ಕಿನ್ನಿಗೋಳಿ: ಐಕಳ ಮಿತ್ತ ಕುರುಂಬಿಲ್ ಶಶಿಕಿರಣ್ ಮನೆಯಿಂದ ಶುಕ್ರವಾರ ಕೋಳಿಯೊಂದನ್ನು ಚಿರತೆ ಬೇಟೆಯಾಡಿದೆ. ದೃಶ್ಯ ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ. ಶಶಿಕಿರಣ್ ಮನೆಯಲ್ಲಿ ನಾಲ್ಕು ದನ, ಮೂರು ನಾಯಿಗಳಿದ್ದು, ದನ ಕೊಟ್ಟಿಗೆಯಲ್ಲಿತ್ತು. ನಾಯಿ ಗೂಡಿನಲ್ಲಿತ್ತು. ಚಿರತೆಗೆ ನಾಯಿ, ದನವನ್ನು ಬೇಟೆಯಾಡಲು ಸಾಧ್ಯವಾಗಿಲ್ಲ. ಈ ಕಾರಣದಿಂದ ಮನೆಯ ಹಿಂಬದಿಯಲ್ಲಿದ್ದ ಬುಟ್ಟಿಯ ಒಳಗಿದ್ದ ಕೋಳಿಯನ್ನು ಬೇಟೆಯಾಡಿದೆ. ಎರಡು ತಿಂಗಳ ಹಿಂದೆ ಕೂಡ ಇವರ ಕೋಳಿ ನಾಪತ್ತೆಯಾಗಿದ್ದು, ಚಿರತೆ ಕೊಂಡೊಯ್ದಿರುವ ಸಾಧ್ಯತೆ ಇದೆ ಎನ್ನುತ್ತಾರೆ ಶಶಿಕಿರಣ್. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.