ಪಾವೂರು ಗ್ರಾಮಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿದರು. ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶೈಲಾ ಕಾರಗಿ, ಉಪಾಧ್ಯಕ್ಷೆ ಮೆಹರುನ್ನಿಸಾ ಮೊದಲಾದವರಿದ್ದರು.
- ಜಲಜೀವನ್, ಕೆಎಸ್‌ಆರ್‌ಟಿಸಿ ವಿರುದ್ಧ ಅಸಮಾಧಾನ
- ಪಾವೂರು ಗ್ರಾಪಂ ಕೊನೆಯ ಗ್ರಾಮಸಭೆ
ಪಾವೂರು ಗ್ರಾಪಂ ಪ್ರಸಕ್ತ ಸಾಲಿನ ಕೊನೆಯ ಗ್ರಾಮಸಭೆ ಗ್ರಾಪಂ ಅಧ್ಯಕ್ಷ ಅಬ್ದುಲ್ ಮಜೀದ್ ಸಾತ್ಕೋ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದಿದ್ದು, ಜಲಜೀವನ್ ಮಿಷನ್ ಮತ್ತು ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಗೈರಿನ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಭೆಯ ಕೊನೆಯ ಹಂತದಲ್ಲಿ ಕೆಎಸ್‌ಆರ್‌ಟಿಸಿಗೆ ಧಿಕ್ಕಾರ ಕೂಗಿದ ಪ್ರಕರಣವೂ ನಡೆಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುನಿತಾ ಮಾತನಾಡಿ, ಕಳೆದೆರಡು ತಿಂಗಳಿಂದ ಔಷಧಗಳ ಕೊರತೆಯಿದ್ದು, ನಮಗೆ ಬರುವ ಅನುದಾನದಿಂದ ಅಗತ್ಯ ಮಾತ್ರೆಗಳನ್ನು ಖರೀದಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪಾವೂರು ಗ್ರಾಮದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಶಿಕ್ಷಣ ನೀಡಲಾಗುತ್ತಿದ್ದು, ನೂತನವಾಗಿ ತಲೆಎತ್ತಲಿರುವ ಖಾಸಗಿ ಶಾಲೆಗೆ ಅವಕಾಶ ನೀಡಬಾರದೆಂಬ ವಿಚಾರದಲ್ಲಿ ಪರ-ವಿರೋಧ ಅಭಿಪ್ರಾಯ ವ್ಯಕ್ತವಾಯಿತು.
ಸರ್ಕಾರಿ ಜಾಗದಲ್ಲಿ ಜೋಪಡಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸ್ಥಳದಲ್ಲೇ ಇಲ್ಲದವರ ಮೇಲೆ ಸಮುದಾಯ ಉಲ್ಲೇಖಿಸಿ ಕೇಸ್ ದಾಖಲಿಸಿರುವವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು.
ಗ್ರಾಮಸ್ಥರ ಸಮ್ಮುಖ ಕೆಲಸ ಹಸ್ತಾಂತರ
ಕಾಂಕ್ರೀಟ್ ರಸ್ತೆಗೆ ಪಂಚಾಯಿತಿ ನೀರು!
ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಪಂಚಾಯಿತಿ ಮುಖ್ಯ ನೀರು ಪೈಪ್ ಕತ್ತರಿಸಿ ನೀರು ಬಳಸಲಾಗಿದೆ. ಡೋರ್ ನಂಬರ್ ಇಲ್ಲದ ಮನೆಗೆ ನೀರಿನ ಸಂಪರ್ಕ ನೀಡದ ಪಂಚಾಯಿತಿ, ರಸ್ತೆ ಕಾಮಗಾರಿಗೆ ನೀರು ಬಳಸಲು ಅವಕಾಶ ನೀಡಿದ್ದೇಗೆ? ಗುತ್ತಿಗೆದಾರರು ಪಂಚಾಯಿತಿಗೆ ನೀಡಿದ ಶುಲ್ಕ ಎಷ್ಟು? ಎಂಬುದನ್ನೂ ಬಹಿರಂಗಪಡಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಗುತ್ತಿಗೆದಾರನಿಗೆ ಬಿಲ್ ಪಾವತಿ ಸಂದರ್ಭ ನೀರಿನ ಶುಲ್ಕ ಕಡಿತಗೊಳಿಸುವುದಾಗಿ ಪಿಡಿಒ ಶ್ರೀಕಾಂತ್ ಸಿಂಪಗಿರಿ ಭರವಸೆ ನೀಡಿದರು.
ಕೆಎಸ್‌ಆರ್‌ಟಿಸಿಗೆ ಧಿಕ್ಕಾರ!