ಕಥಾಬಿಂದು ಸಾಹಿತ್ಯ ಸಂಭ್ರಮ 2026 ಕಾರ್ಯಕ್ರಮದಲ್ಲಿ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಕೃತಿಗಳನ್ನು ಬಿಡುಗಡೆಗೊಳಿಸಿದರು. 
ದಕ್ಷಿಣ ಕನ್ನಡ

ಪುಸ್ತಕಗಳ ಪ್ರಕಟಣೆಗೆ ಸಹಕಾರವೇ ಪ್ರೋತ್ಸಾಹ : ಡಾ.ಹರಿಕೃಷ್ಣ ಪುನರೂರು

ಬಂಟ್ವಾಳ: ಸಾಹಿತ್ಯ ಜನಮನವನ್ನು ತಲುಪಬೇಕು. ಪುಸ್ತಕ ಓದುವ ಪ್ರವೃತ್ತಿ ಬೆಳೆಯಬೇಕು. ಪುಸ್ತಕಗಳನ್ನು ಪ್ರಕಟಣೆಗೆ ಸಹಕಾರ ನೀಡುವ ಮೂಲಕ ಬರೆಯುವವರಿಗೆ ಪ್ರೋತ್ಸಾಹ ನೀಡಬೇಕು ಎಂದು ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ಹೇಳಿದರು.
ಕಥಾಬಿಂದು ಪ್ರಕಾಶನ, ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ನೇತ್ರಾವತಿ ಸಂಗಮ ಮತ್ತು ಕ.ಚು.ಸಾ.ಪ. ಬಂಟ್ವಾಳ ತಾಲೂಕು ಸಮಿತಿ ಆಶ್ರಯದಲ್ಲಿ ಭಯಂಕೇಶ್ವರ ದೇವಸ್ಥಾನ ಸಭಾಂಗಣದಲ್ಲಿ ಕಥಾಬಿಂದು ಸಾಹಿತ್ಯ ಸಂಭ್ರಮ-26 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸೀನಿಯರ್ ಛೇಂಬರ್ ಅಧ್ಯಕ್ಷ ತೇವು ತಾರಾನಾಥ ಕೊಟ್ಟಾರಿ, ಹಿರಿಯ ಸಾಹಿತಿ ಡಾ.ಕೊಳ್ಚಪ್ಪೆ ಗೋವಿಂದ ಭಟ್, ಕ.ಚು.ಸಾ.ಪ ಬಂಟ್ವಾಳ ತಾಲೂಕು ಅಧ್ಯಕ್ಷ ರವೀಂದ್ರ ಕುಕ್ಕಾಜೆ, ಕವಯಿತ್ರಿ ಶಾಂತಾ ಪುತ್ತೂರು ಮಾತನಾಡಿದರು.

ರಾಜ್ಯಮಟ್ಟದ ಕವಿಗೋಷ್ಠಿ

ಸಾಹಿತಿ ಜಯಾನಂದ ಪೆರಾಜೆ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಾ.ಮ.ಸತೀಶ್ ಬೆಂಗಳೂರು, ಶಾರದಾ ಮೊಳೆಯಾರ್, ಪ್ಲಾವಿಯಾ ಅಲ್ಬುಕರ್ಕ್ ಪುತ್ತೂರು, ಗೀತಾ ಕೊಂಕೋಡಿ, ಸೌಮ್ಯಾ ಆರ್.ಶೆಟ್ಟಿ, ರೋಹಿಣಿ ಆಚಾರ್ಯ ಪುತ್ತೂರು, ಮಲ್ಲಿಕಾರ್ಜುನ ಕೆರೊಡಿ, ಸವಿತಾ ಕರ್ಕೇರ ಕಾವೂರು, ಸುರೇಶ ಎಂ.ಹರಿಜನ, ಅಶ್ವಿಜ ಶ್ರೀಧರ, ಮಮತಾ ಡಿ.ಕೆ. ಸುರೇಶ್ ಕುಮಾರ್ ಚಾರ್ವಕ, ಜಯರಾಮ ಪಡ್ರೆ, ಶಿಲ್ಪಾ ಎನ್., ವಿಂದ್ಯಾ ಕುದ್ಪಾಜೆ, ಶ್ವೇತಾ ಡಿ.ಬಡಗಬೆಳ್ಳೂರು, ರಮೇಶ್ ಮೆಲ್ಕಾರ್, ರಜನಿ ಚಿಕ್ಕಯ್ಯಮಠ ಮೊದಲಾದವರು ಸ್ವರಚಿತ ಕವನ ವಾಚಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಪತ್ರಕರ್ತೆ ವಾಣಿ ರುಘುನಾಥ್ ಮುಂಬೈ, ಡಾ.ಜೋಸೆಫ್ ಲೋಬೋ, ಯಾದವ ಹರೀಶ್, ರಕ್ತದಾನಿ ಮಂಜು ಮೈಸೂರು, ಪೂರ್ಣಿಮಾ ಗುರುಮೂರ್ತಿ, ಅನಿಲ್ ಮೆಂಡೋನ್ಸಾ, ಮಂಜುನಾಥ ಕೆ.ಮೈಸೂರು, ಕುಮಾರ್, ಅರ್ನಾ ಎಸ್. ಭಟ್ ಅವರನ್ನು ಕನ್ನಡ ರತ್ನ ರಾಜ್ಯ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕಥಾ ಬಿಂದು ಪ್ರಕಾಶನದ ಪಿ.ವಿ.ಪ್ರದೀಪ್ ಕುಮಾರ್ ಸ್ವಾಗತಿಸಿದರು. ಶೋಭಾ ದಿನೇಶ್ ಉದ್ಯಾವರ, ಗೀತಾ ಕೊಂಕೋಡಿ ನಿರೂಪಿಸಿದರು. ಡಾ.ವಾಣಿಶ್ರೀ ಕಾಸರಗೋಡು ಸಾರಥ್ಯದಲ್ಲಿ ಸಾಹಿತ್ಯ ಗಾನ ನೃತ್ಯ ವೈಭವ ತಂಡ ಮತ್ತು ಸುಭಾಷಿಣಿ ಬೇಕೂರು ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು. ಶಿಕ್ಷಕಿ ರೇಖಾ ರಾವ್ ವಂದಿಸಿದರು.

ಕೃತಿಗಳ ಬಿಡುಗಡೆ