ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಕರ ಸಂಕ್ರಮಣ ಪ್ರಯುಕ್ತ ಗುರುವಾರ ಸಂಕ್ರಾಂತಿ ರಥೋತ್ಸವ ನೆರವೇರಿತು.
ರಥೋತ್ಸವ ಪೂರೈಸಿ ಆಗಮಿಸಿದ ದೇವರಿಗೆ ಗೋಪುರದ ಬಳಿ ನಿವಾಳಿ ಸಮರ್ಪಿಸಲಾಯಿತು. ದೇವಳದ ಆಡಳಿತ ವರ್ಗಕ್ಕೆ ಪ್ರಸಾದ ನೀಡಲಾಯಿತು. ಹೊರಾಂಗಣದಲ್ಲಿರುವ ದ್ವಾದಶಿ ಮಂಟಪದಲ್ಲಿ ಕುಕ್ಕೆ ಸುಬ್ರಹ್ಮಣ್ಯನಿಗೆ ಪೂಜೆ ನೆರವೇರಿತು. ಬುಧವಾರ ರಾತ್ರಿ ಕುಕ್ಕೆಲಿಂಗ ದೇವರ ಜಾತ್ರೋತ್ಸವ ಪ್ರಯುಕ್ತ ದೇವರ ಉತ್ಸವಾದಿಗಳು ಹೊರಾಂಗಣದಲ್ಲಿ ನೆರವೇರಿತು. ಕಾಚುಕುಜುಂಬ ದೈವದ ನಡಾವಳಿ ನಡೆಯಿತು. ನಂತರ ದೇವರ ಬಂಡಿ ರಥೋತ್ಸವ ಹಾಗೂ ಪಾಲಕಿ ಉತ್ಸವ ನೆರವೇರಿತು.