ಬೆಳ್ಳಿಪ್ಪಾಡಿ ಗ್ರಾಮದ ಕಟಾರ ವ್ಯಾಪ್ತಿಯಲ್ಲಿ ಮೂರು ರಸ್ತೆಗಳ ಸಂಪರ್ಕ ಭಾಗದಲ್ಲಿ ಕಂಡು ಬಂದಿರುವ ವಾಮಾಚಾರ ಶಂಕೆಗೆ ಕಾರಣವಾದ ಮಾಂತ್ರಿಕ ಪ್ರಕ್ರಿಯೆ. 
ದಕ್ಷಿಣ ಕನ್ನಡ

ಕಟಾರದಲ್ಲಿ ಮಾಂತ್ರಿಕ ಕ್ರಿಯೆ : ವಾಮಾಚಾರ ಶಂಕೆ, ಸ್ಥಳೀಯರಲ್ಲಿ ಆತಂಕ

ಸೌಮ್ಯ ಆರ್
ಬೆಳ್ಳಿಪ್ಪಾಡಿ ಗ್ರಾಮದ ಕಟಾರದ ಅರಣ್ಯಕ್ಕೆ ಸಂಬಂಧಿಸಿದ ಸರ್ಕಾರಿ ಜಾಗದಲ್ಲಿ ಮೂರು ರಸ್ತೆಗಳು ಸೇರುವ ರಸ್ತೆ ಭಾಗದಲ್ಲಿ ಈ ಪ್ರಯೋಗ ನಡಿದಿದೆ. ಈ ಸುದ್ದಿ ಪ್ರಚಾರವಾಗುತ್ತಿದ್ದಂತೆಯೇ ಸ್ಥಳೀಯರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದು, ಶನಿವಾರ ರಾತ್ರಿ ವೇಳೆ ಯಾರೋ ಮೂರು ಮಾರ್ಗ ಸೇರುವಲ್ಲಿ ವಾಮಾಚಾರ ಮಾಡಿದ್ದಾರೆಂಬ ಆರೋಪ ವ್ಯಕ್ತವಾಗಿದೆ.