ಕಿಡ್ನಿ ರೋಗಿಗಳ ಕುಟುಂಬಕ್ಕೆ ಸಹಾಯಧನ ಹಾಗೂ ರಂಝಾನ್ ಪಡಿತರ ಕಿಟ್ ವಿತರಣಾ ಕಾರ್ಯಕ್ರಮ ನಡೆಯಿತು. ಮನಪಾ ಮಾಜಿ ಸದಸ್ಯ ಸಂಶುದ್ದೀನ್, ಸಂಘದ ಅಧ್ಯಕ್ಷ ಜೆ.ಮಹಮ್ಮದ್ ಇಸ್ಹಾಕ್, ಉಪಾಧ್ಯಕ್ಷ ಅಹ್ಮದ್ ಬಾವ ಬಜಾಲ್, ಮಂಗಳೂರು ತಾಪಂ ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಮಲಾರ್ ಇನ್ನಿತರರು ಉಪಸ್ಥಿತರಿದ್ದರು.  
ದಕ್ಷಿಣ ಕನ್ನಡ

ಬಡ ಕುಟುಂಬಗಳನ್ನು ಗುರುತಿಸಿ ಸಹಾಯಹಸ್ತ : ಸಂಶುದ್ದೀನ್ ಶ್ಲಾಘನೆ

ಮಂಗಳೂರು ಉತ್ತರ ಧಕ್ಕೆ ಕರಾವಳಿ ಅಲ್ಪಸಂಖ್ಯಾತ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಆಶ್ರಯದಲ್ಲಿ ‘ಬಹರ್ ಎ ನೂರ್’ ಸಭಾಂಗಣದಲ್ಲಿ ಭಾನುವಾರ ಕಿಡ್ನಿ ರೋಗಿಗಳ ಕುಟುಂಬಕ್ಕೆ ಸಹಾಯಧನ ಹಾಗೂ ರಂಜಾನ್ ಪಡಿತರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಾತಿ, ಧರ್ಮ ನೋಡದೆ 54 ಕಿಡ್ನಿ ರೋಗಿಗಳಿಗೆ ಪ್ರತಿ ತಿಂಗಳು ಡಯಾಲಿಸ್‌ಗಾಗಿ ತಲಾ ಎರಡು ಸಾವಿರ ಸಹಾಯಧನ ನೀಡಲಾಗುತ್ತಿದ್ದು, ರಂಜಾನ್ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ನಾಲ್ಕು ಸಾವಿರ ಸಹಾಯಧನ ಹಾಗೂ ಒಂದು ತಿಂಗಳ ಪಡಿತರ ನೀಡಲಾತ್ತಿದೆ. ಕ್ಯಾನ್ಸರ್ ಹಾಗೂ ಇತರ ಕಾಯಿಲೆಗಳಿಗೂ ನೆರವು ನೀಡಲಾಗುತ್ತಿದೆ.