ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ಹಿಂದಿ ಉತ್ಸವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಫ್ಲೇವಿಯಾ ಪಾಲ್ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್, ಹಿಂದಿ ಉಪನ್ಯಾಸಕಿ ದಿವ್ಯಲಕ್ಷ್ಮೀ ರೈ ಮತ್ತಿತರರಿದ್ದರು.
ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಭಾಷೆ ಮನುಷ್ಯನ ಭಾವನೆಗಳಿಗೆ ಧ್ವನಿ ನೀಡುವುದರ ಜತೆಗೆ ಹೃದಯದಿಂದ ಹೃದಯಕ್ಕೆ ಸಾಗುವ ಸೇತುವೆಯಾಗಿದ್ದು, ವೈವಿಧ್ಯಮಯ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಭಾಷೆಗಳ ನಡುವೆ ಸೌಹಾರ್ದದ ಕೊಂಡಿಯಾಗಿ ಹಿಂದಿ ಭಾಷೆ ಮಹತ್ತರ ಪಾತ್ರ ವಹಿಸುತ್ತಿದೆ ಎಂದು ಸಂಪನ್ಮೂಲ ವ್ಯಕ್ತಿ ಉಜಿರೆ ಎಸ್‌ಡಿಎಂ ಕಾಲೇಜಿನ ಹಿಂದಿ ಉಪನ್ಯಾಸಕಿ ಫ್ಲೇವಿಯಾ ಪಾಲ್ ಹೇಳಿದರು.
ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಹಿಂದಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ಅಧ್ಯಕ್ಷತೆ ವಹಿಸಿ, ಅಂಚೆ, ತಂತಿ, ಬ್ಯಾಂಕ್‌ಗಳು, ರಕ್ಷಣಾ ಸೇವೆಗಳಲ್ಲಿ ಹಿಂದಿ ಭಾಷೆ ಅಗತ್ಯವಾಗಿದ್ದು, ಅದು ಮನವನ್ನು ಮುಟ್ಟುವ ಭಾಷೆ ಎಂದರು.
ಎಕ್ಸಲೆಂಟ್ ಕಾಲೇಜಿನ ಹಿಂದಿ ಉಪನ್ಯಾಸಕಿ ದಿವ್ಯಲಕ್ಷ್ಮೀ ರೈ ಅತಿಥಿ ಪರಿಚಯ, ಪ್ರಸ್ತಾವನೆಗೈದರು. ಉಪಪ್ರಾಂಶುಪಾಲ ಸುನದ್ ರಾಜ್ ಜೈನ್, ಮುಖ್ಯ ಶಿಕ್ಷಕ ಶಿವಪ್ರಸಾದ್ ಭಟ್, ಶುಭ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಕವ್ವಾಲಿ, ಹಿಂದಿ ಗೀತೆ, ಗಜಲ್, ಹಿಂದಿ ನೃತ್ಯಗಳನ್ನು ಪ್ರಸ್ತುತಪಡಿಸಿದರು. ಹಿತಾರ್ಥ್ ಕಡಬ ಕಾರ್ಯಕ್ರಮ ನಿರೂಪಿಸಿದರು. ಕೀರ್ತನ್ ಕುಮಾರ್ ಸ್ವಾಗತಿಸಿದರು. ಅನುಷಾ ವಂದಿಸಿದರು. ಹಿಂದಿ ಅಧ್ಯಾಪಕರಾದ ಸೌಮ್ಯಾ, ರಮ್ಯಾ ಉಪಸ್ಥಿತರಿದ್ದರು.