ತಲೆತಲಾಂತರದಿಂದ ನಡೆದು ಬಂದ ಸಂಪ್ರದಾಯ. 2003ರಿಂದ ಕುಮಾರಪರ್ವತಕ್ಕೆ ಹೋಗಿ ಪೂಜೆ ನೆರವೇರಿಸುತ್ತಿದ್ದೇನೆ. ಶುದ್ಧ ಷಷ್ಠಿಯಂದು ಬ್ರಹ್ಮರಥೋತ್ಸವ ನಡೆದರೆ ಬಹುಳ ಷಷ್ಠಿಯಂದು ಕುಮಾರಪರ್ವತದಲ್ಲಿ ಪೂಜೆ ನಡೆಯುತ್ತದೆ. ಕುಕ್ಕೆ ಕ್ಷೇತ್ರಕ್ಕೆ ಮತ್ತು ಕುಮಾರಪರ್ವತಕ್ಕೆ ಸಂಬಂಧವಿದೆ ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿದೆ. ಆದುದರಿಂದ ತಲೆತಲಾಂತರದಿಂದ ನಡೆದು ಬಂದ ಸಂಪ್ರದಾಯವನ್ನು ಪಾಲಿಸುತ್ತಿದ್ದೇವೆ. ಬಹುಳ ಷಷ್ಠಿಯಂದು ಕುಮಾರಪರ್ವತಕ್ಕೆ ತೆರಳಿ ಅಲ್ಲಿರುವ ಕುಮಾರಪಾದಕ್ಕೆ ಪೂಜೆ ನೆರವೇರಿಸಿ ಅಭಿಷೇಕ, ಅರ್ಚನೆ ನೆರವೇರಿಸಲಾಗುತ್ತದೆ.