ್‌ನಿಂದ ದಾಳಿ ನಡೆಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ಧಾರೆ.
ವಾಮಂಜೂರು ನಿವಾಸಿ ನವೀನ್ ದಾಳಿಗೆ ಮುಂದಾದ ಆರೋಪಿ. ಈತ ಕೆಲವು ತಿಂಗಳ ಹಿಂದೆ ವಿಚ್ಛೇದನ ಪಡೆದು ಪತ್ನಿಯಿಂದ ದೂರವಾಗಿ ಜೋಕಟ್ಟೆಯಲ್ಲಿ ವಾಸವಾಗಿದ್ದ. ಆರೋಪಿ ನವೀನ್ ಶುಕ್ರವಾರ ರಾತ್ರಿ ತಲವಾರು ಹಿಡಿದುಕೊಂಡು ಕಳವಾರು ನಿವಾಸಿ ದೇವಿಪ್ರಸಾದ್ ಮತ್ತು ಅವರ ಪೋಷಕರ ಮೇಲೆ ದಾಳಿಗೆ ಯತ್ನಿಸಿದ್ದಾನೆ.
ದೇವಿಪ್ರಸಾದ್ ಅವರು ತಕ್ಷಣ 112ಗೆ ಕರೆ ಮಾಡಿದ್ದಾರೆ. ಆಗ ಪರಾರಿಯಾಗುವ ವೇಳೆ ನವೀನ್ ಬೈಕ್‌ನಿಂದ ಬಿದ್ದಿದ್ದಾನೆ. ಪೊಲೀಸರು ಆತನನ್ನು ಬಂಧಿಸಿದ್ದಾರೆ. ದೇವಿಪ್ರಸಾದ್ ಅವರ ದೂರಿನ ಮೇರೆಗೆ ಕೊಲೆ ಯತ್ನ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ