ಕುಡುಪು ರಾಜಗೋಪುರಂ ನೀಲಿನಕ್ಷೆ. 
ದಕ್ಷಿಣ ಕನ್ನಡ

ಕುಡುಪು ರಾಜಗೋಪುರ ನೀಲನಕ್ಷೆ ಸಿದ್ಧ : ಕೇರಳ ಶೈಲಿಯಲ್ಲಿ ಭವ್ಯವಾಗಿ ನಿರ್ಮಾಣ

ಪ್ರಮುಖ ಮುಖ್ಯಾಂಶಗಳು

  • ಹಳೇ ಗೋಪುರ ಹೆದ್ದಾರಿ ವಿಸ್ತರಣೆಗೆ ತೆರವು
  • ಸುಮಾರು 2 ಕೋ. ರೂ. ವೆಚ್ಚದಲ್ಲಿ ರಾಜಗೋಪುರ ನಿರ್ಮಾಣ
ಕುಡುಪು ದೇವಸ್ಥಾನದ ಎದುರಿದ್ದ ಸುಮಾರು 100 ವರ್ಷಗಳಷ್ಟು ಹಳೆಯದಾದ ಪಡಸಾಲೆಯಂತಹ ಗೋಪುರವನ್ನು 40 ವರ್ಷಗಳ ಹಿಂದೆ ಕೆಡವಿ, 1984-85ರ ಹೊತ್ತಿಗೆ ಮೂರು ಶಿಖರಗಳಿದ್ದ ರಾಜಗೋಪುರ ನಿರ್ಮಿಸಲಾಗಿತ್ತು. ಹೆದ್ದಾರಿ ವಿಸ್ತರಣೆ ಕಾಮಗಾರಿ ಹಿನ್ನೆಲೆಯಲ್ಲಿ ಈ ರಾಜಗೋಪುರ ನೆಲಸಮಗೊಂಡಿದೆ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಹೊಸದಾಗಿ ನಿರ್ಮಾಣಗೊಳ್ಳಲಿರುವ ರಾಜಗೋಪುರದ ನೀಲಿನಕ್ಷೆ ಹಾಗೂ ಯೋಜನಾ ವರದಿ ಈಗಾಗಲೇ ರಾಜ್ಯ ಮುಜರಾಯಿ ಇಲಾಖೆಗೆ ಕಳುಹಿಸಿದೆ. ಪಿಡಬ್ಲುೃಡಿ, ಮುಜರಾಯಿ ಇಲಾಖೆಯಿಂದ ಹಸಿರು ನಿಶಾನೆ ಸಿಕ್ಕಿದ ಬಳಿಕ ಕಾಮಗಾರಿಗಾಗಿ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಹೆದ್ದಾರಿ ಪಕ್ಕದಲ್ಲಿ ಹಳೆಯ ರಾಜಗೋಪುರವಿದ್ದ ಜಾಗಕ್ಕಿಂತ ಅನತಿ ದೂರದಲ್ಲಿ ನಿರ್ಮಾಣಗೊಳ್ಳಲಿರುವ ಹೊಸ ರಾಜಗೋಪುರ ಹೆದ್ದಾರಿಗಿಂತ ಮೇಲ್ಭಾಗಕ್ಕೆ ಕಾಣುವಂತಿರುತ್ತದೆ.

ಅಂಗಡಿ ವಿಚಾರ ನಿರ್ಧಾರ ಬಾಕಿ

ಪ್ರಗತಿಯಲ್ಲಿ ಅಂಡರ್‌ಪಾಸ್