ಕಿನ್ನಿಗೋಳಿ ಪಪಂಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಪದಗ್ರಹಣ ಸಮಾರಂಭ ಶುಕ್ರವಾರ ನಡೆಯಿತು. ಶಾಸಕ ಉಮಾನಾಥ ಕೋಟ್ಯಾನ್, ಅಧ್ಯಕ್ಷ ಗುರುರಾಜ್ ಮಲ್ಲಿಗೆಯಂಗಡಿ, ಉಪಾಧ್ಯಕ್ಷೆ ಪದ್ಮಲತಾ ರಾವ್ ಮೊದಲಾದವರಿದ್ದರು.  
ದಕ್ಷಿಣ ಕನ್ನಡ

ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ಪದಗ್ರಹಣ

ಅಧ್ಯಕ್ಷರಾಗಿ ಗುರುರಾಜ್ ಮಲ್ಲಿಗೆಯಂಗಡಿ, ಉಪಾಧ್ಯಕ್ಷರಾಗಿ ಪದ್ಮಲತಾ ರಾವ್ ಅಧಿಕಾರ ಸ್ವೀಕರಿಸಿದರು. ಪಂಚಾಯಿತಿ ಸದಸ್ಯರು, ಅಧಿಕಾರಿಗಳು ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಶುಭಹಾರೈಸಿದರು.
ಬಳಿಕ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಕಿನ್ನಿಗೋಳಿ, ಮೆನ್ನಬೆಟ್ಟು, ಕಟೀಲು ಗ್ರಾಪಂಗಳನ್ನು ಸೇರಿಸಿ ಅಭಿವೃದ್ಧಿಪಡಿಸುವ ಸದುದ್ದೇಶದಿಂದ ಕಿನ್ನಿಗೋಳಿ ಪಪಂ ಆಗಿ ಮೇಲ್ದರ್ಜೆಗೇರಿಸಲಾಗಿದೆ. ಪಂಚಾಯಿತಿ ಎಲ್ಲ ಸದಸ್ಯರು ರಾಜಕೀಯ ಮರೆತು ಅಭಿವೃದ್ಧಿಯಲ್ಲಿ ಕೈಜೋಡಿಸಿ ಮಾದರಿ ಪಂಚಾಯಿತಿ ಆಗಿ ಪರಿವರ್ತಿಸಿ ಎಂದರು.
ಪಂಚಾಯಿತಿ ಸದಸ್ಯರಾದ ಲೋಕಯ್ಯ ಸಾಲಿಯಾನ್ ಕೊಂಡೇಲ, ಶೈಲೇಶ್ ಅಂಚನ್, ದಾಮೋದರ ಶೆಟ್ಟಿ, ಮಲ್ಲಿಕಾ ಪ್ರಕಾಶ್, ಪ್ರಣಿಕ್ ಕಿನ್ನಿಗೋಳಿ, ಮಲ್ಲಿಕಾ, ಧನುಷ್, ಗೋಪಾಲಕೃಷ್ಣ, ಸಂತಾನ್ ಡಿಸೋಜ, ಪ್ರಕಾಶ್ ಕಿನ್ನಿಗೋಳಿ, ಬಿಜೆಪಿ ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಈಶ್ವರ್ ಕಟೀಲ್, ಸುನೀಲ್ ಅಳ್ವ, ಭುವನಾಭಿರಾಮ ಉಡುಪ, ದಿವಾಕರ ಕರ್ಕೇರ, ಕೇಶವ ಕರ್ಕೇರ, ಸ್ಟಾೃನಿ ಪಿಂಟೋ, ತಿಲಕ್ ರಾಜ್ ಶೆಟ್ಟಿ, ಆಶಾ ರತ್ನಾಕರ ಸುವರ್ಣ, ಸುಶಾಂತ್ ಮಲ್ಲಿಗೆಯಂಗಡಿ, ಗಂಗಾಧರ ಎಳತ್ತೂರು, ಮುಖ್ಯಾಧಿಕಾರಿ ಜಯಶಂಕರ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.