ಕೇಶವ ಬಂಗೇರ ಅವರಿಗೆ ಮಂಗಳೂರು ವಿವಿಯಿಂದ ಡಾಕ್ಟ್ರರೇಟ್ ಪದವಿ 
ದಕ್ಷಿಣ ಕನ್ನಡ

ಕೇಶವ ಬಂಗೇರ ಅವರಿಗೆ ಮಂಗಳೂರು ವಿವಿಯಿಂದ ಡಾಕ್ಟ್ರರೇಟ್ ಪದವಿ

ಮಂಗಳೂರು: ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿವಿ ಇಲ್ಲಿನ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಮಾರ್ಗದರ್ಶನದಲ್ಲಿ ಶ್ರೀ ನಾರಾಯಣ ಗುರು ವಿದ್ಯಾಸಂಸ್ಥೆಯ ಉಪನ್ಯಾಸಕ ಕೇಶವ ಬಂಗೇರ ಬಿ. ಅವರು ಮಂಗಳೂರು ವಿಶ್ವವಿದ್ಯಾಲಯಕ್ಕೆ ಮಂಡಿಸಿದ ತುಳು ರಂಗಭೂಮಿ ಮತ್ತು ಸಿನೆಮಾ: ಪ್ರೇರಣೆ ಮತ್ತು ಅನನ್ಯತೆ ಎಂಬ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.
ಬೆಳ್ತಂಗಡಿಯ ಗೇರುಕಟ್ಟೆ ನಿವಾಸಿಯಾಗಿರುವ ಇವರು ಎಬಿವಿಪಿ ವಿದ್ಯಾರ್ಥಿ ಸಂಘಟನೆಯ ರಾಜ್ಯ ನಾಯಕರಾಗಿ ಗುರುತಿಸಿ ಯುವ ಸಮೂಹಕ್ಕೆ ಮಾರ್ಗದರ್ಶಕರಾಗಿದ್ದಾರೆ. ಖ್ಯಾತ ವಾಗ್ಮಿಗಳಾಗಿರುವ ಇವರು ರಾಜ್ಯದ ಹಲವಡೆ ಪ್ರೇರಣಾದಾಯಕ ಉಪನ್ಯಾಸ ನೀಡುವ ಮೂಲಕ ಯುವಜಾಗೃತಿ ಮೂಡಿಸುತ್ತಿದ್ದಾರೆ.