ಕುಸಿದು ಬಿದ್ದಿರುವ ಮನೆ ಎದುರು ಐತ್ತೆ ಅವರ ಕುಟುಂಬ. 
ದಕ್ಷಿಣ ಕನ್ನಡ

ಕಜಂಪಾಡಿ ಸೆಟ್ಟಿಬೈಲ್ ಐತ್ತೆ ಕುಟುಂಬ ಬೀದಿಪಾಲು : ನನಸಾಗದ ಹೊಸ ಮನೆ ಕನಸು

ಪ್ರಮುಖ ಮುಖ್ಯಾಂಶಗಳು

  • ಅತಂತ್ರ ಸ್ಥಿತಿಯಲ್ಲಿ ಕುಟುಂಬ
  • ಮನವಿಗೆ ಸಿಗದ ಸ್ಪಂದನೆ
  • ಅತಂತ್ರ ಸ್ಥಿತಿಯಲ್ಲಿ ಕುಟುಂಬ
ಎಣ್ಮಕಜೆ ಪಂಚಾಯಿತಿ ಹತ್ತನೇ ವಾರ್ಡು ಕಜಂಪಾಡಿ ಸೆಟ್ಟಿಬೈಲ್ ನಿವಾಸಿ, ಐತ್ತೆ ಅವರ ಹೊಸ ಮನೆ ಕನಸು ಇನ್ನೂ ನನಸಾಗಿಲ್ಲ. ಹದಿನೈದು ವರ್ಷಕ್ಕೂ ಹಿಂದೆ ನಿರ್ಮಿಸಿದ ಶಿಥಿಲ ಹೆಂಚುಹಾಸಿನ ಮನೆಯೂ ಕುಸಿದು ಬಿದ್ದಿರುವುದರಿಂದ ಕುಟುಂಬ ಅತಂತ್ರ ಸ್ಥಿತಿಯಲ್ಲಿದೆ.
ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ ಐತ್ತೆ ಅವರ ಕುಟುಂಬ ಇದೇ ಶಿಥಿಲ ಮನೆಯಲ್ಲಿ ವಾಸಿಸುತ್ತಿದ್ದು, ಏಕಾಏಕಿ ಮನೆ ಕುಸಿದಿರುವುದರಿಂದ ಮನೆಯೊಳಗಿದ್ದವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು. ಅಲ್ಲಲ್ಲಿ ಹೆಂಚು ಒಡೆದಿದ್ದ ಹಿನ್ನೆಲೆಯಲ್ಲಿ ಟಾರ್ಪಾಲ್ ಹೊದಿಕೆಯೊಂದಿಗೆ ನೀರು ಒಳಗೆ ಬೀಳದಂತೆ ದುರಸ್ತಿಪಡಿಸಿದ್ದರೂ, ಮಹಡಿ ಶಿಥಿಲಗೊಂಡು ಕುಸಿದು ಬಿದ್ದಿದೆ. ಐತ್ತೆ ಪತಿ ಬಾಬು ಕೆಲವು ವರ್ಷಗಳ ಹಿಂದೆ ಅವರನ್ನು ತೊರೆದು ಬೇರೆ ವಿವಾಹವಾಗಿದ್ದು, ನಂತರ ಪುತ್ರಿ ಜತೆ ವಾಸಿಸತೊಡಗಿದ್ದಾರೆ.

ಸರ್ಕಾರಿ ಯೋಜನೆಗಳಿಗೆ ಅಣಕ!

ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಅಭಿವೃದ್ಧಿಗಾಗಿ ಸರ್ಕಾರದ ಹತ್ತು ಹಲವು ಯೋಜನೆಗಳು ಜಾರಿಯಲ್ಲಿದ್ದರೂ, ಬಡ ಕುಟುಂಬವೊಂದಕ್ಕೆ ಸೂರು ಲಭ್ಯವಾಗದಿರುವುದು ಸರ್ಕಾರಿ ಯೋಜನೆಗಳನ್ನು ಅಣಕಿಸುವಂತಿದೆ. ಈಗಾಗಲೇ ಅಸ್ತಿತ್ವಕ್ಕೆ ಬಂದಿರುವ ತ್ರಿಸ್ತರ ಪಂಚಾಯಿತಿ ಜನಪ್ರತಿನಿಧಿಗಳು ಐತ್ತೆ ಕುಟುಂಬಕ್ಕೆ ಸೂಕ್ತ ಸೂರು ಕಲ್ಪಿಸಿಕೊಡುವಲ್ಲಿ ಮುಂದಾಗಬೇಕಾಗಿದೆ.

ಐತ್ತೆ ಅವರ ಮನೆ ಅತ್ಯಂತ ಶಿಥಿಲಾವಸ್ಥೆಯಲ್ಲಿದ್ದು, ಈ ಕುಟುಂಬಕ್ಕೆ ದುರಸ್ತಿ ಬದಲು ಹೊಸ ಮನೆ ಮಂಜೂರಾಗಿ ಲಭಿಸಬೇಕಾಗಿದೆ. ಮನೆಯ ಶೋಚನೀಯಾವಸ್ಥೆ ಬಗ್ಗೆ ಪಂಚಾಯಿತಿ ಆಡಳಿತದ ಗಮನಕ್ಕೆ ತಂದು ಸೂಕ್ತ ಸೂರಿನ ವ್ಯವಸ್ಥೆ ಕಲ್ಪಿಸುವ ಬಗ್ಗೆ ಶ್ರಮ ವಹಿಸಲಾಗುವುದು.

ಐತ್ತೆ ಅವರ ಟರ್ಪಾಲ್ ಹೊದಿಸಿದ್ದ ಮನೆ.